More

    ಅಗತ್ಯ ಸಿದ್ಧತೆಗೆ ಡಿಸಿ ನಿರ್ದೇಶನ

    ಸವಣೂರ: ಪಟ್ಟಣದ ಇಬ್ಬರಲ್ಲಿ ಕರೊನಾ ವೈರಸ್ ಪತ್ತೆಯಾದ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ಮಂಗಳವಾರ ಭೇಟಿ ನೀಡಿ ಪರಿಶೀಲಿಸಿದರು.

    ಎಸ್​ಎಂ ಕೃಷ್ಣ ನಗರದಲ್ಲಿರುವವರಿಗೆ ನಿತ್ಯ ಆಹಾರದ ಕಿಟ್, ಉಚಿತವಾಗಿ ಹಾಲು, ಔಷಧ, ಶುದ್ಧ ಕುಡಿಯುವ ನೀರು ಒದಗಿಸಲು ಸ್ಥಳೀಯ ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಪ್ರದೇಶದಲ್ಲಿ ನಿತ್ಯ 2 ಬಾರಿ ಔಷಧ ಸಿಂಪಡಿಸುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚಿಸಿದರು. ಆಶಾ ಹಾಗೂ ಆರೋಗ್ಯ ಕಾರ್ಯಕರ್ತೆಯರಿಗೆ ಫಿವರ್ ಕ್ಲಿನಿಕ್​ನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ.

    ನಂತರ ಸವಣೂರು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಕರೊನಾ ಚಿಕಿತ್ಸೆಗೆ 34 ಬೆಡ್ ಸಿದ್ಧಪಡಿಸಬೇಕು. ಆರೋಗ್ಯ ಕೇಂದ್ರದಲ್ಲಿ ತಾತ್ಕಾಲಿಕ ಒಪಿಡಿ ಆರಂಭಿಸಬೇಕು. ಪಟ್ಟಣದಲ್ಲಿರುವ ಎಚ್​ಎಲ್​ವಿ ಶಾಲೆಯಲ್ಲಿ ತಾತ್ಕಾಲಿಕವಾಗಿ ಒಪಿಡಿ ಆರಂಭಿಸಲು ಆರೋಗ್ಯ ಅಧಿಕಾರಿಗಳಿಗೆ ಸೂಚಿಸಿದರು.

    ವಾಕರ ಸಾರಿಗೆ ಸಂಸ್ಥೆಯಿಂದ ಸಂಚಾರಿ ಫಿವರ್ ಕ್ಲಿನಿಕ್ ಸಿದ್ಧಗೊಂಡಿದ್ದು, ಅದನ್ನು ಸವಣೂರಿನ ಕಂಟೈನ್ಮೆಂಟ್ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಬಿಡಬೇಕು. ಸವಣೂರ ಪಟ್ಟಣವನ್ನು ಬಫ್​ರ್ ಜೋನ್ ಎಂದು ಗುರುತಿಸಲಾಗಿದೆ ಎಂದರು.

    ಎಸಿ ಅನ್ನಪೂರ್ಣ ಮುದಕಮ್ಮನವರ ಮಾತನಾಡಿ, ಚೆಕ್​ಪೋಸ್ಟ್, ಸೀಲ್​ಡೌನ್, ಬಫರ್​ಜೋನ್, ಕಂಟೈನ್ಮೆಂಟ್ ಜೋನ್​ಗಳಿಗೆ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಸಾರ್ವಜನಿಕರಿಗೆ ಜಾಗೃತಿ ಮೂಡಿಸಲು ಸಿಬ್ಬಂದಿಯನ್ನು ನೇಮಿಸಲಾಗಿದೆ. ಸಮಾಜ ಕಲ್ಯಾಣ ಇಲಾಖೆ ವಸತಿ ನಿಲಯದಲ್ಲಿ ಕಂಟ್ರೋಲ್ ರೂಂ ತೆರೆಯಲಾಗಿದೆ. ಸಾರ್ವಜನಿಕರು ತುರ್ತು ಸೇವೆಗಾಗಿ 08378-24188 ಹಾಗೂ 08378-241777ಸಂಖ್ಯೆಗೆ ಕರೆ ಮಾಡಬಹುದು ಎಂದರು.



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts