More

    ಮೀನಿನಂತೆ ಚುರುಕಾಗಲು ಈ ಯೋಗಾಸನ ಸಹಕಾರಿ!

    ಬುದ್ಧಿ ಮತ್ತು ದೇಹ ಚುರುಕಾಗುವುದಕ್ಕೆ ಉಪಯುಕ್ತ ಆಸನವೆಂದರೆ ಮತ್ಸ್ಯಾಸನ. ಸಂಸ್ಕೃತದಲ್ಲಿ ಮತ್ಸ್ಯ ಎಂದರೆ ಮೀನು. ಮೀನು ಯಾವ ರೀತಿಯಲ್ಲಿ ಚುರುಕಾಗಿರುತ್ತದೋ, ಅದೇ ರೀತಿಯಲ್ಲಿ ಈ ಆಸನ ಮಾಡಿದರೆ ವ್ಯಕ್ತಿಯೂ ಚುರುಕಾಗುತ್ತಾನೆ ಎನ್ನಲಾಗಿದೆ.

    ಪ್ರಯೋಜನಗಳು: ಮತ್ಸ್ಯಾಸನದ ಭಂಗಿಯಲ್ಲಿ ತಲೆಯ ನಡುನೆತ್ತಿಯನ್ನು ನೆಲದ ಮೇಲೆ ಊರಿದಾಗ ನರಮಂಡಲ ಸಚೇತನಗೊಳ್ಳುತ್ತದೆ. ವಿಶೇಷವಾಗಿ ಕುತ್ತಿಗೆಯ ಭಾಗದಲ್ಲಿ ಚೆನ್ನಾಗಿ ರಕ್ತ ಸಂಚಾರವಾಗಿ ನರಗಳು ಬಲಗೊಳ್ಳುತ್ತವೆ. ಈ ಆಸನದಲ್ಲಿ ಬೆನ್ನಿಗೆ, ಹೊಟ್ಟೆಗೆ ಮತ್ತು ಕುತ್ತಿಗೆಗೆ ಹೆಚ್ಚಿನ ವ್ಯಾಯಾಮ ದೊರಕಿ, ಬೆನ್ನು ನೋವು ಮತ್ತು ಕುತ್ತಿಗೆ ನೋವು ನಿಯಂತ್ರಣವಾಗುತ್ತವೆ. ಬೆನ್ನು ಮತ್ತು ಎದೆ ವಿಶಾಲವಾಗಲು ಸಹಕಾರಿ. ಮೂಲವ್ಯಾಧಿ ಮತ್ತು ಅಸ್ತಮಾ ಖಾಯಿಲೆಗಳಿಂದ ಗುಣಹೊಂದಲು ಉಪಯುಕ್ತ. ಥೈರಾಯ್ಡ್​ ಗ್ರಂಥಿಯ ಆರೋಗ್ಯವರ್ಧನೆಯಾಗುತ್ತದೆ.

    ಇದನ್ನೂ ಓದಿ: ಲಸಿಕೆಯಿಂದ ಚಿಂಪಾಜೀಗಳಾಗ್ತಾರೆಂದು ಅಪಪ್ರಚಾರ! 300 ಖಾತೆಗಳನ್ನು ತೆಗೆದುಹಾಕಿದ ಫೇಸ್​ಬುಕ್​

    ಅಭ್ಯಾಸ ಕ್ರಮ: ಪದ್ಮಾಸನದಲ್ಲಿ ಕೂರಬೇಕು. ಕೈಗಳ ಸಹಾಯದಿಂದ ನಿಧಾನಕ್ಕೆ ಉಸಿರನ್ನು ಬಿಡುತ್ತಾ ಹಿಂದಕ್ಕೆ ಒರಗಿ, ಬೆನ್ನಿನ ಮೇಲೆ ಮಲಗಬೇಕು. ಕೈಗಳನ್ನು ಹಿಂದಕ್ಕೆ ತೆಗೆದುಕೊಂಡು ತಲೆಯ ಪಕ್ಕದಲ್ಲಿಟ್ಟು, ತಲೆಯ ನಡುನೆತ್ತಿಯನ್ನು ನಿಧಾನಕ್ಕೆ ಊರಬೇಕು. ಎದೆ ಮತ್ತು ಕುತ್ತಿಗೆಗಳನ್ನು ನೆಲದಿಂದ ಮೇಲಕ್ಕೆ ಮಾಡಿ, ಬೆನ್ನನ್ನು ಬಾಗಿಸಿ, ನೆತ್ತಿಯನ್ನೇ ಊರಿಡಲು ಪ್ರಯತ್ನಿಸಬೇಕು. ಈ ಸ್ಥಿತಿಯಲ್ಲಿ ಸ್ವಲ್ಪ ಹೊತ್ತು ಸಹಜ ಉಸಿರಾಟ. ನಂತರ ಕೈಗಳ ಸಹಾಯದಿಂದ ಕುತ್ತಿಗೆಯನ್ನು ಸರಿಪಡಿಸಿಕೊಂಡು, ನಿಧಾನವಾಗಿ ಉಸಿರನ್ನು ತೆಗೆದುಕೊಳ್ಳುತ್ತಾ ಮೇಲಕ್ಕೆ ಬಂದು ವಿಶ್ರಮಿಸುವುದು.

    ತೀವ್ರ ಹೃದಯದ ಸಮಸ್ಯೆ, ಅಲ್ಸರ್ ಅಥವಾ ಹರ್ನಿಯ ಇರುವವರು ಹಾಗೂ ಕುತ್ತಿಗೆ ಅಥವಾ ಸೊಂಟ ನೋವು ಇರುವವರು ಈ ಆಸನ ಮಾಡಬಾರದು.

    ಹೃದಯದ ಆರೋಗ್ಯಕ್ಕೆ, ರಕ್ತದ ಪ್ರಕೃತಿ ಸುಧಾರಿಸಲು ಮಾರ್ಜಾಲಾಸನ ಮಾಡಿ

    ಯೂಟ್ಯೂಬ್​ ನೋಡಿ ಹೆಲಿಕಾಪ್ಟರ್​ ನಿರ್ಮಿಸಿದ ಯುವಕ! ಪರೀಕ್ಷೆ ನಡೆಸುವಾಗ ವಿಧಿ ಕೈಕೊಟ್ಟಿತು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts