More

    ಅತಿವೃಷ್ಟಿಯಿಂದಾದ ಹಾನಿ ವೀಕ್ಷಿಸಿದ ಐಎಂಸಿಟಿ

    ಶೃಂಗೇರಿ: ಅತಿವೃಷ್ಟಿಯಿಂದ ಹಾನಿಗೊಳಗಾದ ತಾಲೂಕಿನ ರಾಜ್ಯ ಹೆದ್ದಾರಿಯ ನೇರಳಕೂಡಿಗೆ, ಗಡಿಕಲ್ಲಿನ ರಸ್ತೆ, ಉಳುವೆಯ ಕೃಷಿ ಜಮೀನು ಮತ್ತಿತರ ಸ್ಥಳಗಳಿಗೆ ಕೇಂದ್ರ ಅಂತರ ಸಚಿವಾಲಯ ಕಾರ್ಯದರ್ಶಿ ಮಟ್ಟದ ಸಮಿತಿ(ಐಎಂಸಿಟಿ) ತಂಡ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿತು.

    ಪಪಂ ಸಭಾಂಗಣದಲ್ಲಿ ಕೇಂದ್ರ ತಂಡದವರಿಗೆ ಮಾಹಿತಿ ನೀಡಿದ ಡಿಸಿ ಕೆ.ಎನ್.ರಮೇಶ್, ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಒಟ್ಟು 391 ಕೋಟಿ ರೂ. ನಷ್ಟ ಉಂಟಾಗಿದೆ. 9,815 ಹೆಕ್ಟೇರ್​ನಲ್ಲಿ ವಿವಿಧ ಬೆಳೆಗಳು ಹಾನಿಗೀಡಾಗಿವೆ. ಇದರಲ್ಲಿ 3,489 ಹೆಕ್ಟೇರ್ ಈರುಳ್ಳಿ, 870 ಹೆಕ್ಟೇರ್ ಅಲೂಗಡ್ಡೆ, 5456 ಹೆಕ್ಟೇರ್ ಕಾಫಿ, ಅಡಕೆ, ಕಾಳುಮೆಣಸು, ಭತ್ತ ಬೆಳೆಗಳು ಸೇರಿವೆ ಎಂದು ತಿಳಿಸಿದರು.

    ಜಿಲ್ಲೆಯಲ್ಲಿ 945 ಮನೆಗಳು ಹಾನಿಗೀಡಾಗಿದ್ದು, 6 ಮಂದಿ ಮೃತಪಟ್ಟಿದ್ದಾರೆ. ಅವರ ಕುಟುಂಬಗಳಿಗೆ ತಲಾ 10 ಸಾವಿರ ರೂ. ಪರಿಹಾರ ನೀಡಲಾಗಿದೆ. 602 ಶಾಲಾ ಕೊಠಡಿ, 71 ಪ್ರಾಥಮಿಕ ಆರೋಗ್ಯ ಕೇಂದ್ರ, 195 ಅಂಗನವಾಡಿಗಳಲ್ಲಿ ಮೇಲ್ಛಾವಣಿ ಮತ್ತು ಗೋಡೆಗಳು ಕುಸಿದಿವೆ ಎಂದು ಮಾಹಿತಿ ನೀಡಿದರು.

    329 ಕಿಮೀ ರಾಜ್ಯ ಹೆದ್ದಾರಿ, 327 ಕಿಮೀ ಜಿಲ್ಲಾ ವ್ಯಾಪ್ತಿಯ ರಸ್ತೆಗಳು, 1278 ಕಿಮೀ ಗ್ರಾಮೀಣ ರಸ್ತೆಗಳಿಗೆ ಹಾನಿಯಾಗಿದೆ. ಪಿಡಬ್ಲ್ಯುಡಿಯ 24 ಸೇತುವೆ, 67 ಗ್ರಾಮೀಣ ಭಾಗದ ಸೇತುವೆಗಳು ಹಾನಿಗೀಡಾಗಿವೆ. 1910 ವಿದ್ಯುತ್ ಕಂಬಗಳು ಧರೆಗುರುಳಿವೆ. 5 ವಿದ್ಯುತ್ ಪರಿವರ್ತಕಗಳು, 38 ಕಿಮೀನಷ್ಟು ವಿದ್ಯುತ್ ಮಾರ್ಗಗಳಿಗೆ ಹಾನಿಯಾಗಿದೆ ಎಂದರು. ಶಾಸಕ ಟಿ.ಡಿ.ರಾಜೇಗೌಡ ಅವರು ಕ್ಷೇತ್ರದಲ್ಲಾದ ಅತಿವೃಷ್ಟಿ ಹಾನಿ ವರದಿಯನ್ನು ತಂಡಕ್ಕೆ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts