More

    ಅಕ್ಕಿ ಅಂಗಡಿಯಲ್ಲಿ ಕೆಲಸಗಾರನಿಂದ ಮಾಲೀಕರಿಗೆ 5.60 ಲಕ್ಷ ರೂ. ಮೋಸ

    ಹುಬ್ಬಳ್ಳಿ: ಇಲ್ಲಿನ ಅಮರಗೋಳದ ಹೋಲ್​ಸೇಲ್ ಅಕ್ಕಿ ಅಂಗಡಿಯೊಂದರಲ್ಲಿ 7 ವರ್ಷಗಳಿಂದ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ವ್ಯಕ್ತಿ ಮಾಲೀಕರಿಗೆ ತಿಳಿಯದಂತೆ ಅಕ್ಕಿ ಮಾರಾಟ ಮಾಡಿ, ಬಾಕಿ ಹಣ ಪಡೆದು 5.60 ಲಕ್ಷ ರೂ. ವಂಚಿಸಿದ್ದಾನೆ.

    ಎಚ್.ಎಸ್. ಜಲಾಲಿ ವಂಚಿಸಿದ ಆರೋಪಿ. ಈತ ಎಂ.ಎಚ್. ಟ್ರೇಡರ್ಸ್​ನಲ್ಲಿ ಕೆಲಸ ಮಾಡುತ್ತಿದ್ದ. ಮಾಲೀಕರ ಕಾಲು ಮುರಿದಿದ್ದರಿಂದ ಅಕ್ಟೋಬರ್ 2019ರಿಂದ ಅಂಗಡಿಗೆ ಹೋಗಲಾಗದೇ ಜಲಾಲಿಗೆ ವ್ಯವಹಾರ ನೋಡಿಕೊಳ್ಳಲು ಹೇಳಿ ಅಂಗಡಿ ಕೀಲಿ ಕೊಟ್ಟಿದ್ದರು. 5 ತಿಂಗಳ ಬಳಿಕ ಮಾಲೀಕರು ಅಂಗಡಿಗೆ ಬಂದಾಗ ವಂಚನೆ ಬಯಲಿಗೆ ಬಂದಿದೆ.

    2,40,000 ರೂ. ಮೌಲ್ಯದ 120 ಬಾಸುಮತಿ ಅಕ್ಕಿ ಚೀಲಗಳನ್ನು ಜಲಾಲಿ ಮಾರಿ ಹಣವನ್ನು ಮಾಲೀಕರಿಗೆ ನೀಡದೇ ವಂಚಿಸಿದ್ದಾನೆ. ಕೆಲ ಹೋಟೆಲ್​ಗಳಿಂದ ಬರಬೇಕಿದ್ದ ಬಾಕಿ ಹಣ 1,70,000 ರೂ. ಪಡೆದು ಸ್ವಂತಕ್ಕೆ ಖರ್ಚು ಮಾಡಿದ್ದಾನೆ. ಇದರ ಜತೆಗೆ ಸಾಲ ತೀರಿಸಲೆಂದು ಮಾಲೀಕರಿಂದ 1,50,000 ರೂ. ಪಡೆದು ವಾಪಸ್ ಕೊಡದೇ ವಂಚಿಸಿದ್ದಾನೆ ಎಂದು ಎಂ.ಎಚ್. ಟ್ರೇಡರ್ಸ್ ಮಾಲೀಕರು ಎಪಿಎಂಸಿ- ನವನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಿಸಿದ್ದಾರೆ.

    ಜೀವ ಬೆದರಿಕೆ: ಪೊಲೀಸ್ ದೂರು ನೀಡದೇ ಒಪ್ಪಂದ ಮಾಡಿಕೊಳ್ಳಿ ಎಂದು ಜಲಾಲಿ ಸ್ನೇಹಿತರಾದ ಸೈಯದ್, ವಾಜೀದ, ಎಜಾಜ ಹಾಗೂ ಫರ್ಹಾನ್ ಎಂಬುವರು ಮಾಲೀಕರಿಗೆ ಜೀವ ಬೆದರಿಕೆ ಹಾಕಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts