More

    ಯುವಕರೇ, ಪುರಾಣ ಕಥೆಗಳ ಅಂತಃಸತ್ವ ಅಳವಡಿಸಿಕೊಳ್ಳಿ

    ಶೃಂಗೇರಿ: ಯಕ್ಷಗಾನ ಕಲೆ ಮೂಲಕ ಪೌರಾಣಿಕ ಕಥೆಗಳಲ್ಲಿ ಅಡಗಿರುವ ಅಂತಃಸತ್ವ, ನೀತಿಗಳನ್ನು ಯುವಪೀಳಿಗೆ ಜೀವನದಲ್ಲಿ ಅಳವಡಿಸಿಕೊಂಡರೆ ಸುಸ್ಥಿರ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರೊ. ಪವನ್ ಕಿರಣ್‌ಕೆರೆ ಹೇಳಿದರು.
    ಜಿಎಸ್‌ಬಿ ಸಭಾಭವನದಲ್ಲಿ ಶ್ರೀ ವೆಂಕಟೇಶ್ವರ ಯಕ್ಷಗಾನ ಸಂಘ ಹಾಗೂ ರೋಟರಿ ಸಂಸ್ಥೆಯಿಂದ ಶನಿವಾರ ವೆಂಕಟರಮಣಯ್ಯ ಹಾಗೂ ಹಳಕ ರಮೇಶ್ ಭಟ್ ಇವರ ಸ್ಮರಣಾರ್ಥ ಆಯೋಜಿಸಿದ್ದ ತಾಳಮದ್ದಲೆ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು.
    ನಾಡಿನ ಪಾರಂಪರಿಕ ಮೌಲ್ಯಗಳನ್ನು ಉಳಿಸುವಲ್ಲಿ ಯಕ್ಷಗಾನ ನೀಡಿದ ಕೊಡುಗೆ ಅಪಾರ. ಯುವಕರು ಯಕ್ಷಗಾನ ಕಲೆಯತ್ತ ಹೆಚ್ಚಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಆಗ ಸಮಾಜದ ಪಿಡುಗುಗಳು ನಿವಾರಣೆ ಆಗಬಹುದು. ನಮ್ಮ ಪುರಾಣಗಳಲ್ಲಿ ಪಾಲಕರು ಹಾಗೂ ಹಿರಿಯರನ್ನು ಹೇಗೆ ಮತ್ತು ಯಾತಕ್ಕಾಗಿ ಅವರನ್ನು ಗೌರವಿಸಬೇಕು ಎಂಬುದರ ಕುರಿತು ಸಾಕಷ್ಟು ನೀತಿಗಳಿವೆ ಎಂದರು.
    ಉತ್ತಮ ಅಂಶಗಳನ್ನು ಯಕ್ಷಗಾನ, ತಾಳಮದ್ದಲೆ ಮೂಲಕ ಜನಮಾನಸಕ್ಕೆ ಮನರಂಜನೆ ಮೂಲಕ ತಲುಪಿಸುವುದು ಯಕ್ಷಗಾನ ಕಲೆಯ ವಿಶೇಷತೆ. ಇಂತಹ ಪ್ರಬುದ್ಧ ಕಲೆಯನ್ನು ಮಲೆನಾಡಿನಲ್ಲಿ ಹಲವಾರು ಕಲಾವಿದರು ನಿಸ್ವಾರ್ಥದಿಂದ ಜನರಿಗೆ ತಲುಪಿಸುವಲ್ಲಿ ಅವಿರತವಾಗಿ ಶ್ರಮಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts