More

    ಮಹಿಳೆಯರ ನೆರವಿಗೆ ಯೂಟ್ಯೂಬ್ ಚಾನೆಲ್, ಡಾ.ಡಿ.ವೀರೇಂದ್ರ ಹೆಗ್ಗಡೆ ದಂಪತಿ ಚಾಲನೆ

    ಬೆಳ್ತಂಗಡಿ: ಗ್ರಾಮೀಣ ಭಾಗದ ಮಹಿಳೆಯರ ದೈನಂದಿನ ಜೀವನಕ್ಕೆ ಪೂರಕ ಮಾಹಿತಿ ಕ್ರೋಡೀಕರಣ ಉದ್ದೇಶದಿಂದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಯೂಟ್ಯೂಬ್ ಚಾನೆಲ್ ಆರಂಭಿಸಿದೆ.

    ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ವಿ.ಹೆಗ್ಗಡೆ ಸಮ್ಮುಖ ಶ್ರದ್ಧಾ ಅಮಿತ್ ಮಾರ್ಗದರ್ಶನದಲ್ಲಿ ಮಂಗಳವಾರ ಯೂಟ್ಯೂಬ್ ಚಾನೆಲ್‌ಗೆ ಚಾಲನೆ ದೊರೆಯಿತು.

    ಅಂತರ್ಜಾಲದಲ್ಲಿ ಅನೇಕ ಮಾಹಿತಿಗಳು ಲಭ್ಯವಿದ್ದು, ಇದರಲ್ಲಿ ಮಹಿಳೆಯರಿಗೆ ಪೂರಕವಾಗಿರುವ ಮಾಹಿತಿಗಳನ್ನು ಆಯ್ಕೆ ಮಾಡಿ ತಲುಪಿಸುವ ಪ್ರಯತ್ನ ಮಾಡುವುದಕ್ಕಾಗಿ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳದಿಂದ ನಡೆಸಲ್ಪಡುತ್ತಿರುವ ಅನೇಕ ಸಂಸ್ಥೆಗಳಲ್ಲಿ ಇರುವ ಮಾಹಿತಿ ಸಂಪನ್ಮೂಲಗಳನ್ನು ಸದಸ್ಯರಿಗೆ ತಲುಪಿಸುವುದಕ್ಕಾಗಿ ಈ ಚಾನೆಲ್ ಆರಂಭಿಸಲಾಗಿದೆ.

    ಆಪ್ತ ಸಮಾಲೋಚನೆ, ಮಕ್ಕಳ ಮಾನಸಿಕ ಬೆಳವಣಿಗೆ ಇತ್ಯಾದಿ ವಿಚಾರಗಳ ಕುರಿತು ಮಾಹಿತಿ, ತರಕಾರಿ ಬೆಳೆಯುವ ವಿಧಾನ, ಕೈತೋಟ ರಚನೆ, ಟೆರೆಸ್ ಗಾರ್ಡನ್, ಮನೆಯ ತ್ಯಾಜ್ಯಗಳಿಂದ ಸಾವಯವ ಗೊಬ್ಬರ ತಯಾರಿ, ಮನೆ ನಿರ್ವಹಣೆ ಮಾಹಿತಿ, ಯೋಗಾಸನ ಕಿರುಚಿತ್ರ, ಕೋವಿಡ್-19 ಸಂದರ್ಭ ಸ್ವಚ್ಛತೆ, ದೈಹಿಕ ಅಂತರದ ಮಹತ್ವ, ಸರ್ಕಾರಿ ಯೋಜನೆಗಳ ಮಾಹಿತಿ, ಸಂಸ್ಥೆಯ ಕಾರ್ಯಕ್ರಮ, ಮಕ್ಕಳಿಗಾಗಿ ಸುಭಾಷಿತ, ಮೌಲ್ಯಾಧರಿತ ಕಥೆಗಳು, ಮಹಿಳೆಯರು ಓದಬಹುದಾದ ಪುಸ್ತಕಗಳ ಕುರಿತು ಮಾಹಿತಿಗಳನ್ನು ಪ್ರಸ್ತುತಪಡಿಸಲಾಗುತ್ತದೆ.
    ಕಾರ್ಯಕ್ರಮ ಸಂದರ್ಭ ಗ್ರಾಮಾಭಿವೃದ್ಧಿ ಯೋಜನೆ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts