More

    ಅಧಿಕಾರಿ ಮನೆ ಮೇಲೆ ಎಸಿಬಿ ದಾಳಿ

    ಕಲಬುರಗಿ: ಆದಾಯಕ್ಕಿಂತ ಹೆಚ್ಚಿನ ಆಸ್ತಿ ಹೊಂದಿದ್ದಾರೆ ಎಂಬ ಮಾಹಿತಿಯಂತೆ ಎಸಿಬಿ ಅಧಿಕಾರಿಗಳು ಮಂಗಳವಾರ ಬೆಳ್ಳಂಬೆಳಗ್ಗೆ ದೇವರಾಜ ಅರಸು ಅಭಿವೃದ್ಧಿ ನಿಗಮದ ಜಿಲ್ಲಾ ವ್ಯವಸ್ಥಾಪಕ ಜಗದೇವಪ್ಪ ಮುಗುಟಾ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ.
    ಜಗದೇವಪ್ಪ ನಿಗಮದ ಕಲಬುರಗಿ ಮತ್ತು ಯಾದಗಿರಿ ಜಿಲ್ಲೆ ವ್ಯವಸ್ಥಾಪಕರಾಗಿದ್ದಾರೆ. ಎರಡೂ ನಗರಗಳಲ್ಲಿರುವ ನಿಗಮದ ಕಚೇರಿ ಮತ್ತು ಕಲಬುರಗಿಯಲ್ಲಿರುವ ಮನೆಯಲ್ಲಿ ಎಸಿಬಿ ಅಧಿಕಾರಿಗಳ ತಂಡ ದಾಖಲೆಗಳ ಪರಿಶೀಲನೆ ನಡೆಸಿದ್ದು, ಬುಧವಾರವೂ ತಪಾಸಣೆ ಮುಂದುವರಿಯಲಿದೆ.
    ಸೇಡಂ ರಸ್ತೆ ಪೂಜಾ ಕಾಲನಿಯಲ್ಲಿ ಬೃಹತ್ ಬಂಗಲೆ, ಕಾರು, ಬೈಕ್, ಚಿನ್ನಾಭರಣ, ಸ್ವಲ್ಪ ನಗದು ಪತ್ತೆಯಾಗಿದೆ. ಚಂದ್ರಶೇಖರ ಬಿಲಗುಂದಿ ವೃತ್ತ (ಖರ್ಗೆ ಸರ್ಕಲ್) ಬಳಿಯ ಜೈ ಹನುಮಾನ ಟ್ರೇಡರ್ಸ್ ಮೇಲೂ ದಾಳಿ ನಡೆಸಿ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಬ್ಯಾಂಕ್ ಖಾತೆಗಳು, ಠೇವಣಿ ಕುರಿತು ಸ್ವಂತ ಊರು ಚಿತ್ತಾಪುರ ತಾಲೂಕಿನ ಮುಗುಟಾದಲ್ಲಿ ಒಂದಿಷ್ಟು ಆಸ್ತಿ ಇದೆಯೇ ಇಲ್ಲವೇ ಎಂಬ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ.
    ಎಸಿಬಿ ಡಿವೈಎಸ್ಪಿಗಳಾದ ಗುರುನಾಥ ಮತ್ತೂರ, ಸುಧಾ ಆದಿ, ಬಸೀರುದ್ದೀನ್ ಪಟೇಲ್, ಇನ್ಸ್ಪೆಕ್ಟರ್ಗಳಾದ ಶರಣಬಸವ ಕೋಡ್ಲಾ, ಗುರುಪಾದ ಬಿರಾದಾರ ಮತ್ತು ಸಿಬ್ಬಂದಿ ದಾಳಿ ನಡೆಸಿದ್ದು, ಯಾದಗಿರಿ ಎಸಿಬಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts