More

    ಅಟ್ರಾಸಿಟಿ ಕಾಯ್ದೆ ದುರುಪಯೋಗ ಬೇಡ

    ಕಡೂರು: ಅಸ್ಪೃ್ಯತಾ ತಡೆ ಕಾಯ್ದೆಯಡಿ ದೂರು ನೀಡಿದಾಕ್ಷಣ ಪ್ರಕರಣ ದಾಖಲಿಸುವಂತಿಲ್ಲ. ಪರಿಶೀಲನೆ ನಡೆಸಿದ ಬಳಿಕವೇ ಪ್ರಕರಣ ದಾಖಲಿಸಿಕೊಳ್ಳಲಾಗುತ್ತದೆ. ರಕ್ಷಣೆಗೆ ಇರುವ ಕಾಯ್ದೆಯನ್ನು ದುರುಪಯೋಗ ಪಡಿಸಿಕೊಳ್ಳಬಾರದು ಎಂದು ಎಸ್ಪಿ ಎಂ.ಕೆ.ಅಕ್ಷಯ್ ಕಿವಿಮಾತು ಹೇಳಿದರು.

    ಪಟ್ಟಣದ ಎಪಿಎಂಸಿ ಆವರಣದಲ್ಲಿ ಕಡೂರು ಪೊಲೀಸ್ ಠಾಣೆ ಭಾನುವಾರ ಏರ್ಪಡಿಸಿದ್ದ ದಲಿತರ ಕುಂದುಕೊರತೆ ತಾಲೂಕು ಮಟ್ಟದ ಸಭೆಯಲ್ಲಿ ಮಾತನಾಡಿದ ಅವರು, ಅಸ್ಪ್ರಶ್ಯತಾ ತಡೆ ನಿವಾರಣಾ ಕಾಯ್ದೆಯಡಿ ಸುಖಾಸುಮ್ಮನೆ ದೂರು ನೀಡಲಾಗುತ್ತಿದೆ. ಇದಕ್ಕೆ ಪ್ರತಿದೂರುಗಳ ಸಹ ದಾಖಲಾಗುತ್ತಿವೆ. ಜನರೂ ಸಹ ಬುದ್ದಿವಂತರಾಗಿದ್ದು ಗಲಾಟೆಗಳು ಆಗುತ್ತಿದ್ದಂತೆ ಎರಡು ಕಡೆಯವರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಎಲ್ಲ ಪ್ರಕರಣಗಳಲ್ಲಿ ದಿಢೀರ್ ವ್ಯಕ್ತಿಗಳನ್ನು ಬಂಧಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

    ಜಿಲ್ಲೆಯಲ್ಲಿ ಕಳೆದ ಸಾಲಿನಲ್ಲಿ 102 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದು ಈ ವರ್ಷ 82 ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 6 ಪ್ರಕರಣಗಳಿಗೆ ಬಿ ರಿಪೋರ್ಟ್ ಹಾಕಲಾಗಿದ್ದು ಉಳಿದವು ತನಿಖೆಯಲ್ಲಿವೆ. ಪೊಲೀಸ್ ತಮ್ಮ ಕರ್ತವ್ಯವನ್ನು ಪ್ರಾಮಾಣಿಕವಾಗಿ ಮಾಡಿದ್ದಾರೆ ಎಂದರು.

    ದೌರ್ಜನ್ಯ ಪ್ರಕರಣಗಳಲ್ಲಿ ಹಲವು ಭೂಮಿ ವ್ಯಾಜ್ಯಕ್ಕೆ ಸಂಬಂಧಪಟ್ಟಿವೆ. ಈ ಕುರಿತು ಕಂದಾಯ ಇಲಾಖೆಯ ಅಧಿಕಾರಿಗಳು, ಪಂಚಾಯಿತಿ ಇಲಾಖೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ರ್ಚಚಿಸಿ ಬಗೆಹರಿಸುವ ಪ್ರಯತ್ನ ಮಾಡುವುದಾಗಿಯೂ ಭರವಸೆ ನೀಡಿದರು.

    ಡಿವೈಎಸ್​ಪಿ ನಾಗರಾಜ್, ವೃತ್ತ ನಿರೀಕ್ಷಕ ಶಿವಕುಮಾರ್, ಪಿಎಸ್​ಐ ಎನ್.ಕೆ.ರಮ್ಯಾ, ಪಂಚನಹಳ್ಳಿ, ಸಿಂಗಟಗೆರೆ, ಯಗಟಿ, ಸಖರಾಯಪಟ್ಟಣ ಮತ್ತು ಬೀರೂರು ಠಾಣೆಯ ಪಿಎಸ್​ಐಗಳು, ಸಿಬ್ಬಂದಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts