More

    ಯುವಕರು ದೇಸಿ ಆಟಗಳತ್ತ ಆಸಕ್ತಿ ತೋರಲಿ

    ಗುತ್ತಲ: ನಾವೆಲ್ಲ ಕ್ರಿಕೆಟ್ ಆಡುತ್ತಿರಲಿಲ್ಲ. ಭಾರತೀಯ ಆಟಗಳಾದ ಕಬಡ್ಡಿ, ಕುಸ್ತಿಗಳಲ್ಲಿ ಭಾಗವಹಿಸುತ್ತಿದ್ದೆವು. ಈಗ ಎಲ್ಲರೂ ಕ್ರಿಕೆಟ್‌ಗೆ ಒತ್ತು ನೀಡುತ್ತಿದ್ದಾರೆ. ಯುವಕರು ದೇಸಿ ಆಟಗಳತ್ತ ಆಸಕ್ತಿ ತೋರಬೇಕು ಎಂದು ಶಾಸಕ ರುದ್ರಪ್ಪ ಲಮಾಣಿ ಹೇಳಿದರು.
    ಸಮೀಪದ ಶಿವನಗರ(ಗುತ್ತಲ ತಾಂಡಾ)ದಲ್ಲಿ ಸೇವಾಲಾಲ ಗೆಳೆಯರ ಬಳಗದ ಆಶ್ರಯದಲ್ಲಿ ಶನಿವಾರ ಆಯೋಜಿಸಿದ್ದ ಹಾಪ್ ಪಿಚ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಅವರು ಮಾತನಾಡಿದರು.
    ಗುತ್ತಲ ಪಟ್ಟಣದಲ್ಲಿ ಅನೇಕ ಅಭಿವೃದ್ಧಿ ಕೆಲಸಗಳಿಗೆ ಒತ್ತು ನೀಡಿದ್ದೇನೆ. 7 ಬೋರ್‌ವೆಲ್ ಕೊರೆಸಲು ಈಗಾಗಲೇ ಪಂಚಾಯಿತಿ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪಟ್ಟಣದ ನೀರಿನ ಸಮಸ್ಯೆ ನಿವಾರಣೆಗೆ ಈಗಾಗಲೇ ಕಾರ್ಯ ಯೋಜನೆ ಕೈಗೆತ್ತಿಕೊಳ್ಳಲಾಗಿದ್ದು, ಕೆಲವೇ ತಿಂಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ನಿವಾರಣೆ ಆಗಲಿದೆ ಎಂದರು.
    ಜಿಪಂ ಮಾಜಿ ಅಧ್ಯಕ್ಷ ಕೊಟ್ರೇಶಣ್ಣ ಬಸೇಗಣ್ಣಿ, ಜಿಪಂ ಮಾಜಿ ಸದಸ್ಯ ಸಿ.ಬಿ. ಕುರವತ್ತಿಗೌಡರ, ಮಾದೇಗೌಡ್ರ ಗಾಜೀಗೌಡ್ರ, ತಾಪಂ ಮಾಜಿ ಅಧ್ಯಕ್ಷ ನಾಗರಾಜ ಎರಿಮನಿ, ಆಶ್ರಯ ಸಮಿತಿ ಮಾಜಿ ಅಧ್ಯಕ್ಷ ಶಹಜಾನಸಾಬ ಅಗಡಿ, ಪಪಂ ಸದಸ್ಯರಾದ ಪ್ರದೀಪ ಸಾಲಗೇರಿ, ಖಲೀಲಹ್ಮದ ಖಾಜಿ, ಮಾಜಿ ಸದಸ್ಯರಾದ ನಿಂಗರಾಜ ನಾಯಕ, ಗುಡ್ಡಪ್ಪ ಗೊರವರ, ಮಂಜುನಾಥ ಅಡಗಂಟಿ, ಮಲ್ಲೇಶ ಲಮಾಣಿ, ಸಂತೋಷ ನಾಯಕ, ವಿಷ್ಣು ನಾಯಕ, ರಾಮಪ್ಪ ಲಮಾಣಿ, ರಮೇಶ ಲಮಾಣಿ, ಪೀಕಪ್ಪ ಲಮಾಣಿ, ಭದ್ರಪ್ಪ ಲಮಾಣಿ, ಮಂಜುನಾಥ ಡಿ. ಲಮಾಣಿ, ರಾಮಪ್ಪ ಆರ.ಲಮಾಣಿ, ಈರಪ್ಪ ಎನ್ ಲಮಾಣಿ, ಪ್ರಕಾಶ ಲಮಾಣಿ, ಹನುಮಂತ ಲಮಾಣಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts