More

    ಅಂತೂ ಜನರ ಬಳಕೆಗೆ ಮುಕ್ತಗೊಂಡ ಶೌಚಗೃಹ

    ಶಿರಹಟ್ಟಿ: ಕಳೆದ 4 ವರ್ಷಗಳ ಹಿಂದೆ ಪಟ್ಟಣದ ಮ್ಯಾಗೇರಿ ಓಣಿಯಲ್ಲಿ ನಿರ್ವಿುಸಿದ್ದ ಪುರುಷ ಮತ್ತು ಮಹಿಳಾ ಸಮುದಾಯ ಶೌಚಗೃಹಗಳಿಗೆ ಬೀಗದಿಂದ ಮುಕ್ತಿ ದೊರೆತ್ತಿದೆ.

    ಪ.ಪಂ. ಹಿರಿಯ ಆರೋಗ್ಯ ನಿರೀಕ್ಷಕ ಎನ್.ಎಚ್. ಹಾದಿಮನಿ ಸೂಕ್ತ ವ್ಯವಸ್ಥೆ ಕಲ್ಪಿಸಿದ್ದರಿಂದ ವಾರ್ಡ್ ಸದಸ್ಯರಾದ ಫಕೀರೇಶ ರಟ್ಟಿಹಳ್ಳಿ, ನೀಲವ್ವ ಹುಬ್ಬಳ್ಳಿ ಅವರು ಮಂಗಳವಾರ ಶೌಚಗೃಹಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.

    ಪಟ್ಟಣದ ಮ್ಯಾಗೇರಿ ಓಣಿಯಲ್ಲಿ 2015-16ರಲ್ಲಿ ನಾಗರಿಕರ ಅನುಕೂಲಕ್ಕೆ 12 ಲಕ್ಷ ರೂ. ವಿಶೇಷ ಅನುದಾನದಡಿ ಪುರುಷ ಮತ್ತು ಮಹಿಳಾ ಸಮುದಾಯ ಶೌಚಗೃಹ ನಿರ್ವಿುಸಿ ಅವುಗಳಿಗೆ ಮೂಲ ಸೌಲಭ್ಯ ಒದಗಿಸದೆ ಬೀಗ ಜಡಿದಿದ್ದರಿಂದ ಅವು ನಿಷ್ಪ್ರಯೋಜಕವಾಗಿದ್ದವು. ಇದರಿಂದ ಜನತೆ ಅನಿವಾರ್ಯವಾಗಿ ಬಯಲು ಶೌಚ ಪದ್ಧತಿ ಮುಂದುವರಿಸಿಕೊಂಡು ಬಂದಿದ್ದರು. ಈ ಸಮಸ್ಯೆ ಮೇಲೆ ಬೆಳಕು ಚೆಲ್ಲಿದ್ದ ‘ವಿಜಯವಾಣಿ’ ಜ. 10ರಂದು ‘ಪಟ್ಟಣದಲ್ಲಿ ಬಯಲು ಬಹಿರ್ದೆಸೆಗೆ ಸಿಗದ ಮುಕ್ತಿ’ ಶೀರ್ಷಿಕೆಯಡಿ ವರದಿ ಪ್ರಕಟಿಸಿತ್ತು. ಇದರಿಂದ ಎಚ್ಚೆತ್ತುಕೊಂಡ ಪ.ಪಂ. ಮುಖ್ಯಾಧಿಕಾರಿ ಮಲ್ಲೇಶ ಎಂ. ಮತ್ತು ಹಿರಿಯ ಆರೋಗ್ಯ ನಿರೀಕ್ಷಕ ಎನ್.ಎಚ್. ಹಾದಿಮನಿ ಸೂಕ್ತ ವ್ಯವಸ್ಥೆ ಕಲ್ಪಿಸಿ ಶೌಚಗೃಹಗಳನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಿದರು.

    ಪ.ಪಂ. ಸದಸ್ಯೆ ನೀಲವ್ವ ಹುಬ್ಬಳ್ಳಿ, ಪ.ಪಂ. ಹಿರಿಯ ಆರೋಗ್ಯ ನಿರೀಕ್ಷಕ ಎನ್.ಎಚ್. ಹಾದಿಮನಿ, ಚನ್ನವೀರಪ್ಪ ಕಲ್ಯಾಣಿ, ಮಂಜುನಾಥ ವರವಿ, ಮಹೇಶ ಕಲ್ಲಪ್ಪನವರ, ಕಂಟೇಶ ಚಿಕ್ಕತೋಟದ, ಮಾಬುಸಾಬ್ ಬುವಾಜಿ, ಅಕ್ಕಮ್ಮ ನಾವ್ಹಿ, ಜೈತುನವಿ ಢಾಲಾಯತ, ಪೌರ ಕಾರ್ವಿುಕರ ಸಂಘದ ಅಧ್ಯಕ್ಷ ಉಡಚಪ್ಪ ನೀಲಣ್ಣವರ, ಮಲಿಯಪ್ಪ ಕಂಟೆಮ್ಮನವರ ಇದ್ದರು.

    ನಿಷ್ಪ್ರಯೋಜಕವಾಗಿ ಬಿದ್ದಿದ್ದ ಶೌಚಗೃಹಗಳು ಹಾಗೂ ಜನರು ಅನುಭವಿಸುತ್ತಿದ್ದ ಸಮಸ್ಯೆ ಕುರಿತು ‘ವಿಜಯವಾಣಿ’ ಪತ್ರಿಕೆ ವರದಿ ಪ್ರಕಟಿಸಿ ಅಧಿಕಾರಿಗಳ ಕಣ್ತೆರೆಸಿದೆ. ಇದರಿಂದ ಇಂದು ಶೌಚಗೃಹಗಳು ಜನರ ಬಳಕೆಗೆ ಮುಕ್ತವಾಗಿವೆ. ಸಾರ್ವಜನಿಕರು ಶೌಚಗೃಹಗಳನ್ನು ಸರಿಯಾಗಿ ಬಳಸಿ ಶುಚಿಯಾಗಿಟ್ಟುಕೊಳ್ಳುವಲ್ಲಿ ಗಮನ ಹರಿಸಬೇಕು.

    | ಫಕೀರೇಶ ರಟ್ಟಿಹಳ್ಳಿ

    ಪ.ಪಂ. ಸದಸ್ಯ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts