More

    ಅಂತರ ಕಾಯ್ದುಕೊಂಡು ಹಬ್ಬ ಆಚರಿಸಿ

    ಡಂಬಳ: ಕರೊನಾ ಸೋಂಕು ಹರಡುತ್ತಿರುವ ಹಿನ್ನೆಲೆಯಲ್ಲಿ ಎಲ್ಲರೂ ಪರಸ್ಪರ ಅಂತರ ಕಾಪಾಡಿಕೊಂಡು ಸರ್ಕಾರದ ನಿಯಮದಂತೆ ದಸರಾ ಮತ್ತು ಈದ್ ಮಿಲಾದ್ ಆಚರಿಸಬೇಕು ಎಂದು ಮುಂಡರಗಿ ಸಿಪಿಐ ಸುಧೀರ್ ಬೆಂಕಿ ಹೇಳಿದರು.

    ದಸರಾ ಮತ್ತು ಈದ್ ಮಿಲಾದ್ ಹಬ್ಬದ ನಿಮಿತ್ತ ಗ್ರಾಮದ ಪೊಲೀಸ್ ಠಾಣೆಯಲ್ಲಿ ಶನಿವಾರ ಜರುಗಿದ ಶಾಂತಿ ಸಭೆಯಲ್ಲಿ ಅವರು ಮನವಿ ಮಾಡಿದರು. ಧ್ವನಿ ವರ್ಧಕ ಬಳಸುವಂತಿಲ್ಲ. ಮೆರವಣಿಗೆಗೆ ಆಸ್ಪದವಿಲ್ಲ ಎಂದರು. ಹೆಲ್ಮೆಟ್ ಧರಿಸಿಕೊಂಡೇ ಬೈಕ್ ಚಲಾಯಿಸಬೇಕು ಎಂದು ಹೇಳಿದರು.

    ಡಂಬಳ ತೋಂಟದಾರ್ಯ ಮಠದ ವ್ಯವಸ್ಥಾಪಕ ಜಿ.ವಿ. ಹಿರೇಮಠ ಮಾತನಾಡಿ, ಕರೊನಾ ಸೋಂಕು ಮನುಕುಲವನ್ನೇ ತಲ್ಲಣ ಗೊಳಿಸಿದೆ. ಪ್ರತಿ ವರ್ಷ ಹಬ್ಬದಿನಗಳು ಬರುತ್ತವೆ. ಆದರೆ, ಈ ವರ್ಷ ಮಹಾಮಾರಿ ವೈರಸ್​ನಿಂದಾಗಿ ಎಲ್ಲರೂ ಹಬ್ಬವನ್ನು ಮನೆಯಲ್ಲೇ ಸರಳವಾಗಿ ಹಬ್ಬಗಳನ್ನು ಆಚರಿಸಬೇಕು ಎಂದು ಹೇಳಿದರು.

    ಈ ವೇಳೆ ಗೋಣಿಬಸಪ್ಪ ಕೊರ್ಲಹಳ್ಳಿ, ಮರಿತೆಮ್ಮಪ್ಪ ಆದಮ್ಮನವರ, ಗವಿಸಿದ್ದಪ್ಪ ಮಠದ, ಅಂಜುಮನ್ ಕಮಿಟಿ ಅಧ್ಯಕ್ಷ ಬಸೀರ್​ಅಹ್ಮದ್ ತಾಂಬೋಟಿ, ಗೌಸುಸಾಬ್ ಡಾಲಯತ್, ವೀರೂಪಾಕ್ಷಿ ಲಕ್ಕುಂಡಿ, ಶೇಖರಯ್ಯ ಗುರುವಿನ, ಮಂಜುನಾಥ ಸಂಜೀವಣ್ಣವರ, ಬಸವರಾಜ ಬಂಡಿ, ಬುಡ್ನೆಸಾಬ್ ಜಲಾಲನವರ, ಬುಡ್ನೆಸಾಬ್ ಅತ್ತಾರ, ಡಂಬಳ ಠಾಣೆಯ ಇಎಸ್​ಐ ಐ.ಪಿ. ಕರೆಮನಿ, ಎ.ಎಂ. ಹೊನ್ನೆನಾಯ್ಕರ್, ವೈ.ಬಿ. ಗರಡಿಮನಿ, ಮಂಜು ಮಾರನಬಸರಿ, ಎನ್.ಬಿ. ಪೂಜಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts