More

    ಯುವಜನತೆ ಆತ್ಮಹತ್ಯೆ ಆತಂಕಕಾರಿ

    ಹುಣಸೂರು: ಮಾನಸಿಕ ಒತ್ತಡಗಳು ವಿದ್ಯಾರ್ಥಿಗಳನ್ನು ವ್ಯಸನಿಗಳನ್ನಾಗಿಸಿ ಅಂತಿಮವಾಗಿ ಆತ್ಮಹತ್ಯಗೆ ಶರಣಾಗುವಂತೆ ಮಾಡುತ್ತಿರುವುದು ಆತಂಕಕಾರಿ ವಿಷಯ ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶ ಬಿ.ವೈ.ಮನುಪಟೇಲ್ ವಿಷಾದಿಸಿದರು.

    ನಗರದ ಜ್ಞಾನಧಾರ ಪ್ರಥಮದರ್ಜೆ ಕಾಲೇಜು, ತಾಲೂಕು ಕಾನೂನು ಸೇವಾ ಸಮಿತಿ ವಕೀಲರ ಸಂಘ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಸಹಯೋಗದಲ್ಲಿ ಕಾಲೇಜಿನ ಎನ್ನೆಸ್ಸೆಸ್ ಘಟಕದ ಉದ್ಘಾಟನೆ, ವಿಶ್ವ ಆತ್ಯಹತ್ಯೆ ತಡೆ ದಿನಾಚರಣೆ ಮತ್ತು ಮಾದಕ ವ್ಯಸನ ಕುರಿತು ಆಯೋಜಿಸಿದ್ದ ಅರಿವು ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

    ವಿದ್ಯಾರ್ಥಿಗಳಲ್ಲಿ ಪರೀಕ್ಷಾ ಒತ್ತಡ ಶಿಕ್ಷಕರಿಂದ ಮತ್ತು ಪಾಲಕರಿಂದ ಆಗುತ್ತಿರುತ್ತದೆ. ಅಲ್ಲದೇಯೌವ್ವನ ಸಹಜ ಮೋಹಗಳು, ಸಾಮಾಜಿಕ ಜಾಲತಾಣಗಳ ಪ್ರಭಾವಗಳ ಒತ್ತಡದಿಂದಾಗಿ ಖಿನ್ನತೆಗೊಳಗಾಗುವ ಯುವಸಮೂಹ ನಂತರದಲ್ಲಿ ಮಾದಕ ವ್ಯಸನಕ್ಕೆ ತುತ್ತಾಗುವ ಮೂಲಕ ಜೀವನದ ಪಯಣವನ್ನೆ ಕೊನೆಗಾಣಿಸಿಕೊಳ್ಳುತ್ತಿದ್ದಾರೆ. ದೇಶದ ಭವಿಷ್ಯದ ಆಸ್ತಿಯಾದ ಯುವಸಮೂಹ ಈ ದಿಕ್ಕಿನಲ್ಲೆ ಪಯಣಿಸಿದರೆ ದೇಶದ ಭವಿಷ್ಯ ಮಂಕಾಗಲಿದೆ. ಸೂಕ್ತ ಸಂದರ್ಭದಲ್ಲಿ ಪಾಲಕರು,ಶಿಕ್ಷಕರು ಮತ್ತು ಸಮುದಾಯ ವಿದ್ಯಾರ್ಥಿಗಳನ್ನು ಎಚ್ಚರಿಸುವ, ಅರಿವು ಮೂಡಿಸಿ ಸರಿದಾರಿಗೆ ತರುವ ಕೆಲಸ ನಡೆಯಬೇಕಿದೆ ಎಂದು ಅಭಿಪ್ರಾಯಪಟ್ಟರು.

    ವಕೀಲ ಎಚ್.ವಿ.ವೆಂಕಟೇಶ್ ಮಾದಕ ವ್ಯಸನದಿಂದಾಗುವ ದುಷ್ಪರಿಣಾಮಗಳ ಕುರಿತು ಮತ್ತು ಸಂಚಾರ ಗಿರಿಜನ ಆರೋಗ್ಯ ಘಟಕದ ವೈದ್ಯಾಧಿಕಾರಿ ಡಾ.ಎಚ್.ಕೆ.ಸೌಮ್ಯಶ್ರೀ ಆತ್ಮಹತ್ಯೆ ತಡೆಗಟ್ಟುವ ಕುರಿತು ವಿಶೇಷ ಉಪನ್ಯಾಸ ನೀಡಿದರು. ಅಧ್ಯಕ್ಷತೆಯನ್ನು ಪ್ರಾಂಶುಪಾಲ ಎಚ್.ಬಿ.ಕಾರ್ತಿಕ್ ವಹಿಸಿದ್ದರು. ವಕೀಲರ ಸಂಘದ ಅಧ್ಯಕ್ಷ ಯೋಗಣ್ಣೇಗೌಡ, ಉಪಾಧ್ಯಕ್ಷ ಬಿ.ಸಿ.ಸುಂದರೇಶ್, ತಾಲೂಕು ಆರೋಗ್ಯ ಶಿಕ್ಷಣಾಧಿಕಾರಿ ರಾಜೇಶ್ವರಿ ಹಾಗೂ ವಿದ್ಯಾರ್ಥಿಗಳು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts