More

    ಅಣ್ಣಾಸಾಹೇಬರಿಂದ ಕಾರ್ಖಾನೆ ಪುನಶ್ಚೇತನ

    ನಿಪ್ಪಾಣಿ, ಬೆಳಗಾವಿ: ಆರ್ಥಿಕವಾಗಿ 200 ಕೋಟಿ ರೂ. ನಷ್ಟದಲ್ಲಿದ್ದ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯನ್ನು ಸಂಸದ ಅಣ್ಣಾಸಾಹೇಬ ಜೊಲ್ಲೆ ಅವರು ಕಾರ್ಮಿಕರ ಹಿತದೃಷ್ಟಿಯಿಂದಾಗಿ ವಿಶೇಷ ಶ್ರಮ ವಹಿಸಿ ಪುನಶ್ಚೇತನಗೊಳಿಸಿದರು ಎಂದು ಮುಜರಾಯಿ ಸಚಿವೆ ಶಶಿಕಲಾ ಜೊಲ್ಲೆ ಹೇಳಿದರು.

    ಇಲ್ಲಿನ ಶ್ರೀ ಹಾಲಸಿದ್ಧನಾಥ ಸಹಕಾರಿ ಸಕ್ಕರೆ ಕಾರ್ಖಾನೆಯಿಂದ ಶನಿವಾರ ಆಯೋಜಿಸಿದ್ದ 34ನೇ ವಾರ್ಷಿಕ ಸಭೆ ಉದ್ಘಾಟಿಸಿ ಅವರು ಮಾತನಾಡಿದರು. ಹಾಲನಾಥ ಕಾರ್ಖಾನೆ ನಮ್ಮ ರೈತರ ಜೀವನಾಡಿಯಾಗಿ ಕೆಲಸ ಮಾಡುತ್ತಿದೆ. ಪ್ರತಿದಿನ 8500 ಮೆ. ಟನ್ ಕಬ್ಬು ನುರಿಸುವಿಕೆ, 150 ಕೆ.ಎಲ್.ಪಿ.ಡಿ ಇಥೆನಾಲ್ ಉತ್ಪಾದನೆ, ವಿದ್ಯುತ್ ಉತ್ಪಾದನೆ ಮಾಡಲು ಯಂತ್ರೋಪಕರಣಗಳು ಸಜ್ಜಾಗಿವೆ. ಮುಂದಿನ ದಿನಗಳಲ್ಲಿ ಕಾರ್ಖಾನೆ ನಂಬರ್ ಒನ್ ಸ್ಥಾನ ಪಡೆಯಲಿದೆ ಎನ್ನುವ ವಿಶ್ವಾಸ ವ್ಯಕ್ತಪಡಿಸಿದರು. ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ. ಆರ್ಥಿಕ ದಿವಾಳಿಯಾಗಿದ್ದ ಕಾರ್ಖಾನೆ ಇಂದು ಸದೃಢವಾಗಿ ಬೆಳೆದು ನಿಂತಿದೆ. 250 ಕೋಟಿ ರೂ. ವೆಚ್ಚದಲ್ಲಿ ಕಾರ್ಖಾನೆಯ ಉತ್ಪಾದನಾ ಕಾರ್ಯಕ್ಷಮತೆ ಹೆಚ್ಚಿಸಲಾಗುತ್ತಿದೆ. ರೈತರ ಕಬ್ಬಿಗೆ ಸ್ಪರ್ಧಾತ್ಮಕ ಬೆಲೆ ನೀಡುತ್ತೇವೆ ಎಂದರು.

    ಸಭೆಯಲ್ಲಿ ಅಣ್ಣಾಸಾಹೇಬ ಜೊಲ್ಲೆ ಅವರ ತಾಯಿ ಲಕ್ಷ್ಮೀಬಾಯಿ ಜೊಲ್ಲೆ ಹಾಗೂ ಮಾಜಿ ಸಚಿವ ಉಮೇಶ ಕತ್ತಿ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
    ಕಾರ್ಯಾಧ್ಯಕ್ಷ ಚಂದ್ರಕಾಂತ ಕೋಠಿವಾಲೆ, ಎಂಡಿ ಶಿವ ಕುಲಕರ್ಣಿ, ಆಶಾಜ್ಯೋತಿ ಶಾಲೆಯ ಅಧ್ಯಕ್ಷ ಜ್ಯೋತಿಪ್ರಸಾದ ಜೊಲ್ಲೆ, ಸಂಚಾಲಕ ಅಪ್ಪಾಸಾಹೇಬ ಜೊಲ್ಲೆ, ಅವಿನಾಶ ಪಾಟೀಲ, ವಿಶ್ವನಾಥ ಕಮತೆ, ರಾಮಗೊಂಡ ಪಾಟೀಲ, ಆರ್.ವೈ.ಪಾಟೀಲ, ಸಮಿತ ಸಾಸನೆ, ಸುಕುಮಾರ ಪಾಟೀಲ, ರಾಜಾರಾಮ ಖೋತ, ಪ್ರತಾಪ ಮೆತ್ರಾನಿ, ಕಲ್ಲಪ್ಪ ನಾಯಿಕ, ಉಜ್ವಲಾ ಶಿಂಧೆ, ಮನಿಷಾ ರಾಂಗೋಳೆ, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಬೀರೇಶ್ವರ ಸಹಕಾರಿಯ ಜಯಾನಂದ ಜಾಧವ, ಬಿಜೆಪಿ ಪದಾಧಿಕಾರಿಗಳು, ಕಾರ್ಖಾನೆ ಸದಸ್ಯರು, ಸಿಬ್ಬಂದಿ, ರೈತರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts