More

    ಅಗ್ನಿಶಾಮಕ ಇಲಾಖೆಗೆ ರಕ್ಷಣೆ ಸಾಮಗ್ರಿ

    ಹುಬ್ಬಳ್ಳಿ: ಪ್ರಕೃತಿ ವಿಕೋಪ ಸಂದರ್ಭಗಳಲ್ಲಿ ಸೂಕ್ತ ರಕ್ಷಣೆ ಕಾರ್ಯ ಕೈಗೊಳ್ಳಲು ಹಾಗೂ ಮುನ್ನೆಚ್ಚರಿಕೆ ವಹಿಸಲು ಅನುಕೂಲವಾಗುವಂತೆ 25.39 ಲಕ್ಷ ರೂ. ಮೌಲ್ಯದ ರಕ್ಷಣಾ ಸಾಮಗ್ರಿಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಇಲ್ಲಿಯ ಅಗ್ನಿ ಶಾಮಕ ಇಲಾಖೆಗೆ ಹಸ್ತಾಂತರಿಸಿದರು.

    ರಕ್ಷಣೆ ಸಾಮಗ್ರಿಗಳನ್ನು ಖರೀದಿಸಲು ಧಾರವಾಡ ಜಿಲ್ಲೆಗೆ ಒಟ್ಟು 35 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. 60 ಲೈಫ್ ಜಾಕೆಟ್, 10 ಪೆಟ್ರೋಲ್ ಡ್ರೖೆವ್ ಚೈನ್, 6 ನೈಲಾನ್ ರೋಪ್, 6 ಎಲ್​ಐಡಿ ಸರ್ಚ್ ಲೈಟ್, 6 ಬೋಲ್ಟ್ ಕಟರ್ಸ್, 200 ರೇನ್​ಕೋಟ್, ಬ್ಯಾಟರಿ ಆಪರೇಟೆಡ್ ಲೈಟ್, 2 ಇನ್ ಫ್ಲ್ಯಾಟೇಬಲ್ ಬೋಟ್, 2 ಒಬಿಎಂ ಮೋಟಾರ್ ಖರೀದಿಸಿ ಅಗ್ನಿ ಶಾಮಕ ಇಲಾಖೆಗೆ ಹಸ್ತಾಂತರಿಸಲಾಗಿದೆ. ಶಾಸಕರಾದ ಅರವಿಂದ ಬೆಲ್ಲದ, ಪ್ರಸಾದ ಅಬ್ಬಯ್ಯ , ಜಿಲ್ಲಾಧಿಕಾರಿ ದೀಪಾ ಚೋಳನ್, ಮುಖ್ಯ ಅಗ್ನಿಶಾಮಕ ಅಧಿಕಾರಿ ಈಶ್ವರ ನಾಯಕ್, ಪ್ರಾದೇಶಿಕ ಅಗ್ನಿಶಾಮಕ ಅಧಿಕಾರಿ ಶ್ರೀಕಾಂತ, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿನಾಯಕ ಹಟ್ಟೆಕಾರ್, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts