More

    ಅದಿಕಾರಿಗಳು ಜನರ ಕಷ್ಟಕ್ಕೆ ಸ್ಪಂದಿಸಿ

    ಅಥಣಿ ಗ್ರಾಮೀಣ: ಕರ್ತವ್ಯದಲ್ಲಿರುವ ಅಕಾರಿಗಳು ಜನರ ಕಷ್ಟಗಳಿಗೆ ಸ್ಪಂದಿಸಿದರೆ ಜನ ಎಂದಿಗೂ ಅವರನ್ನು ಮರೆಯುವುದಿಲ್ಲ ಎಂದು ವಿಧಾನ ಪರಿಷತ್ ಸದಸ್ಯ ಲಕ್ಷ್ಮಣ ಸವದಿ ಹೇಳಿದರು.

    ಅಥಣಿ ತಾಲೂಕಿನ ಬಳವಾಡ ಆರ್.ಸಿ. ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ಭಾನುವಾರ ಆಯೋಜಿಸಿದ್ದ ಪದೋನ್ನತಿ ಹೊಂದಿದ ಐಪಿಎಸ್ ಅಕಾರಿಗಳಿಗೆ ಸತ್ಕಾರ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಕಾರ, ಅಂತಸ್ತು ಶಾಶ್ವತವಲ್ಲ. ಜೀವನದಲ್ಲಿ ಎಷ್ಟು ಜನರಿಗೆ ಉಪಕಾರಿಯಾಗಿದ್ದೇವೆ ಎನ್ನುವುದು ಮುಖ್ಯ ಎಂದರು.

    ಶಿಕ್ಷಣ ಕ್ಷೇತ್ರದಲ್ಲಿ ಪೈಪೋಟಿ ಅತಿಯಾಗಿದೆ. ಜಿದ್ದಿಗೆ ಬಿದ್ದವರಂತೆ ಪಾಲಕರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು, ತಮ್ಮ ಜೀವನ ಪಣಕ್ಕಿಡುತ್ತಿದ್ದಾರೆ. ಆದರೆ, ಅದೇ ವ್ಯಕ್ತಿ ಉನ್ನತ ಹುದ್ದೆಗೇರಿದ ಮೇಲೆ ಹೆತ್ತವರನ್ನು ಕಡೆಗಣಿಸಿ ವೃದ್ಧಾಶ್ರಮದಲ್ಲಿ ಬಿಡುತ್ತಿರುವುದು ದುರ್ದೈವದ ಸಂಗತಿ ಎಂದು ಬೇಸರ ವ್ಯಕ್ತಪಡಿಸಿದರು.

    ಹೆತ್ತವರು, ನೆರೆ-ಹೊರೆಯವರು, ಸಹಾಯ ಮಾಡಿದವರನ್ನು ಮರೆತು, ತನ್ನಷ್ಟಕ್ಕೆ ತಾನು ಬದುಕುವವ ಮಾನವೀಯತೆ ಮರೆತಂತೆ. ಕೇವಲ ಕೆಲಸಕ್ಕೆ ಹಪಹಪಿಸದೆ ಸುಧಾರಿತ ಕೃಷಿ ಕೈಗೊಂಡು ಎಲ್ಲ ವರ್ಗಕ್ಕೆ ಅನ್ನ ನೀಡುವ ರೈತನಾಗಬೇಕು ಎಂದರು.

    ಬೆಳಗಾವಿ ಮಹಾನಗರ ಪೊಲೀಸ್ ಆಯುಕ್ತ ಡಾ. ಎಂ.ಬಿ.ಬೋರಲಿಂಗಯ್ಯ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಬೆಳೆದ ನನಗೆ ಹಳ್ಳಿ ಜೀವನ ಚೆನ್ನಾಗಿ ಗೊತ್ತು. ನಗರ ಪ್ರದೇಶಗಳಲ್ಲಿ ದೊರೆಯುವ ಗುಣಮಟ್ಟದ ಶಿಕ್ಷಣ ಇಲ್ಲಿ ಸಿಗುವುದಿಲ್ಲ. ಆದರೆ, ಉನ್ನತ ಹುದ್ದೆಯಲ್ಲಿರುವ ಬಹುತೇಕರು ಹಳ್ಳಿಗರೇ ಎಂದರು.

    ಕಡಿಮೆ ನಿದ್ದೆ, ಸತತ ಓದು ಯಶಸ್ಸಿಗೆ ಕಾರಣವಾಗುತ್ತದೆ. ಬಳವಾಡ ಗ್ರಾಮ ಚಿಕ್ಕದಾದರೂ, ಗ್ರಾಮದವರು ಸರ್ಕಾರಿ ಸಣ್ಣ ಹುದ್ದೆಯಿಂದ ಹಿಡಿದು ಐಪಿಎಸ್ ಅಕಾರಿಯಾಗಿ ಸೇವೆ ಸಲ್ಲಿಸುತ್ತಿರುವುದು ಶ್ಲಾಘನೀಯ ಎಂದರು.

    ಐಪಿಎಸ್ ಅಕಾರಿಯಾಗಿ ಪದೋನ್ನತಿ ಹೊಂದಿದ ಬಾಬಾಸಾಬ ನೇಮಗೌಡ ಸತ್ಕಾರ ಸ್ವೀಕರಿಸಿ ಮಾತನಾಡಿ, ನನ್ನ ಯಶಸ್ಸಿಗೆ ಕುಟುಂಬಸ್ಥರು, ಗುರು-ಹಿರಿಯರು ಹಾಗೂ ಗ್ರಾಮಸ್ಥರ ಆಶೀರ್ವಾದ ಕಾರಣ. ನಮ್ಮೂರಿನ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಸಹಾಯ ಮಾಡುತ್ತೇನೆ ಎಂದರು.

    ಹಣಮಾಪುರದ ಅಮರೇಶ್ವರ ಮಹಾರಾಜರು ಸಾನ್ನಿಧ್ಯ ವಹಿಸಿದ್ದರು. ಐಪಿಎಸ್ ಅಕಾರಿಯಾಗಿ ಪದೋನ್ನತಿ ಹೊಂದಿದ ರಾಮಲಕ್ಷ್ಮಣ ಅರಸಿದ್ದಿ ಹಾಗೂ ಮಹಾನಿಂಗ ನಂದಗಾಂವಿ ಅವರನ್ನು ಸತ್ಕರಿಸಲಾಯಿತು.

    ಬಳವಾಡದ ರಾಚೋಟೇಶ್ವರ ಸ್ವಾಮೀಜಿ, ಮುರುಘೇಂದ್ರ ಸ್ವಾಮೀಜಿ, ಸಂತೋಷ ಸಾವಕರ, ಸಂಭಾಜಿ ಐನಾಪುರ, ರಸೂಲ್ ನದ್ಾ, ರಾಮು ಮಟ್ಟಿ, ರಾಜು ನೇಮಗೌಡ, ಮಲ್ಲಿಕಾರ್ಜುನ ಹರೋಲಿ, ಭೀಮಣ್ಣ ಕಾಮಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts