More

    ಅದ್ದೂರಿ ರಾಜ್ಯೋತ್ಸವ ಆಚರಣೆಗೆ ಸಿದ್ಧತೆ

    ಯಾದಗಿರಿ: ಜಿಲ್ಲಾಡಳಿತದಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮವನ್ನು ಅತ್ಯಂತ ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದೆ ಎಂದು ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ., ತಿಳಿಸಿದರು.

    ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಸಂಜೆ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ನ.01ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕಾರ್ಯಕ್ರಮ ಜರುಗಲಿದೆ. ಅಂದು ಬೆಳಗ್ಗೆ ನಾಡದೇವತೆಯ ಭಾವಚಿತ್ರವನ್ನು ಟಾ್ರೃಕ್ಟರ್ ಮೂಲಕ ಭವ್ಯ ಮೆರವಣಿಗೆ ಮಾಡಬೇಕು. ವಿವಿಧ ಇಲಾಖೆಗಳಿಂದ ಸ್ತಬ್ದಚಿತ್ರಗಳು, ಕಲಾತಂಡಗಳು ಹಾಗೂ ಶಾಲಾ ಮಕ್ಕಳೊಂದಿಗೆ ಮೈಲಾಪೂರ ಅಗಸಿಯಿಂದ ಪ್ರಾರಂಭಿಸಿ ಮುಖ್ಯರಸ್ತೆಗಳ ಮೂಲಕ ಜಿಲ್ಲಾ ಕ್ರೀಡಾಂಗಣಕ್ಕೆ ತಲುಪುವಂತಾಗಬೇಕು ಎಂದರು.

    ವೇದಿಕೆ ಸಿದ್ದತೆ,ಗಣ್ಯರಿಗೆ ಆಸನದ ವ್ಯವಸ್ಥೆ ಮಾಡಿಕೊಳ್ಳಬೇಕು. ಶಿಷ್ಠಾಚಾರದಂತೆ ಅತಿಥಿ ಗಣ್ಯರನ್ನು ಆಹ್ವಾನಿಸಬೇಕು. ಕವಾಯತು ಅತ್ಯುತ್ತಮವಾಗಿ ನಡೆಸಲು ಪೂರ್ವಭಾವಿಯಾಗಿ ತರಬೇತಿ, ಸಿದ್ದತೆ ಮಾಡಿಕೊಳ್ಳಬೇಕು. ಶಾಮಿಯಾನಾ ಇನ್ನಿತರ ಸಿದ್ಧತೆ ಭಾವೈಕ್ಯತಾ ಸಮಿತಿ ಹಾಗೂ ಡಿಡಿಪಿಐ ಮಧ್ಯೆ ಸಮನ್ವಯತೆ ಇರಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ಸಕರ್ಾರೇತರ ಸಂಘ -ಸಂಸ್ಥೆಗಳವರು, ಭಾಗವಹಿಸಬೇಕು ಎಂದು ಹೇಳಿದರು.

    ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಸಂಗೀತಾ, ಸಹಾಯಕ ಆಯುಕ್ತ ಹಂಪಣ್ಣ ಸಜ್ಜನ್, ಡಿವೈಎಸ್ಪಿ ಬಸವೇಶ್ವರ, ಭಾವೈಕ್ಯತಾ ಸಮಿತಿ ಮುಖಂಡರಾದ ಡಾ.ಸಿದ್ದಪ್ಪ ಹೊಟ್ಟಿ, ಅಯ್ಯಣ್ಣ ಹುಂಡೇಕಾರ, ಸುಭಾಶ್ಚಂದ್ರ ಕೌಲಗಿ, ಬಾಬು ದೋಖಾ, ಸೋಮಶೇಖರ ಮಣ್ಣೂರ, ಡಿಡಿಪಿಯು ಚನ್ನಬಸವ ಕುಳಗೇರಿ, ಡಿಡಿಪಿಐ ಮಂಜುನಾಥ ಎಚ್.ಪಿ., ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕಿ ಉತ್ತರಾದೇವಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts