More

    ಗರಿಷ್ಠ ಬೆಲೆ ಮುಟ್ಟಿದ ಜೊಮ್ಯಾಟೊ ಷೇರುಗಳು: ಈ ಸ್ಟಾಕ್​ ಖರೀದಿಸಿದರೆ ಲಾಭ ಎಂದು ಸಿಎಲ್​ಎಸ್​ಎ, ಜೆಫರೀಸ್ ಹೇಳಿದ್ದೇಕೆ?

    ಮುಂಬೈ: ಫುಡ್​ ಡೆಲಿವರಿ ಕಂಪನಿ ಜೊಮ್ಯಾಟೊ ಷೇರುಗಳ ಬೆಲೆ ಗುರುವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಸಾರ್ವಕಾಲಿಕ ಗರಿಷ್ಠ ಮಟ್ಟವನ್ನು ತಲುಪಿದವು. ಕಂಪನಿಯ ಷೇರುಗಳ ಬೆಲೆ ಮತ್ತಷ್ಟು ಏರಿಕೆಯಾಗಬಹುದು ಎಂಬುದು ಮಾರುಕಟ್ಟೆ ತಜ್ಞರ ಅಭಿಮತವಾಗಿದೆ.

    ಫುಡ್ ಡೆಲಿವರಿ ಪ್ಲಾಟ್‌ಫಾರ್ಮ್ ಜೊಮ್ಯಾಟೊ ಷೇರು ಬೆಲೆ ಒಂದು ವರ್ಷದಲ್ಲಿ 200% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಗುರುವಾರದ ಇಂಟ್ರಾ ಡೇ ವಹಿವಾಟಿನಲ್ಲಿ ಈ ಕಂಪನಿಯ ಷೇರುಗಳ ಬೆಲೆ ಶೇ. 5ರಷ್ಟು ಏರಿಕೆ ಕಂಡು, 159.20 ರೂಪಾಯಿಗೆ ತಲುಪಿತು. ಈ ಷೇರುಗಳ 52 ವಾರಗಳ ಕನಿಷ್ಠ ಬೆಲೆ 49 ರೂ. ಇದೆ.

    ಈ ಷೇರುಗಳ ಬೆಲೆ ಮತ್ತಷ್ಟು ಏರಿಕೆಯಾಗಲಿದ್ದು, 227 ರೂಪಾಯಿಯವರೆಗೆ ಹೆಚ್ಚಳವಾಗಬಹದು ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.

    ವಿದೇಶಿ ಬ್ರೋಕರೇಜ್ ಸಂಸ್ಥೆಯಾದ ಸಿಎಲ್​ಎಸ್​ಎ (CLSA) ಈಗ ಈ ಕಂಪನಿಯ ಷೇರುಗಳ ಗುರಿ ಬೆಲೆಯನ್ನು ಹೆಚ್ಚಿಸಿದ್ದು, ಈ ಸ್ಟಾಕ್​ಗಳನ್ನು ಖರೀದಿಸಲು ಸಲಹೆ ನೀಡಿದೆ. ಅಲ್ಲದೆ, ಈ ಕಂಪನಿಯ ಷೇರುಗಳ ಗುರಿ ಬೆಲೆಯನ್ನು 181 ರೂ.ನಿಂದ 227 ರೂ.ಗೆ ಹೆಚ್ಚಿಸಿದೆ.

    ಅಂತರರಾಷ್ಟ್ರೀಯ ಬ್ರೋಕರೇಜ್ ಸಂಸ್ಥೆಯಾದ ಜೆಫರೀಸ್ ಕೂಡ ಜೊಮ್ಯಾಟೊ ಖರೀದಿಗೆ ರೇಟಿಂಗ್ ನೀಡಿದೆ. ಷೇರುಗಳ ಗುರಿ ಬೆಲೆಯನ್ನು ಅದು 205 ರೂ.ಗೆ ಹೆಚ್ಚಿಸಿದೆ.

    ಕಳೆದ ಒಂದು ವರ್ಷದಲ್ಲಿ ಈ ಷೇರುಗಳು ಉತ್ತಮ ಏರಿಕೆ ಕಂಡಿವೆ. 52 ವಾರಗಳ ಕನಿಷ್ಠ ಮಟ್ಟಕ್ಕೆ ಹೋಲಿಸಿದರೆ ಈ ಷೇರುಗಳ ಬೆಲೆ ಈಗ 200% ಕ್ಕಿಂತ ಹೆಚ್ಚು ಏರಿಕೆ ಕಂಡಿದೆ. ಮಾರ್ಚ್ 28, 2023 ರಂದು ಈ ಷೇರುಗಳ ಬೆಲೆ 49 ರೂ. ಕಳೆದ 6 ತಿಂಗಳಲ್ಲಿ ಈ ಷೇರುಗಳ ಬೆಲೆ 70% ರಷ್ಟು ಏರಿಕೆಯಾಗಿದೆ. ಈ ಅವಧಿಯಲ್ಲಿ ಕಂಪನಿಯ ಷೇರುಗಳ ಬೆಲೆ ರೂ. 91.90ರಿಂದ ರೂ.159.20ಕ್ಕೆ ಏರಿಕೆಯಾಗಿದೆ. ಕಳೆದ ತಿಂಗಳಲ್ಲಿ
    ಈ ಷೇರುಗಳ ಬೆಲೆ ಅಂದಾಜು 20% ರಷ್ಟು ಏರಿಕೆ ಕಂಡಿದೆ.

    ಈ ತಿಂಗಳ ಆರಂಭದಲ್ಲಿ, ಝೊಮಾಟೊ ಡಿಸೆಂಬರ್​ ತ್ರೈಮಾಸಿಕ ಫಲಿತಾಂಶಗಳನ್ನು ಘೋಷಿಸಿದ್ದು, ಇದರ ಪ್ರಕಾರ ರೂ 138 ಕೋಟಿಗಳ ಏಕೀಕೃತ ನಿವ್ವಳ ಲಾಭವನ್ನು ವರದಿ ಮಾಡಿತ್ತು. ಒಂದು ವರ್ಷದ ಹಿಂದೆ ಇದೇ ತ್ರೈಮಾಸಿಕದಲ್ಲಿ 347 ಕೋಟಿ ರೂ ನಿವ್ವಳ ನಷ್ಟವಾಗಿತ್ತು.

    ಮಾರ್ಚ್​ 2ರ ರಜಾದಿನದಂದು ಕೂಡ ಷೇರು ವಹಿವಾಟು: ಎನ್​ಎಸ್​ಇ ನಡೆಸಲಿದೆ ಸ್ಪೇಶಲ್​ ಲೈವ್​ ಟ್ರೇಡಿಂಗ್ ಸೆಷನ್​

    ಷೇರು ನೀಡಿದೆ 4300% ಬಂಪರ್ ಲಾಭ; 1 ಲಕ್ಷವಾಯ್ತು 44 ಲಕ್ಷ: ಹಲವು ಆರ್ಡರ್​ ಪಡೆದುಕೊಂಡು ವಹಿವಾಟಿನಲ್ಲಿ ಮುಂದಿದೆ ಐಟಿ ಕಂಪನಿ

    ಮೊದಲ ದಿನವೇ 200% ಲಾಭದೊಂದಿಗೆ ಮಾರುಕಟ್ಟೆಯಲ್ಲಿ ಸಂಚಲನ; ಸೋಲಾರ್​ ಕಂಪನಿಯ ಐಪಿಒದಲ್ಲಿ ಹೂಡಿಕೆ ಮಾಡಿದವರಿಗೆ ಹಣದ ಸುರಿಮಳೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts