More

    ಸ್ವಾಮಿ ವಿವೇಕಾನಂದರ ಆದರ್ಶ ಪಾಲಿಸಿ

    ಸಂಶಿ: ಸ್ವಾಮಿ ವಿವೇಕಾನಂದರ ತತ್ವ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಜತೆಗೆ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದು ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಜು ಪುಟ್ಟನವರ ಹೇಳಿದರು.
    ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ನಂ-1ರಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ನಮ್ಮೂರ ಹಬ್ಬ ಸಂಕ್ರಾಂತಿ ಸಂಭ್ರಮ ಹಾಗೂ ಸ್ವಾಮಿ ವಿವೇಕಾನಂದರ ಜಯಂತ್ಯುತ್ಸವವದಲ್ಲಿ ಅವರು ಮಾತನಾಡಿದರು.
    ಮಕ್ಕಳ ಸಾಹಿತ್ಯ ಪರಿಷತ್ ತಾಲೂಕು ಘಟಕದ ಅಧ್ಯಕ್ಷ ಲೋಕೇಶ ಸರಾವರಿ ಮಾತನಾಡಿ, ಮಕ್ಕಳು ಚಿಕ್ಕಂದಿನಿಂದಲೇ ಸಭೆಯಲ್ಲಿ ಮಾತನಾಡುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದರು. ಗೌಡಪ್ಪಗೌಡ ಪಾಟೀಲ ಮಾತನಾಡಿ, ಮಕ್ಕಳು ಆಧ್ಯಾತ್ಮಿಕ, ವೈಚಾರಿಕ, ಸಾಂಸ್ಕೃತಿಕ ಕ್ಷೇತ್ರದ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದರು. ಸಂಶಿ ವಿರಕ್ತಮಠದ ಶ್ರೀ ಚನ್ನಬಸವ ದೇವರು ಹಾಗೂ ಕುಂದಗೋಳ ಕಲ್ಯಾಣಪುರಮಠದ ಶ್ರೀ ಅಭಿನವ ಬಸವಣ್ಣಜ್ಜನವರು ಸಾನ್ನಿಧ್ಯ ವಹಿಸಿದ್ದರು. ಮಸಾಪ ಜಿಲ್ಲಾಧ್ಯಕ್ಷ ಸಂಜೀವ ಎನ್., ಜಗದೀಶ ಉಪ್ಪಿನ ಮಾತನಾಡಿದರು.
    ಮಾರುತಿ ಆಲೂರ, ರಮೇಶ ಅತ್ತಿಗೇರಿ, ಹಾಲಪ್ಪ ತಾದಾಳ, ಶಂಕ್ರಣ್ಣ ಬ್ಯಾಹಟ್ಟಿ, ಎಚ್. ಪಠಾಣ್, ಗುರುಪಾದಪ್ಪ ಬಂಕದ, ಶಾಲೆಯ ಸಿಬ್ಬಂದಿ,
    ಎಸ್‌ಡಿಎಂಸಿ ಸದಸ್ಯರು, ಮಕ್ಕಳು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts