More

    ಅಂಜುಮನ್​ನಿಂದ 100 ಹಾಸಿಗೆ ವ್ಯವಸ್ಥೆ

    ಹುಬ್ಬಳ್ಳಿ: ಧಾರವಾಡ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕರೊನಾ ಪಾಸಿಟಿವ್ ಪ್ರಕರಣಗಳ ಹಿನ್ನೆಲೆಯಲ್ಲಿ ಸೋಂಕಿತರ ಚಿಕಿತ್ಸೆಗಾಗಿ ಹುಬ್ಬಳ್ಳಿ ಅಂಜುಮನ್-ಎ-ಇಸ್ಲಾಂ ಸಂಸ್ಥೆ 100 ಹಾಸಿಗೆ ಸೌಲಭ್ಯ ವ್ಯವಸ್ಥೆ ಮಾಡಿದ್ದು, ಜಿಲ್ಲಾಡಳಿತಕ್ಕೆ ಹಸ್ತಾಂತರಕ್ಕೆ ಮುಂದಾಗಿದೆ.

    ನಗರದ ಪಿ.ಬಿ. ರಸ್ತೆಗೆ ಹೊಂದಿಕೊಂಡು ಅಂಜುಮನ್ ವಿದ್ಯಾರ್ಥಿ ನಿಲಯವಿದೆ. ಅಲ್ಲಿ 100 ಹಾಸಿಗೆಯ ಕೋವಿಡ್ ಆಸ್ಪತ್ರೆಗೆ ತೆರೆಯಲು ವ್ಯವಸ್ಥೆ ಮಾಡಲಾಗಿದೆ. ಆಜಾದ್ ಕೋ-ಆಪ್ ಬ್ಯಾಂಕ್ ಹಾಗೂ ಕುಂಬಾರ ಮಸೀದಿ ಜಮಾತ್ ಮೆಹಬೂಬ್ ಕಾಂಪ್ಲೆಕ್ಸ್ನವರು ತಲಾ 50 ಮಂಚಗಳನ್ನು ದೇಣಿಗೆಯಾಗಿ ನೀಡಿದ್ದಾರೆ. ಬೇರೆ ಬೇರೆ ದಾನಿಗಳು 100 ಹಾಸಿಗೆಯನ್ನು ನೀಡಿದ್ದಾರೆ. ‘ವಿದ್ಯಾರ್ಥಿ ನಿಲಯದಲ್ಲಿ ವಿಶಾಲವಾದ ಕೊಠಡಿಗಳಿವೆ. 18 ಸ್ನಾನ ಗೃಹ ಹಾಗೂ ಶೌಚಗೃಹ ವ್ಯವಸ್ಥೆ ಇದೆ. ಕಿಮ್ಸ್​ನ ಕೋವಿಡ್ ನೋಡಲ್ ಅಧಿಕಾರಿಯೊಬ್ಬರು ಈಗಾಗಲೇ ಪರಿಶೀಲನೆ ನಡೆಸಿ ಕೋವಿಡ್ ಆಸ್ಪತ್ರೆಗೆ ಸೂಕ್ತವಾಗಿದೆ ಎಂದು ಅಭಿಪ್ರಾಯಿಸಿದ್ದಾರೆ. ಇನ್ನೆರಡು ದಿನಗಳಲ್ಲಿ ಹಸ್ತಾಂತರಿಸಿಕೊಳ್ಳುವಂತೆ ಜಿಲ್ಲಾಡಳಿತಕ್ಕೆ ಪತ್ರ ಬರೆಯಲಿದ್ದೇವೆ’ ಎಂದು ಅಂಜುಮನ್ ಇಸ್ಲಾಂ ಸಂಸ್ಥೆ ಉಪಾಧ್ಯಕ್ಷ ಅಲ್ತಾಫ್ ಕಿತ್ತೂರ ತಿಳಿಸಿದ್ದಾರೆ. ಸಂಸ್ಥೆ ಅಧ್ಯಕ್ಷ ಎಂ.ಸಿ. ಸವಣೂರು, ಮಾಜಿ ಸಚಿವ ಎ.ಎಂ. ಹಿಂಡಸಗೇರಿ, ಮಹಾನಗರ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಲ್ತಾಫ್ ಹಳ್ಳೂರ, ಆಜಾದ್ ಕೋ-ಆಪ್ ಬ್ಯಾಂಕ್ ಅಧ್ಯಕ್ಷ ನಾಜಿಂ ಹಿಂಡಸಗೇರಿ, ರಾಮು ಕುಂಬಾರ, ಅಬ್ದುಲ್ ಮುನಾಫ್ ದೇವಗಿರಿ, ಎಂ.ಎ. ಪಠಾಣ, ಮುನ್ನಾ ಹೆಬ್ಬಳ್ಳಿ, ಬಾಷಾಸಾಬ ಅತ್ತಾರ, ಬಾಬಾಜಾನ ಸವಣೂರು, ಇತರರು ಭಾನುವಾರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ ವೀಕ್ಷಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts