More

    ಕದ್ರಿ ದೇವಳದಲ್ಲಿ ಮೂರುಸಾವಿರ ಮಂದಿಯಿಂದ ಸತತ ಮೂರು ಗಂಟೆಗಳ ಕಾಲ ಯೋಗಾಸನ

    ಮಂಗಳೂರು: ಕದ್ರಿ ಶ್ರೀ ಮಂಜುನಾಥ ದೇವಳದ ಹೊರ ಅಂಗಣದಲ್ಲಿ ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಸಾಮೂಹಿಕ ಯೋಗಾಸನ ಸಹಿತ ಶಿವನಮಸ್ಕಾರ, ಶಿವಾಷ್ಟೋತರ ಶತನಾಮಾನಿ ಸ್ತೋತ್ರ ಪಠಣ ಹಾಗೂ ಅರ್ಚನೆ ಕಾರ್ಯಕ್ರಮ ಭಾನುವಾರ ಮುಂಜಾನೆ ಜರುಗಿತು.

    ಶ್ರೀ ಕ್ಷೇತ್ರ ಕದ್ರಿ ಅರ್ಚಕ ರಾಘವೇಂದ್ರ ಭಟ್, ಜಿಲ್ಲಾ ಸಂಚಾಲಕ ಅಶೋಕ್ ಕುಮಾರ್, ಪ್ರಾಂತ ಸಂಚಾಲಕ ರವೀಶ್ ಕುಮಾರ್ ಕಾವೂರು ನಗರ ಸಂಚಾಲಕ ಕನಕ ಅಮೀನ್ ಉದ್ಘಾಟಿಸಿದರು. ಮುಂಜಾನೆ 4.30ರಿಂದಲೇ ಯೋಗಪಟುಗಳು ಹಾಗೂ ಸಾರ್ವಜನಿಕರು ಶಿಸ್ತುಬದ್ಧವಾಗಿ ದೇವಾಲಯದ ಅಂಗಣದಲ್ಲಿ ಸಾಲಾಗಿ ಕುಳಿತಿದ್ದು, 5 ಗಂಟೆ ವೇಳೆಗೆ ದೇವಾಲಯದ ಅವರಣ ಪೂರ್ತಿಭರ್ತಿಯಾಗಿತ್ತು. ಬಳಿಕ ಸತತ 3 ಗಂಟೆ ಕಾಲ ಯೋಗಾಸನ ಜರುಗಿತು. 3 ಸಾವಿರ ಮಂದಿ ಯೋಗಾಸನದಲ್ಲಿ ಪಾಲ್ಗೊಂಡಿದ್ದರು.

    ಶಿವನಮಸ್ಕಾರದ ಮಹತ್ವವನ್ನು ಪ್ರಾಂತ ಸಂಚಾಲಕ ಹರೀಶ್ ಕೋಟ್ಯಾನ್ ಮೂಲ್ಕಿ ವಿವರಿಸಿದರು. ಜಗದೀಶ್ ಶೆಟ್ಟಿ ಅಷ್ಟೋತ್ತರ ಪಠಣೆ ಮಾಡಿಸಿದರು. ಪ್ರಾಂತ ಪ್ರಮುಖರಾದ ಶಿವಾನಂದ ರೈ ಶಿವಧ್ಯಾನ, ಜಿಲ್ಲಾ ಸಹಸಂಚಾಲಕ ಲಕ್ಷ್ಮೀನಾರಾಯಣ ಅಮೃತಾಸನ ಮಾಡಿಸಿದರು.

    ಯೋಗ ಶಿಕ್ಷಕ ಗೋಕುಲ್ನಾಥ್ ಶೆಣೈ, ಪ್ರತಾಪ್ ಕೆ.ಎಸ್, ಜಯರಾಮ ಜೆಂಬುಗುಡ್ಡೆ, ನಾರಾಯಣ ಹಳೆಯಂಗಡಿ, ಜಗನ್ನಾಥ,ಪುಷ್ಪಾವತಿ, ಲೀಲಾವತಿ, ಪ್ರಸಿತಾ, ಪ್ರಭಾವತಿ, ಗೀತಾ, ನಗರ ಸಂಚಾಲಕರಾದ ವಸಂತ್, ಪ್ರಶಾಂತ್, ಆನಂದ್, ಗೀತಾ ಜಯಪ್ರಕಾಶ್ ಉಪಸ್ಥಿತರಿದ್ದರು. ಜಯಂತಿ ಕಟೀಲು ನಿರೂಪಿಸಿದರು.
    ಮಂಗಳೂರಿನ ಕದ್ರಿ, ಕಂಕನಾಡಿ, ಉಳ್ಳಾಲ, ಕಾವೂರು, ಸುರತ್ಕಲ್, ಪೊಳಲಿ ಮತ್ತು ಸುತ್ತಮುತ್ತಲಿನ ಪ್ರದೇಶ, ಬಿ.ಸಿ.ರೋಡ್, ಕಲ್ಲಡ್ಕ, ಉಪ್ಪಿನಂಗಡಿ, ಪುತ್ತೂರು, ಕಾಸರಗೋಡಿನಿಂದ ಯೋಗಪಟುಗಳು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts