More

    ಅತಿಥಿ ಉಪನ್ಯಾಸಕರ ಬೇಡಿಕೆ ಈಡೇರಿಸಿ

    ಚಿತ್ರದುರ್ಗ: ಅತಿಥಿ ಉಪನ್ಯಾಸಕರ ಬೇಡಿಕೆಗಳಿಗೆ ಸ್ಪಂದಿಸುವ ಮೂಲಕ ಶ್ರಮಕ್ಕೆ ತಕ್ಕಫಲ ನೀಡಲು ಸರ್ಕಾರ ಮುಂದಾಗಬೇಕು ಎಂದು ಜಿಲ್ಲಾ ಉಪನ್ಯಾಸಕರ ಸಂಘದ ಮಾಜಿ ಅಧ್ಯಕ್ಷ ಎಸ್.ಲಕ್ಷ್ಮ್ಮಣ ರಾಜ್ಯ ಸರ್ಕಾರಕ್ಕೆ ಶನಿವಾರ ಒತ್ತಾಯಿಸಿದರು.

    ಸೇವೆ ಕಾಯಂ ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ನಗರದಲ್ಲಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರು ಮುಂದುವರೆಸಿರುವ ಅನಿರ್ದಿಷ್ಟಾವಧಿ ಧರಣಿಯಲ್ಲಿ ಪಾಲ್ಗೊಂಡು ಮಾತನಾಡಿದರು.

    ಹೋರಾಟಕ್ಕೆ ಒಂದಲ್ಲೊಂದು ದಿನ ಖಂಡಿತ ಜಯ ಸಿಗಲಿದೆ. ಅದರಿಂದ ಹಿಂದಕ್ಕೆ ಸರಿಯುವ, ವಿಮುಖರಾಗುವ ಅಗತ್ಯವಿಲ್ಲ. ನಿಮ್ಮ ನ್ಯಾಯಯುತ ಚಳವಳಿಗೆ ಬಹಳಷ್ಟು ಸಂಘಟನೆಗಳು ಬೆಂಬಲಿಸಿವೆ ಎಂದರು.

    1984ರಿಂದ ದಶಕದವರೆಗೆ ಅರೆಕಾಲಿಕ ಉಪನ್ಯಾಸಕರಾಗಿದ್ದ ರಾಜ್ಯದ 1,200 ಮಂದಿ ನಿರಂತರ ಹೋರಾಟ ನಡೆಸಿದ್ದರ ಫಲವಾಗಿ 1995ರಲ್ಲಿ ಸುಪ್ರೀಂ ಕೋರ್ಟ್ ಕಾಯಂ ಗೊಳಿಸುವಂತೆ ತೀರ್ಪು ನೀಡಿತು. 2003ರಲ್ಲಿ ಕೊನೆಗೂ ಸರ್ಕಾರ ಇದಕ್ಕೆ ಸ್ಪಂದಿಸಿತು ಎಂದು ಹೇಳಿದರು.

    ಒಂದೊಮ್ಮೆ ನ್ಯಾಯಯುತ ಬೇಡಿಕೆ ಈಡೇರಿಕೆಗೆ ಸರ್ಕಾರ ಮುಂದಾಗದಿದ್ದರೆ ಬೀದಿ ಚಳವಳಿ ಜತೆಗೆ ಕಾನೂನು ಹೋರಾಟಕ್ಕೂ ಸಿದ್ಧರಾಗಬೇಕು. ಈ ನಿಟ್ಟಿನಲ್ಲಿ ಈಗಲೇ ಸಿದ್ಧತೆ ಮಾಡಿಕೊಳ್ಳಿ ಎಂದು ಸಲಹೆ ನೀಡಿದರು.

    ಅತಿಥಿ ಉಪನ್ಯಾಸಕರ ಸಂಘದ ಅಧ್ಯಕ್ಷ ಡಾ.ಜಿ.ಎಸ್.ಯಶೋಧರ, ಉಪಾಧ್ಯಕ್ಷರಾದ ಡಿ.ಎಂ.ಚಂದನಾ, ಕೆ.ಎಸ್.ಶರತ್‌ಬಾಬು, ಪ್ರಧಾನ ಕಾರ್ಯದರ್ಶಿ ವಿ.ಎಸ್.ಮಂಜುನಾಥ, ಖಜಾಂಚಿ ಡಾ.ಜಗದೀಶ ಕೆರೆನಳ್ಳಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts