More

    ಅತಿವೃಷ್ಟಿ ಸಂತ್ರಸ್ತರ ಬದುಕು ಅತಂತ್ರ

    ಎಂ.ಎಸ್. ಹಿರೇಮಠ ಸಂಶಿ

    ‘ಮನಿ-ಮಠ ಕಳಕೊಂಡ ನಾಲ್ಕ ತಿಂಗಳಾಗೇತ್ರಿ. ಮನಿಗಳ ಇನ್ನೂ ನೀರಾಗ ನಿಂತಾವ್ರಿ. ಆದ್ರೂ ಬಿಡಿಗಾಸಿನ ಪರಿಹಾರ ಬಂದಿಲ್ರಿ. ತಾತ್ಕಾಲಿಕ ವಸತಿ ಕೇಂದ್ರದಾಗ ವಾಸ ಅದೇವ್ರಿ. ಯಾರೊಬ್ರೂ ತಿರುಗಿ ನೋಡವಲ್ರೀ…’

    ಕಳೆದ ವರ್ಷ ಸುರಿದ ಧಾರಾಕಾರ ಮಳೆಯಿಂದ ಸಂಶಿ ಗ್ರಾಮದ ಅಳ್ಳಿಗೆರೆಯಲ್ಲಿ 15ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಆದ್ದರಿಂದ ಗ್ರಾಮದ ಹೊರವಲಯದ ಎಪಿಎಂಸಿ ಮಳಿಗೆಗಳಲ್ಲಿ ಬದುಕು ಸಾಗಿಸುತ್ತಿರುವ ನಿರಾಶ್ರಿತ ಕುಟುಂಬಸ್ಥರ ಅಸಹಾಯಕತೆಯ ಮಾತುಗಳಿವು.

    ಸೂರು ಕಳೆದುಕೊಂಡು ಪರಿಹಾರ ಕೇಂದ್ರ ಸೇರಿ ನಾಲ್ಕು ತಿಂಗಳು ಕಳೆದರೂ ಯಾವುದೇ ಪರಿಹಾರ ಸಿಕ್ಕಿಲ್ಲ. ಶಾಶ್ವತ ಸೂರು ಕಲ್ಪಿಸುವ ಭರವಸೆ ಈವರೆಗೆ ಈಡೇರಿಲ್ಲ. ನೆರೆ ಬಳಿಕ ಸರ್ಕಾರವು ಸಂತ್ರಸ್ತರನ್ನು ಮರೆಯುತ್ತಿದೆ ಎಂಬುದಕ್ಕೆ 127 ದಿನಗಳಿಂದ ಎಪಿಎಂಸಿಯಲ್ಲಿ ದಿನ ಕಳೆಯುತ್ತಿರುವ 15 ಕುಟುಂಬಗಳ 80ಕ್ಕೂ ಹೆಚ್ಚು ಜನರೇ ನೈಜ ಸಾಕ್ಷಿ.

    ಅಳ್ಳಿಗೆರೆ ತೆಗ್ಗು ಪ್ರದೇಶವಾಗಿದ್ದರಿಂದ ದೊಡ್ಡ ಮಳೆ ಸುರಿದರೆ ಮನೆಗಳು ಜಲಾವೃತವಾಗá-ವುದು ಸಾಮಾನ್ಯವಾಗಿದೆ. ಈ ಮನೆಗಳನ್ನು ದುರಸ್ತಿ ಅಥವಾ ಮರು ನಿರ್ವಣ ಮಾಡá-ತ್ತಿಲ್ಲ. ಏಕೆಂದೆರೆ ಈ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸá-ವ ನಿಟ್ಟಿನಲ್ಲಿ ಬೇರೆಡೆ ಜಾಗ ನೀಡಿ ಮನೆ ಕಟ್ಟಿಸಿಕೊಡá-ವ ಯೋಜನೆಯನ್ನು ಜಿಲ್ಲಾಡಳಿತ ಹೊಂದಿದೆ. ನೆರೆಯಿಂದಾಗಿ ಗ್ರಾಮದಲ್ಲಿ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಈ ಕುರಿತು ಶಾಸಕರು, ಜಿಲ್ಲಾಧಿಕಾರಿ, ತಹಸೀಲ್ದಾರ್ ಹಾಗೂ ಇತರ ಅಧಿಕಾರಿಗಳು ಪರಿಸ್ಥಿತಿ ಅವಲೋಕಿಸಿದ್ದಾರೆ. ಅಲ್ಲದೆ, ಸಂತ್ರಸ್ತರಿಗೆ ಮನೆ

    ಪುನರ್ ನಿರ್ವಿುಸವ ಭರವಸೆ ನೀಡಿದ್ದರು. ಸರ್ಕಾರದ ಈ ಭರವಸೆ ಹಿನ್ನೆಲೆಯಲ್ಲಿ ಪುನರ್ವಸತಿ ಕೇಂದ್ರ ಸೇರಿದ ಸಂತ್ರಸ್ತರು ಇನ್ನೂ ಕಣ್ಣೀರಲ್ಲಿ ದಿನ ದೂಡುವಂತಾಗಿದೆ. ಎಪಿಎಂಸಿಯಲ್ಲಿ ನಿರಾಶ್ರಿತರಿಗೆ ಆಶ್ರಯ ಕಲ್ಪಿಸಿದ ಬಳಿಕ ಮತ್ತೆ ಮಳೆಗಾಲ ಸಮೀಪಿಸುತ್ತಿದ್ದರೂ ಸಂತ್ರಸ್ತರು ಹೇಗಿದ್ದಾರೆ ಎಂದು ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ಇತ್ತ ಕಡೆ ಬಂದಿಲ್ಲ ಎನ್ನುತ್ತಾರೆ ನಿರಾಶ್ರಿತರಾದ ಬಸವಣ್ಣೆಪ್ಪ ಅಕ್ಕಿ, ಮಾಬುಸಾಬ್ ರಜಾಖಾನವರ.

    ಮೂಲಸೌಲಭ್ಯಗಳ ಬರ: ಎಪಿಎಂಸಿಯ ಇಕ್ಕಟ್ಟಾದ ಐದು ಮಳಿಗೆಗಳಲ್ಲಿ ಒಂದೊಂದರಲ್ಲಿ ಎರಡ್ಮೂರು ಕುಟುಂಬಗಳು ವಾಸಿಸುತ್ತಿವೆ. ಸ್ನಾನಕ್ಕಾಗಿ ಆವರಣದಲ್ಲಿ ನಿರ್ವಿುಸಿಕೊಂಡ ಬಟ್ಟೆಯ ತಟ್ಟಿಗಳನ್ನು ಆಶ್ರಯಿಸಿದರೆ, ಶೌಚಕ್ಕೆ ಬಯಲು ಬಹಿರ್ದೆಸೆ ಅನಿವಾರ್ಯವಾಗಿದೆ.

    ವಿದ್ಯುತ್ ಬಿಲ್ ಪಾವತಿಗೆ ಒತ್ತಡ: ನಿರಾಶ್ರಿತರು ವಾಸಿಸುತ್ತಿರುವ ಐದು ಮಳಿಗೆಗಳ ಪೈಕಿ ಒಂದೊಂದಕ್ಕೆ 1,456, 1,320, 1,150, 750 ಹಾಗೂ 380 ರೂ.ಗಳಂತೆ ನಾಲ್ಕು ತಿಂಗಳ ಬಿಲ್ ಬಂದಿದ್ದು, ಅದನ್ನು ಪಾವತಿಸುವಂತೆ ಹೆಸ್ಕಾಂನವರು ಕೇಳತ್ತಿದ್ದಾರೆ.

    ಕಗ್ಗಂಟಾದ ಪುನರ್ ಸೂರು: ನಿರಾಶ್ರಿತರಿಗೆ ಸೂರು ನಿರ್ವಿುಸಲು ಗ್ರಾಮದಲ್ಲಿ ಜಾಗವನ್ನು ಗುರುತಿಸಿದ್ದು, ಅದಕ್ಕಿರುವ ಕೆಲ ಅಡೆತಡೆಗಳನ್ನು ದಾಟಿ ನಿವೇಶನ ನೀಡುವುದು ಗ್ರಾಮ ಪಂಚಾಯಿತಿಗೆ ಕಗ್ಗಂಟಾಗಿದೆ. ಜಾಗ ನೀಡಿ ಗ್ರಾಪಂ ಕೈ ತೊಳೆದುಕೊಳ್ಳುತ್ತದೆಯೋ ಅಥವಾ ಮನೆ ನಿರ್ವಿುಸಿ ಕೊಡತ್ತದೆಯೋ ಎಂಬ ಗೊಂದಲ ನಿರಾಶ್ರಿತರಲ್ಲಿ ಮೂಡಿದೆ.

    ನಿರಾಶ್ರಿತರು ಬೇರೆಡೆ ಸೂರು ವ್ಯವಸ್ಥೆ ಮಾಡವಂತೆ ಹೇಳುತ್ತಾರೆ. ಆದರೆ, ಬೇರಡೆ ಜಾಗೆ ನೀಡಲು ಸ್ವಲ್ಪ ಕಾಲಾವಕಾಶ ಬೇಕಾಗುತ್ತದೆ. ಚಾಕಲಬ್ಬಿ ರಸ್ತೆಗೆ ಹೊಂದಿಕೊಂಡು ಜಾಗವಿದೆ. ಅದನ್ನು ನೀಡುವ ಬಗ್ಗೆ ಚರ್ಚೆ ನಡೆದಿದೆ. ಈ ಕುರಿತಾಗಿ ಸಂಬಂಧಿಸಿದ ಅಧಿಕಾರಿಗಳ ಜತೆ ಮಾತನಾಡಿ ನಿರಾಶ್ರಿತರಿಗೆ ಅನುಕೂಲ ಕಲ್ಪಿಸಲಾಗುವುದು.
    | ಕುಸುಮಾವತಿ ಶಿವಳ್ಳಿ ಶಾಸಕಿ

    ನಿರಾಶ್ರಿತರ ಸೂರು ನಿರ್ವಣಕ್ಕೆ ಈಗಾಗಲೇ ಗ್ರಾಮದಲ್ಲಿ ಜಾಗ ಗುರುತಿಸಿದ್ದು, ಮಾರ್ಚ್​ನಲ್ಲಿ ತಹಸೀಲ್ದಾರ್, ತಾಪಂ ಇಒ ಹಾಗೂ ಜನಪ್ರತಿನಿಧಿಗಳ ಸಮ್ಮುಖದಲ್ಲಿ ಸಭೆ ನಡೆಸಲಾಗá-ವುದು. ಬಳಿಕ ಸೂಕ್ತ ನಿರ್ಧಾರ ಕೈಗೊಂಡು ನಿರಾಶ್ರಿತರಿಗೆ ಜಾಗ ಹಸ್ತಾಂತರಿಸಲಾಗುವುದು.
    | ಶೇಖರಪ್ಪ ಹರಕುಣಿ ಗ್ರಾಪಂ ಅಧ್ಯಕ್ಷ

    ಅತಿವೃಷ್ಟಿಯಿಂದ ಮನೆ ಕಳೆದು ಕೊಂಡ ವೇಳೆ ಜಿಲ್ಲಾಡಳಿತ ಮತ್ತು ತಾಲೂಕಾಡಳಿತದ ಸೂಚನೆ ಮೇರೆಗೆ ಮೌಖಿಕ ಒಪ್ಪಂದದ ಮೇರೆಗೆ ಸಂತ್ರಸ್ತರಿಗೆ ಎಪಿಎಂಸಿ ಮಳಿಗೆ ನೀಡಲಾಗಿತ್ತು. ರೈತರ ವ್ಯಾಪಾರದ ದೃಷ್ಟಿಯಿಂದ ಮಳಿಗೆಗಳನ್ನು ತೆರವುಗೊಳಿಸಿ ನಿರಾಶ್ರಿತರಿಗೆ ಶೀಘ್ರ ಸರ್ಕಾರ ಸೂರು ಕಲ್ಪಿಸಬೇಕು.
    | ಎ.ಬಿ.ಉಪ್ಪಿನ ಎಪಿಎಂಸಿ ಸದಸ್ಯ

    ಮನೆ ಕಳೆದುಕೊಂಡು ಬದುಕಿಗೆ ಗರ ಬಡಿದಂತಾಗಿದೆ. ಎಪಿಎಂಸಿಯಲ್ಲಿದ್ದು ನಾಲ್ಕೈದು ತಿಂಗಳಾಯಿತು. ಪುನಃ ಸೂರು ನಿರ್ವಣದ ಬಗ್ಗೆ ಯಾರೂ ಗಮನ ನೀಡುತ್ತಿಲ್ಲ.
    | ಕಲ್ಲಂದರ ಕಣವಿ, ಪದ್ಮವ್ವ ಕಮಡೊಳ್ಳಿ ನಿರಾಶ್ರಿತರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts