More

    ಅಂತಾರಾಷ್ಟ್ರೀಯ ಸಮ್ಮೇಳನ ಉದ್ಘಾಟನೆ

    ಹುಬ್ಬಳ್ಳಿ : ಇಲ್ಲಿನ ಇನ್​ಸ್ಟಿಟ್ಯೂಟ್ ಆಫ್ ಎಕ್ಸ್​ಲೆನ್ಸ್ ಇನ್ ಮ್ಯಾನೇಜ್ಮೆಂಟ್ ಸೈನ್ಸ್ ಮಹಾವಿದ್ಯಾಲಯದಲ್ಲಿ ವಾಣಿಜ್ಯೋದ್ಯಮ ಮತ್ತು ನಾವೀನ್ಯತೆ ಕುರಿತು ಎರಡು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನದ ಉದ್ಘಾಟನಾ ಸಮಾರಂಭ ಗುರುವಾರ ನೆರವೇರಿತು.

    ಸಮ್ಮೇಳನ ಉದ್ಘಾಟಿಸಿ ಮಾತನಾಡಿದ ಹೈದರಾಬಾದ್​ನ ಸಿನರ್ಜಿ ಬ್ಯುಸಿನೆಸ್ ಸ್ಕೂಲ್​ನ ಎಚ್​ಒಡಿ ಪ್ರೊ. ಬಿ. ರಮೇಶ, ವ್ಯಾಪಾರ ಮತ್ತು ಉದ್ಯಮಶೀಲತೆ ಗ್ರಾಹಕರನ್ನು ತೃಪ್ತಿಪಡಿಸುವ ಗುರಿ ಹೊಂದಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.

    ಅತಿಥಿಯಾಗಿದ್ದ ವೈಡ್ ಮೊಬಿಲಿಟಿ ಸಹ ಸಂಸ್ಥಾಪಕಿ ರೋಹಿಣಿ ಘಟಪಾಂಡೆ ಮಾತನಾಡಿ, ಮಹಾನಗರಗಳಲ್ಲಿ ವಿಶೇಷವಾಗಿ ಅನ್ವೇಷಿಸಲು ಹಲವು ಅವಕಾಶಗಳಿವೆ. ನಿಮ್ಮ ವ್ಯಾಪಾರವನ್ನು ಮುಂದಿನ ಹಂತಕ್ಕೆ ಸುಧಾರಿಸಲು ಗ್ರಾಹಕರ ಬೇಡಿಕೆಗಳನ್ನು ಆಲಿಸುವಂತೆ ಸಲಹೆ ನೀಡಿದರು.

    ಅಧ್ಯಕ್ಷತೆ ವಹಿಸಿದ್ದ ಹಿರಿಯ ಲೆಕ್ಕಪರಿಶೋಧಕ ಡಾ. ಎನ್.ಎ. ಚರಂತಿಮಠ, ವ್ಯಾಪಾರ ಮತ್ತು ಉದ್ಯಮಶೀಲತೆಯು ಪ್ರಾಚೀನ ಭಾರತದಲ್ಲಿಯೇ ಬೇರುಗಳನ್ನು ಹೊಂದಿದೆ ಮತ್ತು ಕೌಟಿಲ್ಯನ ಅರ್ಥಶಾಸ್ತ್ರವು ಬೈನರಿ ವ್ಯವಸ್ಥೆಯಿಂದ ನಾವೀನ್ಯತೆ ಬಳುವಳಿ ಪಡೆದಿದೆ ಎಂದು ಹೇಳಿದರು.

    ಸ್ಟಾರ್ಟಪ್ ಯೋಜನೆಗಳ ಮಳಿಗೆಗಳ ಪ್ರದರ್ಶನವನ್ನು ಅತಿಥಿಗಳು ಉದ್ಘಾಟಿಸಿದರು. ಡಾ. ಪೂರ್ಣಿಮಾ ಚರಂತಿಮಠ ಅವರು ಸಮೆ್ಮೕಳನದ ಮಹತ್ವದ ಬಗ್ಗೆ ವಿವರಿಸಿದರು. 15 ದೇಶಗಳಿಂದ ಸುಮಾರು 135 ಪ್ರತಿನಿಧಿಗಳು ಭಾಗವಹಿಸಿದ್ದರು.

    ಸಂಸ್ಥೆಯ ನಿರ್ದೇಶಕ ಡಾ. ವೀರಣ್ಣ ಡಿ.ಕೆ ಸ್ವಾಗತಿಸಿದರು. ಪ್ರೊ. ಪ್ರೀತಿ ಬೆಳಗಾಂವಕರ ನಿರೂಪಿಸಿದರು. ಡಾ.ಮಂಜುನಾಥ ಬಾಳೆಹೊಸೂರು ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts