More

    ಯೋಗಕ್ಷೇಮ: ಅಧಿಕ ರಕ್ತದೊತ್ತಡ ತಡೆಗೆ ಯೋಗ-ಮುದ್ರೆ

    ಯೋಗಕ್ಷೇಮ: ಅಧಿಕ ರಕ್ತದೊತ್ತಡ ತಡೆಗೆ ಯೋಗ-ಮುದ್ರೆ

    • ನನಗೆ ಹೆಚ್ಚಿನ ರಕ್ತದೊತ್ತಡ ಇದೆ. ಯಾವ ಯೋಗಾಸನ ಹಾಗೂ ಮುದ್ರೆಗಳನ್ನು ಅಭ್ಯಾಸ ಮಾಡಬೇಕೆಂದು ತಿಳಿಸಿ.

    | ಸಾಗರ್ 35 ವರ್ಷ, ಮಲ್ಲಾಪುರ

    ರಕ್ತದೊತ್ತಡವನ್ನು ಸಾಮಾನ್ಯವಾಗಿ ಮೂಕ ಕೊಲೆಗಾರ ಎಂದು ವಿವರಿಸಲಾಗಿದೆ. ರಕ್ತನಾಳಗಳು ಅಪಧಮನಿಗಳ ಗೋಡೆಗಳ ಮೇಲೆ ರಕ್ತಸಂಚಲನಾ ವ್ಯವಸ್ಥೆಯ ಮೂಲಕ ಚಲಿಸುವಾಗ (ಒತ್ತಡದಿಂದ) ಏರಿಳಿತಗೊಳ್ಳುತ್ತವೆ. ಸಾಮಾನ್ಯ ಆರೋಗ್ಯವಂತ ವಯಸ್ಕರಿಗೆ 120/80 ಇರುತ್ತದೆ. ಅಧಿಕ ರಕ್ತದೊತ್ತಡವನ್ನು ನಿರ್ಲಕ್ಷಿಸಬಾರದು. ಜಡ ಜೀವನಶೈಲಿ, ಕಳಪೆ ಆಹಾರ, ಬೊಜ್ಜು, ಧೂಮಪಾನ, ಒತ್ತಡ, ಆನುವಂಶಿಕತೆ ಇವೆಲ್ಲ ಅಧಿಕ ರಕ್ತದೊತ್ತಡಕ್ಕೆ ಕಾರಣಗಳಾಗುತ್ತವೆ.

    ಕಾಯಿಲೆಯ ಲಕ್ಷಣಗಳು ಹಾಗೂ ಪರಿಣಾಮಗಳು: ಆಯಾಸ, ನರಗಳ ಉದ್ವೇಗ, ಕಿವಿಯಲ್ಲಿ ರಿಂಗಿಂಗ್, ತಲೆತಿರುಗುವಿಕೆ, ಕೋಪದ ಸ್ಪೋಟಗಳು ಇತ್ಯಾದಿಗಳು. ಹೆಚ್ಚಿನ ರಕ್ತದೊತ್ತಡದಿಂದ ಹೃದಯವೈಫಲ್ಯ, ಪಾರ್ಶ್ವವಾಯು ಮತ್ತು ಮೂತ್ರಪಿಂಡದ ಕಾಯಿಲೆಗಳು ಬರುತ್ತವೆ.

    ಪರಿಹಾರಗಳು: ಆರೋಗ್ಯಕರ ಆಹಾರಸೇವನೆ, ನಿಯಮಿತ ವ್ಯಾಯಾಮ, ನಡಿಗೆ ಹಾಗೂ ಆಯ್ದ ಯೋಗಾಸನಗಳು ರಕ್ತದೊತ್ತಡವನ್ನು ನಿಯಂತ್ರಿಸಲು ಸಹಾಯ ಮಾಡುತ್ತವೆ. ಯೋಗವನ್ನು ಮನಃಪೂರ್ವಕವಾಗಿ ನಿರ್ವಹಿಸಿದಾಗ ಒತ್ತಡ-ಪ್ರೇರಿತ ಅಧಿಕ ರಕ್ತದೊತ್ತಡವು ಕಡಿಮೆಯಾಗುತ್ತದೆ. ನರಮಂಡಲವನ್ನು ಸಮಾಧಾನಗೊಳಿಸುತ್ತದೆ, ಹೃದಯಬಡಿತವು ಸಮರ್ಪಕವಾಗುತ್ತದೆ. ಸ್ನಾಯುಗಳು ಮತ್ತು ಮನಸ್ಸಿಗೆ ಆಳವಾಗಿ ವಿಶ್ರಾಂತಿ ಮಾಡಲು ಕಲಿಸುತ್ತಾರೆ. ಪ್ರಜ್ಞಾಪೂರ್ವಕ ಉಸಿರಾಟವು (ಪ್ರಾಣಾಯಾಮ) ರಕ್ತದೊತ್ತಡವನ್ನು ತ್ವರಿತವಾಗಿ ಕಡಿಮೆ ಮಾಡುತ್ತದೆ ಎಂದು ಸಂಶೋಧನಾ ಅಧ್ಯಯನಗಳು ತೋರಿಸುತ್ತದೆ. ಕೆಲವು ಆಸನಗಳು ಹೆಚ್ಚಿನ ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಕರಿಸುತ್ತವೆ. ಧ್ಯಾನದಿಂದ ಬಲು ಬೇಗ ಮನಸ್ಸಿಗೆ ಆಳ ವಿಶ್ರಾಂತಿ ದೊರಕುತ್ತದೆ. ಆರಂಭದಲ್ಲಿ ವೈದ್ಯಕೀಯ ತಪಾಸಣೆ ಹಾಗೂ ಯೋಗ ಚಿಕಿತ್ಸಕರೊಂದಿಗೆ ಸಮಾಲೋಚಿಸಿ.

    ಸೂಚಿತ ಆಸನಗಳು, ಮುದ್ರೆಗಳು: ದಿನಕ್ಕೆ ಮೂರು ಸಲ ಉತ್ಥಿತ ಏಕಪಾದಾಸನ, ವಜ್ರಾಸನ, ಪಾದಾಸನ, ಸೇತುಬಂಧ, ಪರ್ವತಾಸನ, ಬದ್ಧಕೋಣಾಸನ, ಮಕರಾಸನ, ಅರ್ಧಚಕ್ರಾಸನ, ತ್ರಿಕೋಣಾಸನ, ಜಾನುಶೀರ್ಷಾಸನ, ಅಧೋಮುಖ ಶ್ವಾನಾಸನ, ಮಾರ್ಜಾಲಾಸನ, ಭಾರದ್ವಾಜಾಸನ, ಶವಾಸನ ಮಾಡಿ. ಬಿಡುವಿನ ವೇಳೆಯಲ್ಲಿ ಮುದ್ರೆಗಳನ್ನು ಅಭ್ಯಾಸ ಮಾಡಿದಲ್ಲಿ ಮನಸ್ಸಿಗೆ ಮುದ ನೀಡುತ್ತದೆ. ಹೃದಯಮುದ್ರೆ 20 ನಿಮಿಷ, ಆಕಾಶಮುದ್ರೆ 20 ನಿಮಿಷ ಹಾಗೂ ಪ್ರಾಣಮುದ್ರೆ ಹತ್ತು ನಿಮಿಷ ಅಭ್ಯಾಸ ಮಾಡಿ.

    • ಈ ಕರೊನಾ ಸಂದರ್ಭದಲ್ಲಿ ನಾನು ಮನೆಯಲ್ಲಿಯೇ ಯೋಗವನ್ನು ಅಭ್ಯಾಸ ಮಾಡಲು ಇಚ್ಛಿಸಿದ್ದೇನೆ. ಯಾವ ಸಿದ್ಧತೆ ಮಾಡಿಕೊಳ್ಳಬೇಕು?

    | ವಿಕ್ರಮ್ 20 ವರ್ಷ, ಬೆಂಗಳೂರು

    ಮನೆಯಲ್ಲಿಯೇ ಯೋಗಾಭ್ಯಾಸ ಮಾಡಲು ಇಚ್ಛಿಸಿರುವುದಕ್ಕೆ ನಿಮಗೆ ಅಭಿನಂದನೆಗಳು. ನೀವು ಮುಂಜಾನೆ ಖಾಲಿ ಹೊಟ್ಟೆಯಲ್ಲಿ ಸ್ವಚ್ಛವಾದ ಗಾಳಿ, ಬೆಳಕು ಇರುವ ಸ್ಥಳದಲ್ಲಿ ಅಭ್ಯಾಸ ಮಾಡಿ. ಸಮತಟ್ಟಾದ ನೆಲದಲ್ಲಿ ಜಮಖಾನ ಹಾಸಿ ಅಭ್ಯಾಸ ಮಾಡಿ. ಶಿಸ್ತು, ಸತತ ಪ್ರಯತ್ನ, ಧೃಡನಂಬಿಕೆಯಿಂದ ಗುರುಗಳು ಕಲಿಸಿದ ರೀತಿಯಲ್ಲಿ ಅಭ್ಯಾಸ ಮಾಡಿ. ಯೋಗಾಭ್ಯಾಸದ ಬಗ್ಗೆ ಸಂಶಯ ಬಂದಲ್ಲಿ ಗುರುಗಳ ಬಳಿ ವಿಚಾರಿಸಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts