More

    ಅಧ್ಯಯನಕ್ಕೆ ಪೂರಕವಾಗಲಿ ಸಾಮಾಜಿಕ ಜಾಲ ತಾಣಗಳ ಬಳಕೆ

    ಚಿತ್ರದುರ್ಗ: ಸಾಮಾಜಿಕ ಜಾಲತಾಣಗಳ ಬಳಕೆಯಲ್ಲಿ ಸ್ವಯಂ ನಿಯಂತ್ರಣವಿರಲಿ ಎಂದು ದಾವಣಗೆರೆ ವಿವಿ ಕುಲಸಚಿವ ಡಾ.ಕೆ.ಶಿವಶಂಕರ್ ಅ ವರು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.

    ನಗರದ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನಲ್ಲಿ ಬುಧವಾರ ಏರ್ಪಡಿಸಿದ್ದ ಸಾಂಸ್ಕೃತಿಕ, ಎನ್‌ಎಸ್‌ಎಸ್,ಯೂತ್‌ರೆಡ್‌ಕ್ರಾಸ್,ಕ್ರೀಡಾ ಚಟುವಟಿಕೆಗಳ ಸಮಾರೋಪ ಹಾಗೂ ತೃತೀಯ ವರ್ಷದ ಪದವಿ ವಿದ್ಯಾರ್ಥಿಗಳಿಗೆ ಬೀ ಳ್ಕೊಡುಗೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಅವರು,ಸಾಮಾಜಿಕ ಜಾಲ ತಾಣಗಳು ಅಧ್ಯಯನಕ್ಕೆ ಪೂರಕವಾಗಿ ಸದ್ಭಳಕೆ ಆಗ ಬೇಕು,ಅವುಗಳನ್ನು ಬಳಸುವ ವೇಳೆ ಎಚ್ಚರಿಕೆಯ ಅಗತ್ಯವೂ ಇದೆ. ಸೂಕ್ತ ಯೋಜನೆಗಳನ್ನು ರೂಪಿಸಿಕೊಳ್ಳುವ ಮೂಲಕ ಅಧ್ಯಯನದ ಗುರಿ ತಲುಪ ಬೇಕೆಂದರು.

    ಅಧ್ಯಕ್ಷತೆ ವಹಿಸಿದ್ದ ಎಸ್‌ಆರ್‌ಎಸ್ ಸಮೂಹ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಬಿ.ಎ.ಲಿಂಗಾರೆಡ್ಡಿ ಅವರು ಕಳೆದ ಶೈಕ್ಷಣಿಕ ಸಾಲಿನ ಪರೀಕ್ಷೆಗಳಲ್ಲಿ ರ‌್ಯಾಂಕ್ ಪಡೆದ ವಿದ್ಯಾರ್ಥಿಗಳನ್ನ ಗೌರವಿಸಿ ಮಾತನಾಡಿದರು. ಈ ವಿದ್ಯಾರ್ಥಿಗಳ ಸಾಧನೆ ಕಿರಿಯರಿಗೆ ಸ್ಫೂರ್ತಿಯಾಬೇಕು,ಅವರ ಈ ಸಾಧನೆ ಹಾದಿಯಲ್ಲಿ ನೀವು ಕೂಡ ಸಾಗಬೇಕೆಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
    ಸಂಸ್ಥೆ ಆಡಳಿತಾಧಿಕಾರಿ ಡಾ.ಟಿ.ಎಸ್.ರವಿ,ಪ್ರಾಚಾರ‌್ಯೆ ಎ.ಜಿ.ಸಾಧನಾ,ಎನ್‌ಎಸ್‌ಎಸ್ ಸಂಯೋಜನಾಧಿಕಾರಿ ಕೆ.ದೇವೇಂದ್ರಪ್ಪ,ಡಾ. ರಾಘವೇಂದ್ರ,ಪ್ರಸನ್ನಕುಮಾರ್,ಶ್ರೀಕಾಂತ್,ರಮೇಶ್ ಮತ್ತಿತರರು ಇದ್ದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts