More

    ಅಕಾಲಿಕ ಮಳೆಗೆ ನೆಲಕ್ಕುರುಳಿದ ಭತ್ತ

    ಕೊಡೇಕಲ್ : ವಲಯದಲ್ಲಿ ಗುರುವಾರ ಸಂಜೆ ಸುರಿದ ಬಿರುಗಾಳಿ ಮಿಶ್ರಿತ ಅಕಾಲಿಕ ಮಳೆಗೆ ಕೊಡೇಕಲ್ ಹೋಬಳಿ ವಲಯದ ಯರಕಿಹಾಳ, ಕುರೇಕನಾಳ, ಗೆದ್ದಲಮರಿ, ರಾಜವಾಳ, ಬೈಲಕುಂಟಿ, ಅಮ್ಮಾಪುರ ಎಸ್.ಕೆ.ಸೇರಿದಂತೆ ಇನ್ನಿತರ ಗ್ರಾಮಗಳಲ್ಲಿ ಅಪಾರ ಪ್ರಮಾಣದ ಭತ್ತದ ಬೆಳೆ ಹಾನಿಯಾಗಿದೆ.
    ಕೋಯ್ಲಿನ ಹಂತಕ್ಕೆ ಬಂದಿದ್ದ ಆರ್‌ಎನ್‌ಆರ್ ತಳಿಯ ಭತ್ತದ ಬೆಳೆಗೆ ಹೆಚ್ಚಿನ ಹಾನಿಯಾಗಿದ್ದು, ರೈತರಿಗೆ ಭಾರಿ ನಷ್ಟವುಂಟು ಮಾಡಿದೆ. ಎಕರೆಗೆ ಅಂದಾಜು ೩೦ರಿಂದ ೪೦ ಚೀಲ ಭತ್ತ ಬೆಳೆಯುವ ನಿರೀಕ್ಷೆಯಲ್ಲಿದ್ದ ರೈತರಿಗೆ ಈ ಅಕಾಲಿಕ ಮಳೆ ಆಘಾತ ತರಿಸಿದೆ.
    ಅಕಾಲಿಕ ಮಳೆಯಿಂದ ಹಾನಿಗೊಳಗಾದ ಬೆಳೆ ಸಮೀಕ್ಷೆಯನ್ನು ಕೃಷಿ ಮತ್ತು ಕಂದಾಯ ಇಲಾಖೆ ಅಧಿಕಾರಿಗಳು ಜಮೀನುಗಳಿಗೆ ಭೇಟಿ ನೀಡಿ ಸಮೀಕ್ಷೆ ನಡೆಸುತ್ತಿದ್ದಾರೆ. ನಂತರ ಮಾತನಾಡಿದ ಕೃಷಿ ಅಧಿಕಾರಿ ರಾಮನಗೌಡ ಮಾಲಿ ಪಾಟೀಲ್, ಈಗಾಗಲೇ ವಲಯದ ಹಲವು ಗ್ರಾಮಗಳಲ್ಲಿ ಅಕಾಲಿಕ ಮಳೆಗೆ ಭತ್ತ, ಮೆಣಸಿನ ಬೆಳೆಗಳಿಗೆ ಅಪಾರ ಹಾನಿಯಾಗಿದ್ದು, ಜಂಟಿ ಸಮೀಕ್ಷೆ ಕಾರ್ಯ ನಡೆದಿದ್ದು, ಎರಡು ದಿನದಲ್ಲಿ ಪೂರ್ಣಗೊಳಿಸಿ ಮೇಲಧಿಕಾರಿಗಳಿಗೆ ವರದಿ ಸಲ್ಲಿಸಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts