More

  ಸಲಗಕ್ಕೆ ಮಲೇಷ್ಯಾ ರ‍್ಯಾಪರ್​; ಶೀರ್ಷಿಕೆ ಗೀತೆಗೆ ಯೋಗಿ ಧ್ವನಿ

  ಬೆಂಗಳೂರು: ‘ಟಗರು’ ಚಿತ್ರದ ಶೀರ್ಷಿಕೆ ಗೀತೆಯನ್ನು ಆಂಟೋನಿ ದಾಸ್ ಅವರಿಂದ ಹಾಡಿಸಿದ್ದರು ಸಂಗೀತ ನಿರ್ದೇಶಕ ಚರಣ್​ರಾಜ್. ‘ಟಗರು ಬಂತು ಟಗರು …’ ಎಂಬ ಈ ಹಾಡು ದೊಡ್ಡ ಹಿಟ್ ಆಗಿತ್ತು. ಇದೀಗ, ‘ದುನಿಯಾ’ ವಿಜಯ್ ಅಭಿನಯದ ಮತ್ತು ಮೊದಲ ನಿರ್ದೇಶನದ ‘ಸಲಗ’ ಚಿತ್ರದ ಶೀರ್ಷಿಕೆ ಗೀತೆಯನ್ನು ತಮಿಳಿನ ಮತ್ತೊಬ್ಬ ಗಾಯಕ ಯೋಗಿ ಬಿ. ಅವರಿಂದ ಹಾಡಿಸಿದ್ದಾರೆ ಚರಣ್​ರಾಜ್. ಹಿಪ್​-ಹಾಪ್ ಗಾಯನದಲ್ಲಿ ದೊಡ್ಡ ಹೆಸರು ಮಾಡಿರುವ ಮತ್ತು ‘ಮಲೇಷ್ಯಾ ರ‍್ಯಾಪರ್’ ಎಂದೇ ಜನಪ್ರಿಯವಾಗಿರುವ ಯೋಗಿ, ‘ಸಲಗ’ ಚಿತ್ರದ ಶೀರ್ಷಿಕೆ ಗೀತೆಯನ್ನು ಚೆನ್ನೈನಲ್ಲಿ ಹಾಡಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕೆ ಸಾಹಿತ್ಯ ಬರೆದಿದ್ದ ನಾಗಾರ್ಜುನ ಶರ್ಮ ಈ ಹಾಡನ್ನು ಬರೆದಿದ್ದಾರೆ. ಚೆನ್ನೈನ ಸ್ಟುಡಿಯೋದಲ್ಲಿ ಈ ಹಾಡಿನ ರೆಕಾರ್ಡಿಂಗ್ ಆಗಿದ್ದು, ಯೋಗಿ ಅವರ ಗಾಯನವನ್ನು ಕೇಳುವುದಕ್ಕೆ ಗಾಯಕ ಸಂಚಿತ್ ಹೆಗ್ಡೆ ಮುಂತಾದವರು ಚೆನ್ನೈಗೆ ಹೋಗಿದ್ದರಂತೆ. ಜನವರಿ ಮೊದಲ ವಾರದಲ್ಲಿ ಈ ಹಾಡು, ಯೂಟ್ಯೂಬ್​ನ ಎ2 ಚಾನಲ್​ನಲ್ಲಿ ಬಿಡುಗಡೆಯಾಗಲಿದೆ.

  ‘ಸಲಗ’ ಚಿತ್ರದ ಕೆಲಸಗಳು ಮುಗಿಯುವ ಹಂತಕ್ಕೆ ಬಂದಿದ್ದು, ಚಿತ್ರವನ್ನು ಫೆಬ್ರವರಿ ಕೊನೆಯ ವಾರದಲ್ಲಿ ಬಿಡುಗಡೆ ಮಾಡುವುದಕ್ಕೆ ನಿರ್ವಪಕ ಕನಕಪುರ ಶ್ರೀಕಾಂತ್ ಉದ್ದೇಶಿಸಿದ್ದಾರೆ. ಫೆಬ್ರವರಿಯಲ್ಲಿ ಬಿಡುಗಡೆ ಮಾಡುತ್ತಿರುವುದಕ್ಕೂ ಕಾರಣವಿದೆ. ವಿಜಯ್ ಅಭಿನಯದ ‘ದುನಿಯಾ’ ಹಾಗೂ ಶ್ರೀಕಾಂತ್ ನಿರ್ವಣದ ‘ಟಗರು’ ಚಿತ್ರಗಳು ಫೆಬ್ರವರಿ ಕೊನೆಯ ವಾರದಲ್ಲಿ ಬಿಡುಗಡೆಯಾಗಿ ಸೂಪರ್ ಹಿಟ್ ಆಗಿದ್ದವು. ಈಗ ‘ಸಲಗ’ ಸಹ ಫೆಬ್ರವರಿಯಲ್ಲಿ ಬಿಡುಗಡೆಯಾಗಲಿದೆ. ವಿಜಯ್, ಸಂಜನಾ ಆನಂದ್, ಧನಂಜಯ್ ಮುಂತಾದವರು ಇದರಲ್ಲಿ ನಟಿಸಿದ್ದಾರೆ.

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts