More

    ಅಂಗಾಂಗ ದಾನದ ಜಾಗೃತಿ ಅವಶ್ಯ

    ಬೆಳಗಾವಿ: ಅಂಗಾಂಗಳ ದಾನದ ಕುರಿತು ಗ್ರಾಮೀಣ ಭಾಗದಲ್ಲಿ ಜಾಗೃತಿ ಮೂಡಿಸುವ ಕಾರ್ಯವನ್ನು ಸರ್ಕಾರೇತರ ಸಂಘ-ಸಂಸ್ಥೆಗಳು ಮಾಡಬೇಕು ಎಂದು ಕೆಎಲ್‌ಇ ಸಂಸ್ಥೆ ಡಾ.ಪ್ರಭಾಕರ ಕೋರೆ ಆಸ್ಪತ್ರೆ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ.ಜಾಲಿ ಹೇಳಿದ್ದಾರೆ.

    ‘ವಿಶ್ವ ಅಂಗಾಂಗ ದಾನ’ ದಿನ ಅಂಗವಾಗಿ ಶುಕ್ರವಾರ ಕೆಎಲ್‌ಇ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದರು. ಇತ್ತೀಚೆಗೆ ಅಂಗಾಂಗಗಳ ವೈಫಲ್ಯ ತೀವ್ರಗತಿಯಲ್ಲಿ ಕಂಡುಬರುತ್ತಿದೆ. ಕಿಡ್ನಿ ದಾನ ಮಾಡಿದಂತೆ ಹೃದಯ, ಲೀವರ್, ಪಾನಕ್ರಿಯಾ ಸೇರಿ ವಿವಿಧ ಅಂಗಗಳನ್ನು ದಾನ ಮಾಡಬಹುದು. ಅಪಘಾತದಲ್ಲಿ ಮೆದುಳು ನಿಷ್ಕ್ರೀಯಗೊಂಡು ಜೀವಂತ ಶವವಾಗಿರುವ ವ್ಯಕ್ತಿಯ ಅಂಗ ದಾನ ಮಾಡುವುದರಿಂದ 8 ಜನರು ಜೀವ ಉಳಿಸಬಹುದು ಎಂದರು.

    ಆಸ್ಪತ್ರೆಯ ಅಂಗಾಂಗ ದಾನ ಸಮಿತಿ, ಕ್ಲಿನಿಕಲ್ ನಿರ್ದೇಶಕ ಡಾ.ಆರ್.ಬಿ.ನೇರ್ಲಿ ಮಾತನಾಡಿ, ಭಾರತದಲ್ಲಿ ಶೇ.7.9ಮಾತ್ರ ಜನ ಅಂಗಾಂಗ ದಾನ ಮಾಡುತ್ತಿದ್ದು, ಅಂಗಾಂಗ ಕಸಿ ಕೊರತೆಯಿಂದಾಗಿ ನಿತ್ಯ 17 ಜನ ಸಾವಿಗೀಡಾಗುತ್ತಿದ್ದಾರೆ. 1,06,755 ಜನ ಅಂಗಾಂಗ
    ಕಸಿಗಾಗಿ ಕಾಯುತ್ತಿದ್ದು, ಪ್ರತಿ 9 ನಿಮಿಷಕ್ಕೆ ಓರ್ವ ವ್ಯಕ್ತಿ ಈ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿದ್ದಾನೆ.

    ದೇಶದಲ್ಲಿ 39 ಸಾವಿರಕ್ಕೂ ಅಧಿಕ ಅಂಗಾಂಗಳ ಕಸಿ ಮಾಡಿರುವುದು ಸಂತಸದ ವಿಚಾರ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಪ್ಲಾಸ್ಟಿಕ್ ಸರ್ಜರಿ ತಜ್ಞ ಡಾ.ರಾಜೇಶ ಪವಾರ ಮಾತನಾಡಿ, ಮರಣಾ ನಂತರ ಯಾರೂ ಬೇಕಾದರೂ ಚರ್ಮ ಮತ್ತು ಕಣ್ಣು ದಾನ ಮಾಡಬಹುದು. ಈ ಕಾರ್ಯಕ್ಕೆ ರೋಟರಿ ಸಹಕಾರ ಬಹುಮುಖ್ಯವಾಗಿದೆ. ದೆಹಲಿ, ಬೆಂಗಳೂರು, ಮಂಗಳೂರು, ಅಹ್ಮದಾಬಾದ್ ಬಿಟ್ಟರೆ ಬೆಳಗಾವಿಯಲ್ಲಿ ಮಾತ್ರ ಚರ್ಮ ಕಸಿ ಮಾಡಲಾಗುತ್ತಿದೆ ಎಂದರು. ಡಾ.ಅರವಿಂದ ತೆನಗಿ, ಡಾ.ಬಸವರಾಜ ಬಿಜ್ಜರಗಿ, ಡಾ.ರಾಜಶೇಕರ ಸೋಮನಟ್ಟಿ, ಡಾ.ಮಹಾಂತೇಶ ರಾಮಣ್ಣವರ, ಡಾ.ಸತೀಶ ಧಾಮಣಕರ, ವಿಜಯ ಮೋರೆ, ಮೋಹನ ಪ್ರತಿಷ್ಠಾನದ ಶೀತಲ
    ಮುಂಡಾದ, ನಯನಾ ನೇರ್ಲಿ, ಜೈಂಟ್ಸ್ ಸಹೇಲಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts