More

    ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರಗಿ ವಿರುದ್ಧ ಜಮೀರ್​ ಅಹ್ಮದ್​ ದೂರು

    ಬೆಂಗಳೂರು: ಡ್ರಗ್ಸ್​ ಮಾಫಿಯಾ ವಿರುದ್ಧ ಧ್ವನಿ ಎತ್ತಿರುವ ಸಾಮಾಜಿಕ ಕಾರ್ಯಕರ್ತ ಪ್ರಶಾಂತ್​ ಸಂಬರ್ಗಿ, ಪ್ರತಿದಿನ ಒಂದಲ್ಲ ಒಂದು ಮಹತ್ವದ ವಿಷಯವನ್ನು ಬಹಿರಂಗ ಮಾಡುತ್ತಿದ್ದಾರೆ.

    ಆದರೆ ಈಗ ಚಾಮರಾಜಪೇಟೆ ಶಾಸಕ ಜಮೀರ್ ಅಹ್ಮದ್​ ಪ್ರಶಾಂತ್​ ಸಂಬರಗಿ ವಿರುದ್ಧ ದೂರು ನೀಡಿದ್ದಾರೆ. ಡ್ರಗ್ಸ್​ ಮಾಫಿಯಾ ಪ್ರಕರಣದಲ್ಲಿ ಪ್ರಶಾಂತ್​ ಸಂಬರಗಿ ಅನವಶ್ಯಕವಾಗಿ ನನ್ನ ಹೆಸರು ತಂದಿದ್ದಾರೆ. ಇದರಿಂದ ನನ್ನ ಗೌರವಕ್ಕೆ ಧಕ್ಕೆ ಉಂಟಾಗಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಜಮೀರ್​ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಾನು ಚೆಂಡು ಹೂವಿನ ಗಿಡವನ್ನೇ ಗಾಂಜಾ ಎಂದುಕೊಂಡಿದ್ದೆ; ಸಿ.ಟಿ.ರವಿ

    ಸದ್ಯ ಡ್ರಗ್ಸ್​ ಪ್ರಕರಣದಲ್ಲಿ ಸಿಸಿಬಿ ವಶದಲ್ಲಿರುವ ಸಂಜನಾ ಗಲ್ರಾನಿ ಜಮೀರ್​ ಜತೆ ಕೊಲಂಬಕ್ಕೆ ಏಕೆ ಹೋಗಿದ್ದರು ಎಂದು ಪ್ರಶಾಂತ್​ ಸಂಬರಗಿ ಪ್ರಶ್ನಿಸಿದ್ದರು. ಜಮೀರ್​ ದೂರಿನ ಅನ್ವಯ ಪೊಲೀಸರು ಎನ್​ಸಿಆರ್​ ದಾಖಲು ಮಾಡಿಕೊಂಡಿದ್ದಾರೆ.

    VIDEO: ಸುಶಾಂತ್​ ಸಿಂಗ್​ರ ಅನ್​ಸೀನ್​ ವಿಡಿಯೋಗಳು ವೈರಲ್​; ನೋಡಿದರೆ ಶಾಕ್​ ಆಗದೆ ಇರದು !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts