More

    ಅಚ್ಚುಕಟ್ಟಾಗಿದೆ ಮೋದಿ ಸರ್ಕಾರ

    ಹಿರೇಕೆರೂರ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಅತ್ಯಂತ ಪ್ರಾಮಾಣಿಕವಾಗಿ, ಯಶಸ್ವಿಯಾಗಿ ಒಂದು ವರ್ಷ ಪೂರೈಸಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ ಹೇಳಿದರು.

    ಕೇಂದ್ರ ಬಿಜೆಪಿ ಸರ್ಕಾರದ ಒಂದು ವರ್ಷದ ಸಾಧನೆ ಕುರಿತು ಪ್ರಕಟಿಸಿದ ಕರಪತ್ರಗಳನ್ನು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ಬಿಡುಗಡೆಗೊಳಿಸಿ, ನಂತರ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು. ಕೋವಿಡ್-19, ಚಂಡಮಾರುತ, ಪ್ರವಾಹ, ಮಿಡತೆಗಳ ಕಾಟ, ಹೀಗೆ ಒಂದಿಲ್ಲೊಂದು ಸಮಸ್ಯೆಗಳ ನಡುವೆಯೂ ಅತ್ಯಂತ ವಿಶ್ವಾಸದಿಂದ ದೇಶವನ್ನು ಅಚ್ಚುಕಟ್ಟಾಗಿ ಮೋದಿ ಸರ್ಕಾರ ನಡೆಸುತ್ತಿದೆ. ಜನಪರ, ಬಡವರಪರ ಆಡಳಿತ ನೀಡಿರುವುದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಪ್ರಮುಖ ಹೆಗ್ಗುರುತು ಎಂದರು.

    ಉಗ್ರಾಣ ನಿಗಮ ಅಧ್ಯಕ್ಷ ಯು.ಬಿ. ಬಣಕಾರ ಮಾತನಾಡಿ, ಪ್ರತಿ ಬೂತ್ ಮಟ್ಟದಲ್ಲಿ ಬಿಜೆಪಿ ಕಾರ್ಯಕರ್ತರು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಾಧನೆಗಳ ಕರಪತ್ರಗಳನ್ನು ಮನೆ ಮನೆಗೆ ಮನಮುಟ್ಟುವ ಹಾಗೆ ತಲುಪಿಸಿ, ಈ ಬಗ್ಗೆ ತಿಳಿಹೇಳುವ ಕೆಲಸವಾಗಬೇಕು ಎಂದರು.

    ಬಿಜೆಪಿ ತಾಲೂಕು ಘಟಕದ ಅಧ್ಯಕ್ಷ ಷಣ್ಮುಖ ಮಳಿಮಠ, ತಾ.ಪಂ ಅಧ್ಯಕ್ಷ ರಾಜು ಬಣಕಾರ, ರಾಜಶೇಖರ್ ಹಂಪಾಳಿ, ಗುರುಶಾಂತ್ ಯತ್ತಿನಹಳ್ಳಿ, ಮಹೇಂದ್ರ ಬಡಹಳ್ಳಿ, ಅಶೋಕ್ ಜಾಡಬಂದಿ, ಅಲ್ತಾಫ್ ಖಾನ್ ಪಠಾಣ, ಹನುಮಂತ ಕುರಬರ, ಹರೀಶ ಕಲಾಲ್, ಕಂಠಾಧರ ಅಂಗಡಿ, ಜಿ.ಪಿ.ಪ್ರಕಾಶ, ದೇವರಾಜ್ ನಾಗಣ್ಣನವರ, ಶಂಕರಗೌಡ ಚೆನ್ನಗೌಡರ, ರಮೇಶ ಬಾತವ್ವನವರ ಹಾಗೂ ಇತರರು ಇದ್ದರು.

    ವಿಶ್ವ ಪರಿಸರ ದಿನಾಚರಣೆ: ವಿಶ್ವ ಪರಿಸರ ದಿನಾಚರಣೆ ನಿಮಿತ್ತ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಆವರಣದಲ್ಲಿ ಸಚಿವ ಬಿ.ಸಿ. ಪಾಟೀಲ ಅವರು ಸಸಿ ನೆಟ್ಟು ನೀರುಣಿಸಿದರು. ‘ಮನುಷ್ಯ ಮರದ ಬುಡಕ್ಕೆ ಕೊಡಲಿ ಪೆಟ್ಟು ಹಾಕುತ್ತಿರುವ ಪರಿಣಾಮ ಇಂದು ಆತನ ಜೀವನದ ಬುಡಕ್ಕೆ ಕೊಡಲಿ ಪೆಟ್ಟು ಬೀಳುತ್ತಿದೆ. ಅರಣ್ಯ ಸಂಪತ್ತು ವಿನಾಶದತ್ತ ಸಾಗಿದೆ. ಇದರಿಂದಾಗಿ ಶುದ್ಧ ವಾತಾವರಣ, ಮಳೆ, ಬೆಳೆ ಆಗದೆ ತೊಂದರೆ ಅನುಭವಿಸುವಂತಾಗಿದೆ. ಹೀಗಾಗಿ ಪರಿಸರ ಉಳಿವಿಗಾಗಿ ನಾವೆಲ್ಲರೂ ನಿತ್ಯ ಶ್ರಮೀಸಬೇಕಿದೆ’ ಎಂದರು.

    ಕಾಲೇಜ್ ಪ್ರಾಚಾರ್ಯ ಡಾ.ಎಸ್.ಪಿ. ಗೌಡರ ಅಧ್ಯಕ್ಷತೆ ವಹಿಸಿದ್ದರು. ಕಾಲೇಜ್ ಆವರಣದಲ್ಲಿ ನೂರಾರು ಸಸಿಗಳನ್ನು ನೆಡಲಾಯಿತು. ಕುಸುಮಾ ಬಣಕಾರ, ನಾಗರತ್ನ ಕೋರಿಗೌಡ್ರ, ತಾ.ಪಂ ಇಒ ಶ್ರೀನಿವಾಸ್.ಎಚ್.ಜಿ., ಸಿಪಿಐ ಮಂಜುನಾಥ ಪಂಡಿತ್, ಪ್ರೊ.ಎಲ್.ಎಂ. ಪೂಜಾರ, ಮಂಜುನಾಥ ತಂಬಾಕದ, ಕಾಲೇಜು ಮತ್ತು ಅರಣ್ಯ ಇಲಾಖೆ ಸಿಬ್ಬಂದಿ ಇದ್ದರು.

    ವಲಯ ಅರಣ್ಯಾಧಿಕಾರಿ ಹೇಮಗಿರಿ ಅಂಗಡಿ, ವಲಯ ಅರಣ್ಯಾಧಿಕಾರಿ ರಾಜೀವ್ ಬಿರಾದರ, ಪ್ರೊ.ಹೇಮಲತಾ ನಿರ್ವಹಿಸಿದರು.

    ದೇಶದ ಅಭಿವೃದ್ಧಿಗೆ ಹಲವು ಯೋಜನೆ

    ಬ್ಯಾಡಗಿ: ತಾಲೂಕು ಭೂನ್ಯಾಯ ಮಂಡಳಿ, ಆಶ್ರಯ ಸಮಿತಿ ಸೇರಿ ಹಲವು ನಾಮನಿರ್ದೇಶಿತ ಸದಸ್ಯರ ಆಯ್ಕೆಯಾಗಿದ್ದು, ಶೀಘ್ರವೇ ಪ್ರಕಟಿಸಲಾಗುತ್ತದೆ. ಶಾಸಕರಾಗುವ ಮುನ್ನ ಕೊಟ್ಟ ಭರವಸೆಯಂತೆ ನೀರಾವರಿ ಯೋಜನೆ ಜಾರಿಗೊಳಿಸಲಾಗುತ್ತದೆ ಎಂದು ಶಾಸಕ ವಿರೂಪಾಕ್ಷಪ್ಪ ಬಳ್ಳಾರಿ ಹೇಳಿದರು. ಪಟ್ಟಣದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೋದಿಯವರು ಪ್ರಧಾನಿಯಾದ ಬಳಿಕ ರಕ್ಷಣಾ ಕ್ಷೇತ್ರಕ್ಕೆ ಆಧುನಿಕ ಸೌಲಭ್ಯ ಒದಗಿಸಲಾಗಿದೆ. ಸೈನಿಕರ ರಕ್ಷಣೆ ಮೂಲಕ ದೇಶದ ಭದ್ರತೆಗೆ ಒತ್ತು ನೀಡಿದ್ದಾರೆ. ಲಾಕ್​ಡೌನ್ ಅವಧಿಯಲ್ಲಿ ದೇಶದಲ್ಲಿ ಬಡವರಿಗೆ ತೊಂದರೆಯಾಗದಂತೆ ಪಡಿತರ ವಿತರಣೆ, ನರೇಗಾ ಯೋಜನೆ, ಹಿರಿಯ ನಾಗರಿಕರು, ವಿಧವೆಯರು, ಅಂಗವಿಕಲರಿಗೆ ವಿಶೇಷ ನೆರವು ಯೋಜನೆ ಕಲ್ಪಿಸಿದೆ. ಕರೊನಾ ವೈರಸ್ ತಡೆಗಟ್ಟಲು ಪ್ರಧಾನಿ ಕೈಗೊಂಡ ನಿರ್ಣಯ ವಿಶ್ವದಲ್ಲಿ ಪ್ರಶಂಸೆಗೆ ಪಾತ್ರವಾಗಿದೆ ಎಂದರು. ಬಿಜೆಪಿ ತಾಲೂಕು ಅಧ್ಯಕ್ಷ ಸುರೇಶ ಆಸಾದಿ, ಮಾಜಿ ಅಧ್ಯಕ್ಷ ಶಂಕ್ರಪ್ಪ ಮಾತನವರ, ತಾ.ಪಂ. ಸದಸ್ಯ ಯಲ್ಲನಗೌಡ್ರ ಕರೇಗೌಡ್ರ, ಪುರಸಭೆ ಸದಸ್ಯರಾದ ಬಸವರಾಜ ಛತ್ರದ, ವಿನಯಕುಮಾರು ಹಿರೇಮಠ, ಈರಣ್ಣ ಬಣಕಾರ, ಶಿವಯೋಗಿ ಅಂಗಡಿ, ಶಿವಬಸಣ್ಣ ಕುಳೇನೂರು, ಮುರಿಗೆಪ್ಪ ಶೆಟ್ಟರ್, ವೀರೇಂದ್ರ ಶೆಟ್ಟರ್, ಶಿವಯೋಗಿ ಶಿರೂರು, ಸಂಜೀವ ಮಡಿವಾಳರ, ವಿಷ್ಣುಕಾಂತ ಬೆನ್ನೂರು, ಕೆ.ಸಿ.ಸೊಪ್ಪಿನಮಠ, ಅರುಣ ಪಾಟೀಲ, ವಿಜಯ ಬಳ್ಳಾರಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts