More

    ಅಂತಿಮ ಹಂತದಲ್ಲಿದೆ ಖಿಳೇಗಾಂವ ಯೋಜನೆ

    ಸಂಬರಗಿ/ಅನಂತಪುರ: ಖಿಳೇಗಾಂವ ಬಸವೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಳಿಸಲು ಸಾಕಷ್ಟು ಶ್ರಮಿಸಿದ್ದು, ಅದೀಗ ಅಂತಿಮ ಹಂತ ತಲುಪಿದೆ ಎಂದು ಶಾಸಕ ಶ್ರೀಮಂತ ಪಾಟೀಲ ಹೇಳಿದರು.

    ಕಾಗವಾಡ ತಾಲೂಕಿನ ಅನಂತಪುರ ಗ್ರಾಮದಲ್ಲಿ ಭಾನುವಾರ 22 .61 ಲಕ್ಷ ರೂ. ಮೊತ್ತದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿ, ಬರಗಾಲಪೀಡಿತ ಅನಂತಪುರ ಭಾಗದಲ್ಲಿ ನೀರಾವರಿ ಒದಗಿಸುವ ಯೋಜನೆ ಅನುಷ್ಠಾನಕ್ಕೆ ಆದ್ಯತೆ ನೀಡುತ್ತಿರುವೆ. 1700 ಮನೆ ಮಂಜೂರು ಮಾಡಿಸಿರುವೆ. ಗ್ರಾಮದ ಬಡವರಿಗೆ ಮನೆ ಹಂಚಿಕೆ ಮಾಡಲಾಗುವುದು ಎಂದರು.

    22.61 ಲಕ್ಷ ರೂ. ಮೊತ್ತದಲ್ಲಿ ಗ್ರಾಮದಿಂದ ವಿವಿಧ ಗ್ರಾಮಗಳಿಗೆ ಅಂದರೆ ಬೇವನೂರವರೆಗೆ ರಸ್ತೆ ಕಾಮಗಾರಿ, ಗ್ರಾಮದಿಂದ ತೇವರಟ್ಟಿ, ಶಿವನೂರ, ಕಲ್ಲುತ್ತಿ, ತಾವಂಶಿ, ಅನಂತಪುರವರೆಗೆ, ಕೊಕಳೆವರೆಗೆ, ಅನಂತಪುರ- ಅಥಣಿ ರಸ್ತೆಯಿಂದ ಜಿರಗಾಳೆ ತೋಟದವರೆಗೆ ರಸ್ತೆ ಕಾಮಗಾರಿ, ಜಲಜೀವನ್ ಮಿಷನ್ ಕಾಮಗಾರಿ, ದ್ರವ ತ್ಯಾಜ್ಯ ನಿರ್ವಹಣೆ ಕಾಮಗಾರಿ, ಗ್ರಾಮದ ಶಿಂಧೆ ತೋಟದ ಶಾಲಾ ಕೊಠಡಿ ಕಾಮಗಾರಿ, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕೊಠಡಿ ನಿರ್ಮಾಣ, ಮಲಾಬಾದ ಗ್ರಾಮದಲ್ಲಿ ಜಲಜೀವನ ಮಿಷನ್ ಕಾಮಗಾರಿ ಹಾಗೂ ಮಲಾಬಾದ – ವಜ್ರವಾಡ ರಸ್ತೆ ಕಾಮಗಾರಿಗಳಿಗೆ ಚಾಲನೆ ನೀಡಿದರು. ಅನಂತಪುರ ಜಿಪಂ ಬಿಜೆಪಿ ಮುಖಂಡ ದಾದಾ ಶಿಂಧೆ ಮಾತನಾಡಿ, ಗ್ರಾಮಕ್ಕೆ 33 ಕೆವಿ ವಿದ್ಯುತ್ ವಿತರಣಾ ಕೇಂದ್ರ ಮತ್ತು 40 ಹಾಸಿಗೆ ಸೌಲಭ್ಯದ ಆಸ್ಪತ್ರೆ ಕಲ್ಪಿಸಬೇಕು ಎಂದರು. ಬಿಜೆಪಿ ಮುಖಂಡ ಓಂಪ್ರಕಾಶ ಡೊಳ್ಳಿ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಕುಮಾರ ಹಬಗುಂಡೆ, ಗುತ್ತಿಗೆದಾರರಾದ ನಾನಾಸಾಬ ಅವತಾಡೆ, ಸಂತೋಷ ಕಕಮರಿ, ಗ್ರಾಪಂ ಸದಸ್ಯರಾದ ಮಲ್ಲೇಶ ಮೇತ್ರಿ, ಶೇಖರ ತೇಲಿ, ಅಶೋಕ ಮಾಡಿಗ್ಯಾಳೆ, ನೇತಾಜಿ ಜಾಧವ, ರೇವಣಸಿದ್ಧ ನಕಾತಿ, ಸಿದರಾಯ ಕರೋಲಿ, ರಾಜು ಮಾಲಗಾವಿ, ಸುನೀಲ ಹೊನಕಾಂಡೆ, ವಿಠ್ಠಲ ನಾಯಿಕ, ನಾನಾ ಡಾಂಗೆ, ಧೊಂಡಿಬಾ ಶಿಂಧೆ, ಗುತ್ತಿಗೆದಾರ ಡಿ.ಸಿ.ನಾಯಿಕ, ರಮೇಶ ನೀವಲಗಿ, ಮಲ್ಲಿಕಾರ್ಜುನ ಕುಂಬಾರ, ಅಯ್ಯನಗೌಡ ಪಾಟೀಲ, ಶಿವಾಜಿ ಗಾಡಿವಡ್ಡರ್, ಧುರೀಣರಾದ ಈಶ್ವರ ಕುಂಬಾರೆ, ಆರ್.ಎಂ.ಪಾಟೀಲ, ಮಹಾದೇವ ಕೋರೆ, ನಿಂಗಪ್ಪ ಖೋಕಲೆ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts