More

    ಕ್ರಿಕೆಟಿಗ ಚೇತೇಶ್ವರ್ ಪೂಜಾರಗೆ ಜನಾಂಗೀಯ ನಿಂದನೆ ?

    ಲೀಡ್ಸ್: ಭಾರತ ತಂಡದ ಆಟಗಾರ ಚೇತೇಶ್ವರ್ ಪೂಜಾರ ಸೇರಿದಂತೆ ಹಲವು ವಿದೇಶಿ ಆಟಗಾರರನ್ನು ಹೆಸರನ್ನು ಉಚ್ಛರಿಸಲು ಸಾಧ್ಯವಾಗದೇ ‘ಸ್ಟೀವ್’ ಎಂಬ ಅಡ್ಡ ಹೆಸರಿನಲ್ಲಿ ಕರೆಯುವ ಮೂಲಕ ಸಾಂಸ್ಥಿಕ ವರ್ಣಭೇದ ನೀತಿ ಅನುಸರಿಸಲಾಗಿತ್ತು ಎಂದು ಯಾರ್ಕ್‌ಷೈರ್ ಕ್ಲಬ್‌ನ ಮಾಜಿ ನೌಕರ ಅಜೀಮ್ ರಫೀಕ್ ಆರೋಪಿಸಿದ್ದಾರೆ. ಇದಕ್ಕೆ ಪೂರಕವಾಗಿ ವೆಸ್ಟ್ ಇಂಡೀಸ್‌ನ ಮಾಜಿ ಕ್ರಿಕೆಟಿಗ ಟಿನೊ ಬೆಸ್ಟ್ ಹಾಗೂ ಪಾಕಿಸ್ತಾನದ ರಾಣಾ ನವೀದ್ ಉಲ್ ಹಸನ್ ಕೂಡ ಅಜೀಮ್ ರಫೀಕ್ ಹೇಳಿಕೆಗೆ ಧ್ವನಿಗೂಡಿಸಿದ್ದಾರೆ.

    ಯಾರ್ಕ್‌ಷೈರ್‌ನ ಮಾಜಿ ನೌಕರರಾದ ತಾಜ್ ಬಟ್ ಹಾಗೂ ಟೋನಿ ಬೌರಿ ಕೂಡ ಸಾಂಸ್ಥಿಕ ವರ್ಣಭೇದ ನೀತಿಯ ಬಗ್ಗೆ ಸಾಕಷ್ಟು ಸಾಕ್ಷಿ ನೀಡಿದ್ದಾರೆ ಎನ್ನಲಾಗಿದೆ. ‘ಸ್ಥಳೀಯ ಟ್ಯಾಕ್ಸಿ ಚಾಲಕರು, ರೆಸ್ಟೋರೆಂಟ್‌ನ ನೌಕರರು, ಏಷ್ಯಾದ ಸಮೂಹಕ್ಕೆ ಇದೇ ಹೆಸರಿನಲ್ಲಿ ಕರೆಯುತ್ತಾರೆ. ಏಕೆಂದರೆ ಅವರಿಗೆ ಹೆಸರಿನ ಉಚ್ಛಾರಣೆ ಬರುವುದಿಲ್ಲ. ಇದಕ್ಕೆ ಪೂಜಾರ ಅವರು ಕೂಡ ಹೊರತಾಗಿರಲಿಲ್ಲ ಎಂದು ಬಟ್ ತಿಳಿಸಿದ್ದಾರೆ. ಇದರಿಂದ ಕ್ಲಬ್‌ಗೆ ಸೇರಿದ 6 ವಾರಗಳಲ್ಲೇ ರಾಜೀನಾಮೆ ನೀಡಿ ಹೊರಬಂದೆ ಎಂದು ಹೇಳಿದ್ದಾರೆ.

    ಭಾರತದ ತಜ್ಞ ಟೆಸ್ಟ್ ಆಟಗಾರನಾಗಿರುವ ಪೂಜಾರ, ಬಿಡುವಿನ ವೇಳೆ ಆಡಲು ಇಂಗ್ಲೆಂಡ್ ಕೌಂಟಿ ಯಾರ್ಕ್‌ಷೈರ್ ಜತೆ ಒಪ್ಪಂದ ಮಾಡಿಕೊಂಡಿದ್ದರು. 2015ರಲ್ಲೂ ಕೌಂಟಿ ಕ್ಲಬ್ ಪರ ಪೂಜಾರ ಆಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts