More

    ಸಮಾಜ ನಿರ್ಮಾಣ ಕೈಂಕರ್ಯಕ್ಕೆ ಪ್ರಶಸ್ತಿಯ ಮೆರುಗು ; ಯುವಾ ಬ್ರಿಗೇಡ್‌ಗೆ ರಾಜ್ಯೋತ್ಸವ ಪ್ರಶಸ್ತಿ ಸಂಘ ಸಂಸ್ಥೆ ವಿಭಾಗದಲ್ಲಿ ಗೌರವ

    ಬೆಂಗಳೂರು/ ಹೊಸಕೋಟೆ: ಪ್ರಖರ ವಾಗ್ಮಿ, ವಿಜಯವಾಣಿ ಅಂಕಣಕಾರ ಚಕ್ರವರ್ತಿ ಸೂಲಿಬೆಲೆ ನೇತೃತ್ವದ ಯುವಾ ಬ್ರಿಗೇಡ್‌ನ ಕೆಲಸವನ್ನು ಗುರುತಿಸಿ ಈ ಬಾರಿಯ ರಾಜ್ಯೋತ್ಸವ ಪ್ರಶಸ್ತಿಗೆ ಸಂಘ- ಸಂಸ್ಥೆ ವಿಭಾಗದಲ್ಲಿ ಸರ್ಕಾರ ಆಯ್ಕೆ ಮಾಡಿದೆ.

    ತರುಣರಲ್ಲಿ ಸೇವಾಭಾವ ಮೂಡಿಸುತ್ತಿರುವ ಯುವಾ ಬ್ರಿಗೇಡ್ ಸಮಾಜವನ್ನು ಸಶಕ್ತಗೊಳಿಸುವ ಸಾರ್ಥಕ ಮಾದರಿಯನ್ನು ಇಡೀ ದೇಶಕ್ಕೆ ಪರಿಚಯಿಸಿದೆ. ಕಲ್ಯಾಣಿ ಸ್ವಚ್ಛತೆ, ನದಿಗಳ ಪುನರುಜ್ಜೀವನದಿಂದ ಹಿಡಿದು ಯುವಕರ ಸ್ವಾವಲಂಬನೆವರೆಗೂ ಕಾರ್ಯವ್ಯಾಪ್ತಿ ಹಿಗ್ಗಿಸಿಕೊಂಡಿರುವ ಯುವಾ ಬ್ರಿಗೇಡ್ ಸಂಘಟನೆ ಕರ್ನಾಟಕದ ಗಡಿ ದಾಟಿ ಆಂಧ್ರ, ಮಹಾರಾಷ್ಟ್ರ, ಕೇರಳಕ್ಕೂ ತಲುಪಿ, ಸಮಾಜಮುಖಿ ಕಾರ್ಯಗಳಿಗೆ ವೇಗ ತುಂಬಿದೆ. ಈ ಸಂಘಟನೆಯ ಕಾರ್ಯಕರ್ತರು ಕಲ್ಯಾಣಿಗಳಿಗೆ ಕಾಯಕಲ್ಪ ನೀಡಿದಾಗ ಖುದ್ದು ಪ್ರಧಾನಿಯೇ ಟ್ವಿಟ್ ಮಾಡಿ ಅಭಿನಂದಿಸಿದ್ದರು.

    ಹತ್ತು ಸಾವಿರಕ್ಕಿಂತ ಹೆಚ್ಚು ಯುವಕರು ಸಕ್ರಿಯವಾಗಿದ್ದು, ರಾಷ್ಟ್ರವಾದಿ ಚಿಂತಕ ಚಕ್ರವರ್ತಿ ಸೂಲಿಬೆಲೆ ಮಾರ್ಗದರ್ಶನದಲ್ಲಿ ಸಕಾರಾತ್ಮಕ ಬದಲಾವಣೆಯ ದೊಡ್ಡ ಭರವಸೆ ಮೂಡಿಸಿದೆ.  ನಾಲ್ಕು ಮುಖ್ಯ ವಿಭಾಗಗಳಲ್ಲಿ ಯುವಾ ಬ್ರಿಗೇಡ್ ಕಾರ್ಯನಿರ್ವಹಿಸುತ್ತಿದೆ. ಮೊದಲನೆಯದು ಮಹಾರಕ್ಷಕ-ಮರೆತುಹೋದ ಮಹಾಶೂರರನ್ನು ಸ್ಮರಿಸಿಕೊಂಡು, ಆ ಜೀವನಮೌಲ್ಯಗಳನ್ನು ಇಂದಿನ ಪೀಳಿಗೆಗೆ ತಿಳಿಸಿ ಕೊಡುವುದು.

    ‘ವಿತ್ತಶಕ್ತಿ’ ಮೂಲಕ ಯುವಕರಿಗೆ ಉದ್ಯೋಗಾವಕಾಶಗಳ ಮಾಹಿತಿ, ನವೋದ್ಯಮಗಳ ಮಾಹಿತಿ, ಸ್ಟಾರ್ಟಪ್ ಸಾಧಕರೊಡನೆ ಸಂವಾದ. ಮೂರನೇ ಮುಖ್ಯ ಯೋಜನೆ ‘ಸದ್ಭಾವನಾ’. ಸಮಾಜದ ಮಹಾಪುರುಷರನ್ನು ಮತ್ತು ಅವರ ಸಂದೇಶಗಳನ್ನು ‘ಸದ್ಭಾವನಾ’ ಒಂದೇ ವೇದಿಕೆಗೆ ತರುತ್ತಿದೆ. ನಾಲ್ಕನೇ ಆಯಾಮ ‘ಡಿಜಿಟಲ್ ಸಂಸ್ಕಾರ’. ಸಾಮಾಜಿಕ ಮಾಧ್ಯಮಗಳನ್ನು ಸಾಮಾಜಿಕ ಪರಿವರ್ತನೆಯ ಮಾಧ್ಯಮವಾಗಿ ಬಳಸಿಕೊಳ್ಳಬೇಕು ಎಂಬ ಉದ್ದೇಶದಿಂದ ಡಿಜಿಟಲ್ ಸಂಸ್ಕಾರ ಹರಡಲಾಗುತ್ತಿದೆ. ಕರ್ನಾಟಕಕ್ಕೆ ನೆಲ, ಜಲದ ವಿಷಯದಲ್ಲಿ ಅನ್ಯಾಯವಾದಾಗ ಟ್ವಿಟರ್ ಟ್ರೆಂಡ್ ಮೂಲಕವೇ ಕೇಂದ್ರ ಸರ್ಕಾರದ ಗಮನ ಸೆಳೆದಿದ್ದು ಮಹತ್ವದ ಸಂಗತಿ. ಮಹದಾಯಿ ವಿಷಯದಲ್ಲಿ ಒಂದೇದಿನಕ್ಕೆ ಸಾವಿರಾರು ಟ್ವೀಟ್‌ಗಳನ್ನು ಮಾಡಲಾಗಿತ್ತು.

    ಯುವಾ ಬ್ರಿಗೇಡ್ ನಾಡಿನ ಮನೆಮಾತಾಗಿದ್ದು ಕಲ್ಯಾಣಿ ಸ್ವಚ್ಛತೆ, ನದಿಗಳ ಸ್ವಚ್ಛತೆ ಮತ್ತು ಸಸಿಗಳನ್ನು ನೆಡುವ ‘ಪೃಥ್ವಿಯೋಗ’ ಕಾರ್ಯಕ್ರಮದ ಮೂಲಕ. ಕಲ್ಯಾಣಿ ಸ್ವಚ್ಛತೆಯಲ್ಲಂತೂ ಸಾವಿರಾರು ಕೈಗಳು ಕೆಲಸ ಮಾಡಿದ ಲ ಬತ್ತಿಹೋಗಿದ್ದ 120ಕ್ಕಿಂತ ಹೆಚ್ಚು ಕಲ್ಯಾಣಿಗಳು ಮತ್ತೆ ಜೀವ ಪಡೆದುಕೊಂಡಿವೆ. ‘ಕಣಕಣದಲ್ಲೂ ಶಿವ’ ಕಾರ್ಯಕ್ರಮದ ಹೆಸರಿನಲ್ಲಿ ಸಾವಿರಾರು ಹಳೆಯ ೆಟೋಗಳನ್ನು ವಿಲೇವಾರಿ ಮಾಡಲಾಗಿದೆ. ಶಾಲಾಮಕ್ಕಳಿಗೆ ಅನುಕೂಲವಾಗಲೆಂದು ಹಣ್ಣಿನ ಗಿಡಗಳನ್ನು ನೆಟ್ಟು, ಅದರ ಪೋಷಣೆಯ ಜವಾಬ್ದಾರಿಯನ್ನು ಮಕ್ಕಳಿಗೆ ವಹಿಸಿದೆ.

    ಈ ರಾಜೋತ್ಸವ ಪ್ರಶಸ್ತಿ ಸಂಘಟನೆಗೆ ದೊರೆತ ಪ್ರಶಸ್ತಿಯಾಗಿದ್ದು ಇದು ಸಂಪೂರ್ಣ ಯುವ ಬ್ರಿಗೇಡ್ ಕಾರ್ಯಕರ್ತರಿಗೆ ಸೇರಿದ್ದಾಗಿದೆ. ಆರು ವರ್ಷಗಳಿಂದ ನಿಸ್ವಾರ್ಥವಾಗಿ ನಾಡಿನ ಹಾಗೂ ಜನರ ಸೇವೆಗಾಗಿ ನಿರತರಾಗಿರುವುದನ್ನು ಸರ್ಕಾರ ಗುರುತಿಸಿರುವುದರಿಂದ ಸಂತೋಷವಾಗಿದೆ. ಯಾವುದೇ ಅಪ್ಲಿಕೇಷನ್ ಅಥವಾ ಮನವಿ ಮಾಡದೆ ಇದ್ದರೂ ಸರ್ಕಾರ ಒಳ್ಳೆಯದನ್ನು ಗುರುತಿಸಿ ಪ್ರಶಸ್ತಿ ನೀಡಿರುವುದು ಇನ್ನೂ ಹೆಚ್ಚು ಕನ್ನಡ ನಾಡಿನ ಕೆಲಸ ಮಾಡಲು ನಮಗೆ ಪ್ರೇರಣೆಯಾಗುತ್ತದೆ.
    ಚಕ್ರವರ್ತಿ ಸೂಲಿಬೆಲೆ, ಯುವಾ ಬ್ರಿಗೇಡ್ ಸಂಸ್ಥಾಪಕ

    ಯುವಾ ಬ್ರಿಗೇಡ್‌ಗೆ ದೊರೆತ ರಾಜ್ಯೋತ್ಸವ ಪ್ರಶಸ್ತಿ ಎಲ್ಲಾ ಸದಸ್ಯರಿಗೆ ದೊರೆತ ಪ್ರಶಸ್ತಿಯಾಗಿದೆ. ಯುವ ಬ್ರಿಗೇಡ್ ಸಮಾಜ ಸೇವೆಗೆ ಮುಂದಾಗಿ ಯುವಕರ ಮನಸ್ಥಿತಿ ಬದಲಿಸಿ ಶನಿವಾರ, ಭಾನುವಾರ ಸಮಾಜ ಸೇವೆಗೆ ತಮ್ಮ ಸಮಯ ಮುಡಿಪಾಗಿಡುವ ನಿಟ್ಟಿನಲ್ಲಿ ದೇವಾಲಯಗಳ ಸ್ವಚ್ಚತೆ, ಮೋರಿ ಸ್ವಚ್ಚತೆ, ಕಲ್ಯಾಣಿ ಜೀರ್ಣೋದ್ಧಾರ, ಸಾರ್ವಜನಿಕ ಸ್ಥಳಗಳಲ್ಲಿ ಕಸ ವಿಲೇವಾರಿಯಂತಹ ಕಾರ್ಯಗಳಿಂದ ಗುರುತಿಸಿಕೊಂಡು ಸಮಾಜ ಪರಿವರ್ತನೆಯಲ್ಲಿ ಮಹತ್ತರವಾದ ಪಾತ್ರ ವಹಿಸುತ್ತಿದೆ.
    ದೇವಿದಾಸ್ ಸುಬ್ರಾಯ್ ಸೇಟ್, ಚಕ್ರವರ್ತಿ ಸೂಲಿಬೆಲೆ ಅವರ ತಂದೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts