More

    ಅಧಿಕಾರಿಗಳಿಂದ ಕಾನೂನು ಉಲ್ಲಂಘನೆ

    ಜೊಯಿಡಾ: ತಾಲೂಕಿನಲ್ಲಿ ಸುಮಾರು ಶೇ. 94 ರಷ್ಟು ಅರಣ್ಯ ಅತಿಕ್ರಮಣ ಅರ್ಜಿಯನ್ನು ಆಡಳಿತ ವರ್ಗದ ಅಧಿಕಾರಿಗಳು ಕಾನೂನು ಬಾಹಿರವಾಗಿ ಅರ್ಜಿ ತಿರಸ್ಕರಿಸಿದ್ದಾರೆ. ನಮ್ಮ ಹೋರಾಟ ಸಮಿತಿಯಿಂದ ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಲಾಗಿದೆ. ಹೋರಾಟದ ಉದ್ದೇಶ ಕೊನೆಯ ಅರಣ್ಯ ಅತಿಕ್ರಮಣದಾರನಿಗೂ ನ್ಯಾಯ ಒದಗಿಸುವುದಾಗಿದೆ ಎಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯ ಅಧ್ಯಕ್ಷ ಎ. ರವೀಂದ್ರ ನಾಯ್ಕ ಹೇಳಿದರು.

    ಕುಣಬಿ ಸಮಾಜ ಭವನದಲ್ಲಿ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆಯಿಂದ ಬುಧವಾರ ಹಮ್ಮಿಕೊಂಡ ಭೂಮಿ ಹಕ್ಕು: ಜನಾಂದೋಲನ ಹೋರಾಟ ಸಭೆಯಲ್ಲಿ ಅವರು ಮಾತನಾಡಿದರು.

    ಕುಂಬಾರವಾಡಾ ಗ್ರಾ.ಪಂ. ಅಧ್ಯಕ್ಷ ಪುರುಷೊತ್ತಮ ಕಾಮತ ಮಾತನಾಡಿ, ತಾಲೂಕಿನಲ್ಲಿ ಅರಣ್ಯ ಇಲಾಖೆಯಿಂದ ಜನರ ಮೇಲೆ ದೌರ್ಜನ್ಯ ಆಗುತ್ತಿದೆ. ರೈತರು ಕಷ್ಟಪಟ್ಟು ಬೆಳೆಸಿದ ಗೇರು ಗಿಡಗಳನ್ನು ಕಿತ್ತೊಗೆದು ಹಾನಿ ಮಾಡಿದ ಘಟನೆಗಳು ಈ ಹಿಂದೆ ನಡೆದಿವೆ. ಇನ್ನು ಮುಂದೆ ಅರಣ್ಯ ಇಲಾಖೆಯಿಂದ ತೊಂದರೆಯಾದರೆ ಹೋರಾಟ ಮಾಡುವುದಾಗಿ ತಿಳಿಸಿದರು.

    ಕುಣಬಿ ಮುಖಂಡ ಸುಭಾಷ ಗಾವಡಾ ಮಾತನಾಡಿ, ಅರಣ್ಯ ಭೂಮಿ ಅತಿಕ್ರಮಣದಾರರು ಒಂದಾಗಿ ನಮ್ಮ ಹಕ್ಕಿಗಾಗಿ ಬೃಹತ್ ಪ್ರಮಾಣದಲ್ಲಿ ಪ್ರತಿಭಟಿಸುವ ಜೊತೆಗೆ ನಮ್ಮ ಬೇಡಿಕೆಯನ್ನು ಇಲಾಖೆಗೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು.

    ನಂತರ ಜೊಯಿಡಾ ಕುಣಬಿ ಭವನದಿಂದ ತಹಸೀಲ್ದಾರ್ ಕಚೇರಿಯವರೆಗೆ ರ‍್ಯಾಲಿ ನಡೆಸಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು. ಅರಣ್ಯ ಅತಿಕ್ರಮಣದಾರರು ಪ್ರತಿಯೊಬ್ಬರೂ ವೈಯಕ್ತಿಕವಾಗಿ ತಹಸೀಲ್ದಾರ್ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ್ದು ವಿಶೇಷವಾಗಿತ್ತು.

    ಜಿ.ಪಂ. ಸದಸ್ಯ ರಮೇಶ ನಾಯ್ಕ, ಕಾಳಿ ಹುಲಿ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ಶ್ರೀಕಾಂತ ಟೇಂಗ್ಸೆ, ಕುಣಬಿ ಸಮಾಜದ ಅಧ್ಯಕ್ಷ ಜಯಾನಂದ ಡೇರೆಕರ, ಪ್ರಮುಖರಾದ ಮಾಬಲು ಕುಂಡಲ್ಕರ, ದೇವಿದಾಸ ದೇಸಾಯಿ, ಪ್ರಭಾಕರ ವೆಳಿಪ ಇತರರು ಇದ್ದರು. ಜೊಯಿಡಾ ಸಿಪಿಐ ಬಾಬಾಸಾಹೇಬ ಹುಲ್ಲಣ್ಣನವರ ನೇತೃತ್ವದಲ್ಲಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು.

    27ರಂದು ಸಭೆ: ಅರಣ್ಯ ಭೂಮಿ ಹಕ್ಕು ಹೋರಾಟಗಾರರು ಜೊಯಿಡಾ ತಹಸೀಲ್ದಾರ್ ಕಚೇರಿಯಲ್ಲಿ ಅರಣ್ಯ ಅತಿಕ್ರಮಣದಾರರ ತೊಂದರೆಗಳ ಬಗ್ಗೆ ರ್ಚಚಿಸಲು ಅರಣ್ಯ ಇಲಾಖೆ ಸೇರಿ ಸಂಬಂಧಿಸಿದ ಇತರೆ ಇಲಾಖೆಯ ಅಧಿಕಾರಿಗಳ ಜೊತೆಗೆ ಸಭೆ ನಡೆಸುವಂತೆ ತೀರ್ವನಿಸಲಾಗಿತ್ತು. ಆದರೆ, ತಹಸೀಲ್ದಾರ್ ಸೇರಿ ಅರಣ್ಯ ಅಧಿಕಾರಿಗಳು ಇಲ್ಲದ ಕಾರಣ ಜ. 27 ರಂದು ಮತ್ತೊಮ್ಮೆ ಸಭೆ ನಡೆಸಿ ಅರಣ್ಯ ಅತಿಕ್ರಮಣದಾರರ ಸಮಸ್ಸೆಗಳ ಬಗ್ಗೆ ರ್ಚಚಿಸುವ ತೀರ್ಮಾನ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts