More

    ಅದ್ದೂರಿ ರಾಜ್ಯೋತ್ಸವ ಆಚರಣೆಗೆ ನಿರ್ಧಾರ

    ಕಾಗವಾಡ ಬೆಳಗಾವಿ: ಪಟ್ಟಣದಲ್ಲಿ ಕನ್ನಡ ರಾಜೋತ್ಸವ ಅದ್ದೂರಿಯಾಗಿ ಆಚರಿಸಲು ತಾಲೂಕು ಆಡಳಿತ ನಿರ್ಧರಿಸಿದೆ ಎಂದು ತಹಸೀಲ್ದಾರ್ ರಾಜೇಶ ಬುರ್ಲಿ ಹೇಳಿದರು.
    ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ಬುಧವಾರ ಕನ್ನಡ ರಾಜೋತ್ಸವ ಆಚರಣೆ ಕುರಿತು ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನ.1ರಂದು ತಾಲೂಕಿನ ಗಡಿಗ್ರಾಮ ಮಂಗಸೂಳಿಯಲ್ಲಿ ರಾಜ್ಯೋತ್ಸವ ಆಚರಣೆ ಮಾಡಿ, ಗಡಿಭಾಗದ ಮಹಾದ್ವಾರದ ಮೇಲೆ ಕನ್ನಡದ ಧ್ವಜಾರೋಹಣ ಮಾಡಲಾಗುವುದು ಎಂದರು.

    ಸ್ಥಳೀಯ ಶಾಸಕರ ಅಧ್ಯಕ್ಷತೆಯಲ್ಲಿ ತಾಲೂಕು ಆಡಳಿತದ ವತಿಯಿಂದ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ, ಧ್ವಜಾರೋಹಣ ಕಾರ್ಯಕ್ರಮ ನಡೆಯಲಿದೆ ಎಂದರು.
    ಕರವೇ ತಾಲೂಕು ಅಧ್ಯಕ್ಷ ಸಿದ್ದು ಒಡೆಯರ್ ಮಾತನಾಡಿ, ಮೆರವಣಿಗೆಯಲ್ಲಿ ನಾಡಿನ ಸಾಹಿತ್ಯ, ಇತಿಹಾಸ, ಸಂಸ್ಕೃತಿ ಬಿಂಬಿಸುವ ಸ್ತಬ್ಧಚಿತ್ರ ಹಾಗೂ ವಿವಿಧ ಸಾಂಸ್ಕೃತಿಕ ಕಲಾ ತಂಡಗಳನ್ನು ಆಹ್ವಾನಿಸಬೇಕು ಎಂದರು.ಸ್ಥಳೀಯ ಪಿಎಸ್‌ಐ ಹನುಮಂತ ನರಳೆ, ಬಿಇಒ ಎಂ.ಆರ್. ಮುಂಜೆ, ಗ್ರೇಡ್-2 ತಹಸೀಲ್ದಾರ್ ರಾಕೇಶ ಬುವಾ, ಸಿಡಿಪಿಒ ಸಂಜಯಕುಮಾರ ಸದಲಗಿ, ಶಿವಾನಂದ ನವಿನ್ಯಾಳೆ, ದತ್ತು ಪೂಜಾರಿ, ಪ್ರವೀಣ ಪಾಟೀಲ, ಸಂಜು ಕರವ, ಪ್ರಕಾಶ ಮಿರ್ಜೆ, ಫಾರೂಕ್ ಅಲಾಸ್ಕರ್, ಅಸ್ಲಂ ಜಮಾದಾರ, ಮಹಾಂತೇಶ ಬಡಿಗೇರ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts