More

    ದ.ಕ.ಜಿಲ್ಲೆಯಲ್ಲಿ ಐದೇ ತಾಲೂಕು!

    ಭರತ್ ಶೆಟ್ಟಿಗಾರ್, ಮಂಗಳೂರು
    ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏಳು ತಾಲೂಕುಗಳಿದ್ದರೂ, ಜಿಲ್ಲಾ ಪಂಚಾಯಿತಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇವುಗಳ ಸಂಖ್ಯೆ ಇನ್ನೂ 5!
    ವೆಬ್‌ಸೈಟ್ ಕೊನೇ ಬಾರಿಗೆ ಅಪ್‌ಡೇಟ್ ಆಗಿದ್ದು ಏ.30ರಂದು. ಬೆಳ್ತಂಗಡಿ, ಬಂಟ್ವಾಳ, ಮಂಗಳೂರು, ಪುತ್ತೂರು ಮತ್ತು ಸುಳ್ಯ ತಾಲೂಕು ಪಂಚಾಯಿತಿಗಳ ಹೆಸರು ಮಾತ್ರವೇ ಇದ್ದು, ಎರಡು ವರ್ಷಗಳ ಹಿಂದೆ ಹೊಸದಾಗಿ ಸೇರ್ಪಡೆಯಾಗಿದ್ದ ಕಡಬ ಮತ್ತು ಮೂಡುಬಿದಿರೆ ತಾಪಂಗಳ ಹೆಸರೇ ಇಲ್ಲ. ಪ್ರಸ್ತುತ ತಾಪಂ ಕಟ್ಟಡ, ಚುನಾಯಿತ ಜನಪ್ರತಿನಿಧಿಗಳು, ತಾಲೂಕು ವ್ಯಾಪ್ತಿಯ ಗ್ರಾಮಗಳ ಪಟ್ಟಿ ಎಲ್ಲವೂ ಇದೆ.

    ನಕ್ಷೆಯೂ ಇಲ್ಲ: ಮೂಡುಬಿದಿರೆ ಮತ್ತು ಕಡಬ ತಾಲೂಕುಗಳಿಗೆ ಸಂಬಂಧಿಸಿದಂತೆ ಜಿಪಂ ವೆಬ್‌ಸೈಟ್‌ನಲ್ಲಿ ನಕ್ಷೆಯೂ ಲಭ್ಯವಿಲ್ಲ. ಉಳಿದ ಐದು ತಾಲೂಕುಗಳ ಸಂಪೂರ್ಣ ಮಾಹಿತಿಯಿರುವ ಮ್ಯಾಪ್ ಜಾಲತಾಣದಲ್ಲಿದೆ. ಇನ್ನೊಂದೆಡೆ ಜಿಲ್ಲಾಧಿಕಾರಿ ಕಚೇರಿ ವೆಬ್‌ಸೈಟ್‌ನಲ್ಲಿ ಒಟ್ಟು ಜಿಲ್ಲೆಯ ನಕ್ಷೆಯಲ್ಲಿ ಕಡಬ-ಮೂಡುಬಿದಿರೆ ತಾಲೂಕನ್ನು ಬೇರೆ ಬೇರೆ ಬಣ್ಣಗಳಿಂದ ಗುರುತಿಸಲಾಗಿದೆ. ಆದರೆ ಆಯಾ ತಾಲೂಕುಗಳ ನಕ್ಷೆ ಇರುವಲ್ಲಿ ಈ ಎರಡು ತಾಲೂಕುಗಳ ಹೆಸರಿಲ್ಲ. ತಾಲೂಕು ವ್ಯಾಪ್ತಿಯಲ್ಲಿ ನಕ್ಷೆಯೂ ಇದ್ದರೂ, ಇಲ್ಲಿ ಅಪ್‌ಲೋಡ್ ಮಾಡಿಲ್ಲ.

    ಪಂಚಮಿತ್ರ ವೆಬ್‌ಸೈಟ್‌ನಲ್ಲಿದೆ: ಗ್ರಾಮ ಪಂಚಾಯಿತಿಗಳ ಮಾಹಿತಿ ನೀಡುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ಪಂಚಮಿತ್ರ ವೆಬ್‌ಸೈಟ್‌ನಲ್ಲಿ ಎಲ್ಲ ತಾಲೂಕುಗಳ ಮಾಹಿತಿ ಅಪ್‌ಡೇಟ್ ಆಗಿದೆ. ಜಿಲ್ಲೆಯ ಏಳು ತಾಲೂಕುಗಳ ಹೆಸರಿದ್ದು, ಅದಕ್ಕೆ ಕ್ಲಿಕ್ ಮಾಡಿದರೆ, ಆಯಾ ತಾಲೂಕು ವ್ಯಾಪ್ತಿಯ ಗ್ರಾಮಗಳ ಮಾಹಿತಿ ದೊರೆಯುತ್ತದೆ.

    ಮೂಡುಬಿದಿರೆ, ಕಡಬ ತಾಲೂಕುಗಳ ನಕ್ಷೆ ಸಹಿತ, ಎಷ್ಟು ಗ್ರಾಮಗಳನ್ನು ಇವು ಒಳಗೊಂಡಿವೆ ಎನ್ನುವ ಸಮಗ್ರ ಮಾಹಿತಿಯನ್ನು ಸಿದ್ಧಪಡಿಸಲಾಗಿದೆ. ಮೂಲ್ಕಿ ಮತ್ತು ಉಳ್ಳಾಲ ತಾಲೂಕುಗಳ ವ್ಯಾಪ್ತಿಯೂ ಸಿದ್ಧವಾಗಿದೆ. ಜಿಪಂ ವೆಬ್‌ಸೈಟ್‌ನಲ್ಲಿ ಯಾಕೆ ಅಪ್‌ಲೋಡ್ ಮಾಡಿಲ್ಲ ಎಂದು ಅಧಿಕಾರಿಗಳಲ್ಲಿ ವಿಚಾರಿಸುತ್ತೇನೆ. ಸಾರ್ವಜನಿಕರಿಗೆ ಮಾಹಿತಿ ನೀಡುವ ವೆಬ್‌ಸೈಟ್ ಅಪ್‌ಡೇಟ್ ಆಗಬೇಕು.
    ಉಮಾನಾಥ ಕೋಟ್ಯಾನ್ ಶಾಸಕ, ಮೂಡುಬಿದಿರೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts