More

    ಅಂಗವಿಕಲರ ಪ್ರತಿಭೆ ಗುರುತಿಸಿ ಪ್ರೋತ್ರಾಹಿಸಿ

    ಮಳವಳ್ಳಿ: ನೈಸರ್ಗಿಕವಾಗಿ ಆಗುವ ವ್ಯತ್ಯಾಸಗಳಿಂದ ವಿಕಲಾಂಗರಾಗಿ ಜನಿಸುವ ಅಂಗವಿಕಲರ ಬಗ್ಗೆ ಅನುಕಂಪ ಹಾಗೂ ಕೀಳರಿಮೆಯಿಂದ ಕಾಣುವ ಮನಸ್ಥಿತಿ ಬದಲಿಸಿಕೊಳ್ಳಬೇಕು ಎಂದು ಶಾಸಕ ಡಾ.ಕೆ.ಅನ್ನದಾನಿ ಹೇಳಿದರು.

    ಪಟ್ಟಣದ ರೈತ ಸಮುದಾಯ ಭವನದಲ್ಲಿ ಶನಿವಾರ ತಾಲೂಕು ಆಡಳಿತ ಹಾಗೂ ವಿವಿಧ ಇಲಾಖೆಗಳ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಅಂಗವಿಕಲರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.

    ಅಂಗವಿಕಲರಲ್ಲಿ ಅಂಗಾಂಗ ವೈಫಲ್ಯವಿರಬಹುದು. ಆದರೆ ಅಷ್ಟೇ ಅಪ್ರತಿಮವಾದ ಪ್ರತಿಭೆಗಳಿರುತ್ತವೆ. ಸೂಕ್ಷ್ಮವಾಗಿ ಗಮನಿಸಿ ಪ್ರೋತ್ಸಾಹಿಸಿದರೆ ಸಾಧನೆಗೆ ವಿಕಲಾಂಗತೆ ತೊಡಕಾಗಿಲ್ಲವೆಂಬುದನ್ನು ಹಲವು ಅಂಗವಿಕಲರು ಸಾಧಿಸಿ ತೋರಿಸಿದ್ದಾರೆ ಎಂದು ತಿಳಿಸಿದರು.

    ವಿಕಲಚೇತನರ ಗ್ರಾಮೀಣ ಪುನರ್ವಸತಿ ಕಾರ್ಯಕರ್ತರ ಒಕ್ಕೂಟದ ಜಿಲ್ಲಾಧ್ಯಕ್ಷ ಮಹದೇವಪ್ಪ ಮಾತನಾಡಿ, ಅಂಗವಿಕಲರು, ಶಿಕ್ಷಣ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ್ದಾರೆ. ಆದರೆ ಅವರನ್ನು ಗುರುತಿಸಿ ಬೆಂಬಲಿಸುವ ಕೆಲಸವನ್ನು ತಾಲೂಕು ಆಡಳಿತವಾಗಲಿ ಹಾಗೂ ಸಂಘ ಸಂಸ್ಥೆಗಳಾಗಲಿ ಮಾಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ತಾಲೂಕು ಆಡಳಿತ ವತಿಯಿಂದ ಮೂರು ತಿಂಗಳಿಗೊಮ್ಮೆ ನಡೆಸುವ ಅಂಗವಿಕಲರ ಕುಂದುಕೊರತೆ ಸಭೆಗಳಲ್ಲಿ ಆಡಳಿತ ವರ್ಗ ಅಂಗವಿಕಲರನ್ನು ತಾತ್ಸಾರ ಮನೋಭಾವದಿಂದ ನಡೆಸಿಕೊಳ್ಳುತ್ತಾರೆ. ಗಣ್ಯರ ಜಯಂತಿಗಳು , ಹಬ್ಬಗಳ ಆಚರಣೆಗೆ ಪೂರ್ವಭಾವಿ ಸಭೆಗಳನ್ನು ನಡೆಸಿ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಆದರೆ ಅಂಗವಿಕಲರ ದಿನಾಚರಣೆಗೆ ಮಾತ್ರ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಕಾಳಜಿ ವಹಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

    ಇದೇ ವೇಳೆ ಇತ್ತೀಚೆಗೆ ಜಿಲ್ಲಾ ಮಟ್ಟದ ಅಂಗವಿಕಲರ ಕ್ರೀಡಾಕೂಟದಲ್ಲಿ ವಿವಿಧ ವಿಭಾಗಗಳಲ್ಲಿ ಪ್ರಥಮ ಸ್ಥಾನ ಗಳಿಸಿ ವಿಭಾಗಿಯ ಮಟ್ಟಕ್ಕೆ ಆಯ್ಕೆಯಾಗಿರುವ ರಾಗಿಬೊಮ್ಮನಹಳ್ಳಿ ಗ್ರಾಮದ ಕುಬ್ಜ ದಂಪತಿ ನರಸಿಂಹಚಾರಿ ಮತ್ತು ಸೌಧಯ್ ಅವರನ್ನು ಸನ್ಮಾನಿಸಲಾಯಿತು.ಪುರಸಭೆ ಅಧ್ಯಕ್ಷೆ ರಾಧಾ ನಾಗರಾಜು, ಉಪಾಧ್ಯಕ್ಷ ಪ್ರಶಾಂತ್, ಸದಸ್ಯರಾದ ಸಿದ್ದರಾಜು, ನೂರುಲ್ಲಾ, ಕುಮಾರ್, ಮುಖಂಡರಾದ ಓಂ ಪ್ರಕಾಶ್, ನಾರಾಯಣ, ಅಂಕರಾಜು , ಮಹದೇವಪ್ಪ, ಜಯಶಂಕರ್, ಶಿವರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts