More

    ಮನೆಯಲ್ಲೇ ಯೋಗ ಸುಯೋಗ ; ಯೋಗಾಸನದ ಮಹತ್ವ ಸಾರಿದ ಗಣ್ಯರು

    ತುಮಕೂರು: ಜಿಲ್ಲೆಯೆಲ್ಲೆಡೆ ಮನೆಗಳಲ್ಲಿಯೇ ಯೋಗ ಮಾಡುವ ಮೂಲಕ ಜನರು ‘ವಿಶ್ವ ಯೋಗ ದಿನ’ ಆಚರಿಸಿದರು. ಸಂಸದ ಜಿ.ಎಸ್.ಬಸವರಾಜು, ಜಿಲ್ಲಾಧಿಕಾರಿ ಜಿ.ಎಸ್.ಬಸವರಾಜು, ತುಮಕೂರು ವಿವಿ ಕುಲಪತಿ ವೈ.ಎಸ್.ಸಿದ್ದೇಗೌಡ ಮತ್ತಿತರರು ಮನೆಯಲ್ಲಿಯೇ ಯೋಗ ಮಾಡಿ ಮಹತ್ವ ಸಾರಿದರು.

    ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಕುಟುಂಬ ಸದಸ್ಯರ ಜತೆ ಮನೆಯಲ್ಲಿಯೇ ಯೋಗ ಮಾಡಿದರು.
    ಕರೊನಾ ಸಂಕಷ್ಟದಲ್ಲಿ ಸಾಮೂಹಿಕವಾಗಿ ಯೋಗ ಮಾಡಿ ದಿನಾಚರಣೆ ಮಾಡಲು ಸಾಧ್ಯವಾಗಿಲ್ಲ. ಆದರೆ, ತಮ್ಮ ಕುಟುಂಬದ ಜತೆಗೆ ಯೋಗ ಮಾಡುವ ಮೂಲಕ ಯೋಗದ ಮಹತ್ವ ಸಾರಬೇಕಿದೆ ಎಂದು ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್‌ಕುಮಾರ್ ಹೇಳಿದರು.
    ಕರೊನಾ ವೈರಸ್ ಎದುರಿಸಲು ಯೋಗದಿಂದ ಸಾಧ್ಯವಿದ್ದು, ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಎಲ್ಲರೂ ಯೋಗ ಮಾಡಬೇಕು, ಮಕ್ಕಳಿಗೂ ಮನೆಯಲ್ಲಿಯೇ ಯೋಗದ ಬಗ್ಗೆ ಅರಿವು ಮೂಡಿಸಬೇಕು ಎಂದರು.

    ಸಂಸದ ಜಿ.ಎಸ್.ಬಸವರಾಜು ಮಾತನಾಡಿ, ಯೋಗ ವಿಶ್ವಕ್ಕೆ ಭಾರತ ನೀಡಿದ ಕೊಡುಗೆಯಾಗಿದ್ದು, ಎಲ್ಲರೂ ಯೋಗವನ್ನು ಕಡ್ಡಾಯವಾಗಿ ಮಾಡುವ ಮೂಲಕ ದೇಹ, ಮನಸ್ಸು ಆರೋಗ್ಯವಾಗಿಡಬೇಕು ಎಂದರು.80 ವರ್ಷದಲ್ಲಿರುವ ನಾನು ಪ್ರತಿದಿನ ಬೆಳಗ್ಗೆ 4 ರಿಂದ 6ರವರೆಗೆ ಯೋಗ ಮಾಡುವ ಮೂಲಕ ಆರೋಗ್ಯ ಕಾಪಾಡಿಕೊಂಡಿದ್ದೇನೆ, ಎಲ್ಲರೂ ಕಡ್ಡಾಯವಾಗಿ ಪ್ರತಿದಿನ ಯೋಗ ಮಾಡಬೇಕು ಎಂದರು.

    ಶ್ರೀಪತಂಜಲಿ ಯೋಗ ಶಿಕ್ಷಣ ಸಮಿತಿ, ತುಮಕೂರು ಯೋಗ ಸಮಿತಿ, ನಿಸರ್ಗ ಯೋಗ ಸಮಿತಿ, ಯೋಗ ಸಾಧನ ಮಂದಿರ, ಸಿದ್ಧಿ ಸಮಾಧಿ ಯೋಗ, ಆರ್ಟ್ ಆರ್ಫ ಲೀವಿಂಗ್ ಹಾಗೂ ಯೋಗ ಸಮನ್ವಯ ಸಮಿತಿ, ಭಾವಾಲಯ ವತಿಯಿಂದ ಯೋಗ ದಿನ ಆಚರಿಸಲಾಯಿತು. ಪತಂಜಲಿ ಯೋಗ ಶಿಕ್ಷಣ ಸಮಿತಿ ಕೋಶಾಧ್ಯಕ್ಷ ಎನ್.ಎಸ್.ಮಹೇಶ್ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮ ಸಾಮಾಜಿಕ ಜಾಲತಾಣಗಳ ಮೂಲಕ ಪ್ರಸಾರ ಮಾಡಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts