More

    ಅಕಾಲಿಕ ಮಳೆಯ ಅವಾಂತರ

    ಧಾರವಾಡ: ನಗರದಲ್ಲಿ ಶನಿವಾರ ಸಂಜೆ ಸುರಿದ ಅಕಾಲಿಕ ಮಳೆ ಮತ್ತೊಂದು ಅವಾಂತರ ಸೃಷ್ಟಿಸಿದೆ. ಗಂಟೆ ಕಾಲ ಸುರಿದ ಬಿರುಸಿನ ಮಳೆಗೂ ಮುನ್ನ ಆಲಿಕಲ್ಲುಗಳು ಉದುರಿದವು. ಗ್ರಾಮೀಣ ಪ್ರದೇಶದ ರೈತರಿಗೆ ಸಂಕಷ್ಟ ತಂದೊಡ್ಡಿದ್ದು, ಬೇಸಿಗೆ ಬೆಳೆ ಹಾಗೂ ತೋಟಗಾರಿಕೆ ಬೆಳೆಗಳು ನಾಶವಾಗಿವೆ. ತಾಲೂಕಿನ ಕ್ಯಾರಕೊಪ್ಪ ಗ್ರಾಮದ ಸುರೇಖಾ ಐರಣಿ ಎಂಬುವರ ಬಾಳೆ ತೋಟ ಹಾನಿಗೀಡಾಗಿದೆ. ಬಿರುಗಾಳಿ-ಮಳೆಗೆ ಸುಮಾರು 14 ಮಾವಿನ ಮರಗಳು ಕಿತ್ತು ಬಿದ್ದಿವೆ. 5 ಎಕರೆ ತೋಟದಲ್ಲಿ ಬೆಳೆದಿದ್ದ ಬಾಳೆ ಬೆಳೆ ನೆಲಕಚ್ಚಿದೆ. ಬಾಳೆ ಗಿಡಗಳು ಕಿತ್ತು ಬಿದ್ದಿದ್ದು, ಗೊನೆಗಳು ನೆಲಕ್ಕಿಳಿದಿವೆ. ಇದರಿಂದ ಲಕ್ಷಾಂತರ ರೂ. ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

    ಹುಬ್ಬಳ್ಳಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸಂಜೆ ಮಳೆ ಸುರಿದಿದ್ದು, ರಸ್ತೆ ಗುಂಡಿಗಳೆಲ್ಲ ತುಂಬಿವೆ. ಮಧ್ಯಾಹ್ನದ ನಂತರ ಮೋಡ ಮುಸುಕಿ ಮಳೆ ಬರುವ ಮುನ್ಸೂಚನೆ ನೀಡಿತ್ತು. ಸಂಜೆ ವೇಳೆಗೆ ಗಾಳಿ ಸಹಿತ ಮಳೆ ಸುರಿಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts