More

    ನೀನು ಬಿ-ಗ್ರೇಡ್​ ನಟಿಯಲ್ಲ … ಹಾಗಂತ ತಾಪ್ಸಿಗೆ ಹೇಳಿದ್ದು ಯಾರು?

    ತಾಪ್ಸಿ ಪನ್ನು ಅಭಿನಯದ ಬಗ್ಗೆ, ಆಕೆ ಪಾತ್ರಗಳನ್ನು ಆಯ್ಕೆ ಮಾಡಿಕೊಳ್ಳುವ ಬಗ್ಗೆ ಈ ಮುಂಚೆ ಯಾರೂ ಚಕಾರವೆತ್ತಿರಲಿಲ್ಲ. ‘ಮುಲ್ಕ್​’, ‘ಬದ್ಲಾ’, ‘ಪಿಂಕ್​’ ಮುಂತಾದ ಚಿತ್ರಗಳಲ್ಲಿನ ಅಭಿನಯದ ಬಗ್ಗೆ ತಾಪ್ಸಿಗೆ ಎಲ್ಲರಿಂದ ಮೆಚ್ಚುಗೆ ವ್ಯಕ್ತವಾಗಿತ್ತು.

    ಆದರೆ, ಇತ್ತೀಚೆಗೆ ಕಂಗನಾ ರಣಾವತ್​ ಮಾತ್ರ ತಾಪ್ಸಿಯನ್ನ ಒಬ್ಬ ಬಿ-ಗ್ರೇಡ್​ ನಟಿ ಎಂದು ಕರೆದರು. ಆ ನಂತರ ಈ ವಿಷಯವಾಗಿ ಸೋಷಿಯಲ್​ ಮೀಡಿಯಾದಲ್ಲಿ ಸಾಕಷ್ಟು ಚರ್ಚೆಗಳಾಗುತ್ತಿವೆ. ಅದರಲ್ಲೂ ತಾಪ್ಸಿ ಅಭಿನಯದ ಬಗ್ಗೆ ಕಂಗನಾ ಈ ರೀತಿ ಮಾತನಾಡಬಾರದಿತ್ತು ಎಂದು ಹಲವರು ಅಭಿಪ್ರಾಯಪಟ್ಟಿದ್ದಿದೆ.

    ಇದನ್ನೂ ಓದಿ: ಅದೆಷ್ಟು ಚಿತ್ರಗಳಿಗೆ ಸ್ಫೂರ್ತಿಯಾಯ್ತು ಗೊತ್ತಾ ಕನ್ನಡದ ‘ಸ್ಕೂಲ್​ ಮಾಸ್ಟರ್​’?

    ಈಗ ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಾಧೀಶ ಮತ್ತು ಪ್ರೆಸ್​ ಕೌನ್ಸಿಲ್​ ಆಫ್​ ಇಂಡಿಯಾದ ಮಾಜಿ ಅಧ್ಯಕ್ಷ ಮಾರ್ಕಂಡೇಯ ಕಾಟ್ಜು ಅಭಿಪ್ರಾಯ ಪಟ್ಟಿದ್ದಾರೆ. ‘ಮುಲ್ಕ್​’ ಚಿತ್ರದಲ್ಲಿ ತಾಪ್ಸಿ ನಿರ್ವಹಿಸಿದ ಲಾಯರ್​ ಪಾತ್ರದಿಂದ ಬಹಳ ಖುಷಿಯಾಗಿರುವ ಅವರು, ಟ್ವಿಟರ್​ನಲ್ಲಿ ತಮ್ಮ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ಈ ಕುರಿತು ಟ್ವೀಟ್​ ಮಾಡಿರುವ ಅವರು, ‘ತಾಪ್ಸಿ ನೀನು ಬಿ-ಗ್ರೇಡ್​ ನಟಿಯಲ್ಲ, ಏ-ಗ್ರೇಡ್​ ನಟಿ’ ಎಂದು ಹೇಳಿದ್ದಾರೆ. ಅಷ್ಟೇ ಅಲ್ಲ, ”ಮುಲ್ಕ್​’ ಚಿತ್ರದಲ್ಲಿನ ಲಾಯರ್​ ಪಾತ್ರದಲ್ಲಿ ಬಹಳ ನೈಜವಾಗಿ ನಟಿಸಿದ್ದೀರಿ. ನೀವು ನಿಜವಾಗಲೂ ಲಾಯರ್​ ಆಗಿ, ನನ್ನ ಕೋರ್ಟ್​ನಲ್ಲಿ ವಾದ ಮಾಡಬೇಕಿತ್ತು’ ಎಂದು ಅವರು ಹೇಳಿದ್ದಾರೆ.

    ಇದನ್ನೂ ಓದಿ: ಕಂಗನಾಗಿಂತ ದೊಡ್ಡ ಉದಾಹರಣೆ ಬೇಕಿಲ್ಲ … ಜಾವೇದ್​ ಅಖ್ತರ್​ ಹೀಗೆ ಹೇಳಿದ್ದು ಯಾಕೆ?

    ಈ ಬಗ್ಗೆ ಇನ್ನಷ್ಟು ಮಾತನಾಡಿರುವ ಅವರು, ‘ನಾನು 20 ವರ್ಷಗಳ ಕಾಲ ವಕೀಲನಾಗಿದ್ದೆ ಮತ್ತು 20 ವರ್ಷಗಳ ಕಾಲ ನ್ಯಾಯಮೂರ್ತಿಯಾಗಿದ್ದೆ. ಹಲವು ವಕೀಲರನ್ನು ಬಹಳ ಹತ್ತಿರದಿಂದ ನೋಡಿದ್ದೇನೆ. ‘ಮುಲ್ಕ್​’ ಚಿತ್ರದಲ್ಲಿ ನಿನ್ನ ಅಭಿನಯ ಅದೆಷ್ಟು ನೈಜವಾಗಿತ್ತು ಎಂದರೆ, ನೀನು ನಿಜಕ್ಕೂ ಲಾಯರ್​ ಇರಬಹುದು ಎಂದುಕೊಂಡಿದ್ದೆ. ಪಾತ್ರ ಮಾಡುವುದಕ್ಕೆ ಯಾರಿಂದಾದರೂ ತರಬೇತಿ ಪಡೆದಿದ್ದೀಯ’ ಎಂದು ಅವರು ಪ್ರಶ್ನಿಸಿದ್ದಾರೆ.

    ಹಿರಿಯ ನ್ಯಾಯಮೂರ್ತಿಯೊಬ್ಬರು ತನ್ನ ಅಭಿನಯದ ಬಗ್ಗೆ ಮೆಚ್ಚಿ ಮಾತನಾಡಿರುವುದಕ್ಕೆ ಖುಷಿ ವ್ಯಕ್ತಪಡಿಸಿರುವ ತಾಪ್ಸಿ, ‘ಚಿತ್ರೀಕರಣ ಸಮಯದಲ್ಲಿ ಒಬ್ಬರು ಲಾಯರ್​ ನಮ್ಮ ಜತೆಗೇ ಇದ್ದರು. ಅವರಿಂದ ಹಲವು ವಿಷಯಗಳನ್ನು ಕಲಿತಿದ್ದೇನೆ. ಹಾಗಾಗಿ ಚೆನ್ನಾಗಿ ನಟಿಸುವುದಕ್ಕೆ ಸಾಧ್ಯವಾಯಿತು’ ಎಂದು ತಾಪ್ಸಿ ಹೇಳಿದ್ದಾರೆ.

    ಕಾರ್ಗಿಲ್ ಕಲಿಗಳಿಗೆ ಇನ್​ಸ್ಟಾಗ್ರಾಮ್​​ನಲ್ಲಿ ಗೌರವ ಸಲ್ಲಿಸಿದ ಬಾಲಿವುಡ್ ಬೆಡಗಿ ಅನುಷ್ಕಾ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts