

Zoho employee: ತಮಿಳುನಾಡು ಮೂಲದ ಯುವಕನೊಬ್ಬ ಜೊಹೊದಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿ, ಬಳಿಕ ದೃಢನಿಶ್ಚಯ ಮತ್ತು ಸ್ವಯಂ ಕಲಿಕೆಯ ಮೂಲಕ ಅದೇ ಕಂಪನಿಯಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿ ಎಂಜಿನಿಯರ್ ಆದರು ಎಂಬುದರ ಕುರಿತು ಲಿಂಕ್ಡ್‌ಇನ್ ಪೋಸ್ಟ್ ಬರೆದಿದ್ದಾರೆ.
ಕಾಲೇಜು ಪದವಿ ಇಲ್ಲದಿದ್ದರೂ, ಕಷ್ಟದಿಂದ ಯಶಸ್ಸಿನತ್ತ ಸಾಗಿದ ತನ್ನ ಅದ್ಭುತ ಪ್ರಯಾಣವನ್ನು ಅಬ್ದುಲ್ ಅಲೀಮ್ ತಮ್ಮ ಪೋಸ್ಟ್‌ನಲ್ಲಿ ವಿವರಿಸಿದ್ದು, ಅದು ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ಫುಲ್ ವೈರಲ್ ಆಗಿದೆ.
2013 ರಲ್ಲಿ ಕೇವಲ 1,000 ರೂ.ಗಳೊಂದಿಗೆ ಮನೆಯಿಂದ ಹೊರಟ ಅಲೀಮ್, ಪ್ರಯಾಣದ ರೈಲು ಟಿಕೆಟ್‌ಗಾಗಿ 800 ರೂ.ಗಳನ್ನು ಖರ್ಚು ಮಾಡಿದರು, ಯಾವುದೇ ರೀತಿಯ ಕೆಲಸವಿಲ್ಲದೆ ಮತ್ತು ಎಲ್ಲಿಯೂ ಹೋಗಲು ಸಾಧ್ಯವಾಗದೇ, ಕೆಲವು ದಿನಗಳ ಬಳಿಕ ಜೊಹೊ ಕಚೇರಿಯಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಪಡೆಯುವ ಮೊದಲು ಸುಮಾರು ಎರಡು ತಿಂಗಳುಗಳ ಕಾಲ ಬೀದಿಗಳಲ್ಲೇ ವಾಸಿಸುತ್ತಿದ್ದರು ಎಂದು ತಿಳಿಸಿದ್ದಾರೆ. ಅಲೀಮ್ ತಮ್ಮ 12 ಗಂಟೆಗಳ ಕೆಲಸದ ಪಾಳಿಯಲ್ಲಿ ಒಮ್ಮೆ, ಜೊಹೊದ ಹಿರಿಯ ಉದ್ಯೋಗಿ ಶಿಬು ಅಲೆಕ್ಸಿಸ್ ಅವರನ್ನು ಗಮನಿಸಿ ಸಂಭಾಷಣೆಯಲ್ಲಿ ತೊಡಗಿದರು. ಅವರು ನನ್ನ ಹೆಸರನ್ನು ಕೇಳಿದರು ಮತ್ತು ಹೇಳಿದರು, ಅಲಿಮ್, ನಾನು ನಿಮ್ಮ ದೃಷ್ಟಿಯಲ್ಲಿ ಏನೋ ನೋಡುತ್ತಿದ್ದೇನೆ ಎಂದು ಅಲಿಮ್ ನೆನಪಿಸಿಕೊಂಡರು.
ಅಲೆಕ್ಸಿಸ್, ಅಲೀಮ್ಗೆ ಮಾರ್ಗದರ್ಶನ ನೀಡಲು ಮುಂದಾದರು, ಮುಂದಿನ ಎಂಟು ತಿಂಗಳುಗಳ ಕಾಲ, ಅಲಿಮ್ ಹಗಲಿನಲ್ಲಿ ತನ್ನ ಭದ್ರತಾ ಕರ್ತವ್ಯಗಳನ್ನು ಪೂರ್ಣಗೊಳಿಸುತ್ತಿದ್ದರು ಮತ್ತು ಸಂಜೆ ಪ್ರೋಗ್ರಾಮಿಂಗ್ ಕಲಿಯುತ್ತಿದ್ದರು. ಅಂತಿಮವಾಗಿ, ಅವರು ಬಳಕೆದಾರರ ಇನ್‌ಪುಟ್ ಅನ್ನು ದೃಶ್ಯೀಕರಿಸುವ ಸರಳ ಅಪ್ಲಿಕೇಶನ್ ಅನ್ನು ನಿರ್ಮಿಸಿದರು, ಅದನ್ನು ಅಲೆಕ್ಸಿಸ್ ಜೊಹೊ ವ್ಯವಸ್ಥಾಪಕರಿಗೆ ತೋರಿಸಿದರು.
ಅದನ್ನು ನೋಡಿ ಆಶ್ಚರ್ಯಗೊಂಡ ಮ್ಯಾನೇಜರ್, ಅಲಿಮ್ರನ್ನು ಸಂದರ್ಶನಕ್ಕೆ ಆಹ್ವಾನಿಸಿದರು. ಪದವಿ ಇಲ್ಲದಿರುವುದಕ್ಕೆ ಆರಂಭದಲ್ಲಿ ಹಿಂಜರಿದರೂ, ಬಳಿಕ, ಜೋಹೊದಲ್ಲಿ, ನಿಮಗೆ ಯಾವುದೇ ಪದವಿ ಅಗತ್ಯವಿಲ್ಲ. ಇಲ್ಲಿ ಮುಖ್ಯವಾಗಿ ಬೇಕಿರುವುದು ನಿಮ್ಮ ಕೌಶಲ್ಯಗಳು ಮಾತ್ರ ಎಂದು ಹೇಳಿ, ಆ ಯುವಕನಿಗೆ ಕೆಲಸಕ್ಕೆ ಸೇರಿಸಿಕೊಂಡು ಜೊಹೊದಲ್ಲಿ ಡೆವಲಪರ್ ಆಗಿ ಸೇರಿಕೊಂಡರು.
ಎಂಟು ವರ್ಷಗಳ ಬಳಿಕ, ಇಂದು ಕಂಪನಿಯಲ್ಲಿ ಸಾಫ್ಟ್‌ವೇರ್ ಅಭಿವೃದ್ಧಿ ಎಂಜಿನಿಯರ್ ಆಗಿ ಕೆಲಸ ಮಾಡುವುದನ್ನು ಮುಂದುವರೆಸಿದ್ದಾರೆ. ಅಲೀಮ್ತಮ್ಮ ಪೋಸ್ಟ್‌ನಲ್ಲಿ, ತಮಗೆ ಅವಕಾಶ ನೀಡಿದ್ದಕ್ಕಾಗಿ ಮಾರ್ಗದರ್ಶಕರಿಗೆ ಮತ್ತು ಕಂಪನಿಗೆ ಕೃತಜ್ಞತೆಗಳನ್ನು ಸಲ್ಲಿಸಿದರು. ಸಾಮಾಜಿಕ ಮಾಧ್ಯಮ ಬಳಕೆದಾರರು ಅಬ್ದುಲ್ ಅಲಿಮ್ ಅವರ ಸ್ಪೂರ್ತಿದಾಯಕ ಪ್ರಯಾಣಕ್ಕಾಗಿ ಅಭಿನಂದಿಸಿದರು ಮತ್ತು ವೃತ್ತಿಜೀವನಕ್ಕೆ ಶುಭ ಹಾರೈಸಿದರು.
ಜೊಹೊ ಚೆನ್ನೈ ಮೂಲದ ಜಾಗತಿಕ ಸಾಫ್ಟ್‌ವೇರ್ ಕಂಪನಿಯಾಗಿದ್ದು, ಇದು CRM, ಇಮೇಲ್, ಹಣಕಾಸು ಮತ್ತು ಕೆಲಸದ ಸ್ಥಳ ಪರಿಹಾರಗಳಂತಹ ಕ್ಲೌಡ್-ಆಧಾರಿತ ವ್ಯವಹಾರ ಸಾಧನಗಳನ್ನು ವಿಶ್ವಾದ್ಯಂತದ ಉದ್ಯಮಗಳಿಗೆ ನೀಡುತ್ತದೆ. ಇದನ್ನು ಶ್ರೀಧರ್ ವೆಂಬು ಅವರು ನಿರ್ಮಿಸಿದರು. ಕಂಪನಿಯು, ಕೈಗೆಟುಕುವ ತಂತ್ರಜ್ಞಾನ ಮತ್ತು ಡೇಟಾ ಗೌಪ್ಯತೆಯ ಮೇಲೆ ಕೇಂದ್ರೀಕರಿಸುತ್ತಾ ಸಂಪೂರ್ಣವಾಗಿ ಭಾರತದಲ್ಲಿ ಉತ್ಪನ್ನಗಳನ್ನು ನಿರ್ಮಿಸಲು ಹೆಸರುವಾಸಿಯಾಗಿದೆ. ಅಮೆರಿಕದ ಸುಂಕದ ಉದ್ವಿಗ್ನತೆಯಿಂದಾಗಿ 'ಸ್ವದೇಶಿ' ಪ್ರಚಾರದ ನಡುವೆ, ಗೃಹ ಸಚಿವ ಅಮಿತ್ ಷಾ ಸೇರಿದಂತೆ ಅನೇಕ ಗಣ್ಯರು ದೇಸಿ-ಟೆಕ್ ಕಂಪನಿಯನ್ನು ಅನುಮೋದಿಸಿದ ನಂತರ ಜೊಹೊ ಇತ್ತೀಚೆಗೆ ಸುದ್ದಿಯಾಯಿತು.(ಏಜೆನ್ಸೀಸ್)