More

    ಅಣ್ಣಿಗೇರಿ ಅಮೃತೇಶ್ವರ ಜಾತ್ರಾ ಮಹೋತ್ಸವ ರದ್ದು

    ಅಣ್ಣಿಗೇರಿ: ಈ ಭಾಗದ ಸುಪ್ರಸಿದ್ಧ ಶ್ರೀ ಅಮೃತೇಶ್ವರ ಜಾತ್ರಾ ಮಹೋತ್ಸವವನ್ನು ರದ್ದು ಮಾಡಿ ಜಿಲ್ಲಾಡಳಿತ ಆದೇಶ ಹೊರಡಿಸಿದೆ.

    ಡಿಸೆಂಬರ್ 29ರಂದು ಜಾತ್ರೆ ನಡೆಸುವ ಕುರಿತು ದೇವಸ್ಥಾನ ಕಮಿಟಿಯವರು ಸಿದ್ಧತೆ ಮಾಡಿಕೊಂಡಿದ್ದರು. ಆದರೆ, ಕರೊನಾ ಮಹಾಮಾರಿ ಹಿನ್ನೆಲೆಯಲ್ಲಿ ಜಾತ್ರೆ ನಡೆಸದಂತೆ ಜಿಲ್ಲಾಡಳಿತದ ಸೂಚಿಸಿದೆ.

    ಜನವರಿಯಲ್ಲಿ ಕರೊನಾ ಅಲೆ ಹೆಚ್ಚಾಗುವ ಸಾಧ್ಯತೆಯಿರುವುದರಿಂದ ಜಾತ್ರೆಯನ್ನು ರದ್ದುಗೊಳಿಸಲಾಗಿದ್ದು, ರಥಕ್ಕೆ ಅಲಂಕಾರ ಸೇರಿದಂತೆ ಧಾರ್ವಿುಕ ವಿಧಿ ವಿಧಾನ ನೆರವೇರಿಸಲು ಅವಕಾಶ ಮಾಡಿಕೊಟ್ಟಿದೆ.

    ಜಿಲ್ಲಾಧಿಕಾರಿಗಳ ಆದೇಶದಂತೆ ಈ ವರ್ಷದ ಅಮೃತೇಶ್ವರನ ಮಹಾರಥೋತ್ಸವ ರದ್ದುಗೊಳಿಸಲಾಗಿದೆ. ಆದರೆ, ದೇವರ ದರ್ಶನಕ್ಕೆ ಯಾವುದೇ ನಿರ್ಬಂಧವಿಲ್ಲ. ವಿವಿಧ ಪೂಜೆಗಳನ್ನು ಸಾಂಕೇತಿಕವಾಗಿ ನೆರವೇರಿಸಲಾಗುವುದು. ದೇವರ ದರ್ಶನಕ್ಕೆ ಬರುವಾಗ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಜೊತೆಗೆ ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು. | ಲಿಂಗರಾಜ ಕುಲಕರ್ಣಿ ಧರ್ಮದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts