More

    ಯೆಸ್​ ಬ್ಯಾಂಕ್​ನ ಜತೆ ಮುಳುಗುವುದೇ ಹಿಂದು ಧಾರ್ಮಿಕ ಕೇತ್ರ ಪುರಿ ಜಗನ್ನಾಥ ದೇವಾಲಯದ 592 ಕೋಟಿ ರೂಪಾಯಿ?

    ಪುರಿ: ಮುಳುಗಿ ಹೋಗುತ್ತಿರುವ ಯೆಸ್​ ಬ್ಯಾಂಕ್​ನಲ್ಲಿ ಹಿಂದು ಧಾರ್ಮಿಕ ಕ್ಷೇತ್ರ ಪುರಿ ಜಗನ್ನಾಥ ದೇಗುಲದ 592 ಕೋಟಿ ರೂಪಾಯಿ ಠೇವಣಿಯಿದ್ದು ಆತಂಕಕ್ಕೀಡು ಮಾಡಿದೆ. ಅದರಲ್ಲೂ ಹಣ ಹಿಂಪಡೆಯುವ ಮೊತ್ತವನ್ನು 50 ಸಾವಿರಕ್ಕೆ ನಿಗದಿಗೊಳಿಸಿರುವುದರಿಂದ ದೇಗುಲದ ಮಂಡಳಿ ಚಿಂತೆಗೀಡಾಗಿದೆ.

    ಯೆಸ್​ ಬ್ಯಾಂಕ್​ನ ಸಂಕಷ್ಟ ತಿಳಿದು ಬರುತ್ತಿದ್ದಂತೆ ದೇವಸ್ಥಾನದ ಆಡಳಿತ ಮಂಡಳಿ ಸಭೆ ನಡೆಸಿದ್ದು, ಯೆಸ್​ ಬ್ಯಾಂಕ್​ನಲ್ಲಿರುವ ಹಣವನ್ನು ಯಾವುದಾದರೂ ರಾಷ್ಟ್ರೀಕೃತ ಬ್ಯಾಂಕ್​ಗೆ ವರ್ಗಾಯಿಸುವ ಬಗ್ಗೆ ನಿರ್ಣಯ ಕೈಗೊಂಡಿದೆ.

    ಅಲ್ಲದೆ ಯೆಸ್​ ಬ್ಯಾಂಕ್​ಗೆ ಪತ್ರ ಬರೆದಿರುವ ದೇಗುಲದ ಆಡಳಿತ ಮಂಡಳಿ, ನಿಮ್ಮಲ್ಲಿರುವ 592 ಕೋಟಿ ರೂಪಾಯಿಗಳನ್ನು ಮೂರು ಹಂತಗಳಲ್ಲಿ ವಾಪಸ್​ ನೀಡಿ ಎಂದು ತಿಳಿಸಿದೆ. ಮಾರ್ಚ್​ 19, 23 ಹಾಗೂ 29ರಂದು ಮೂರು ಹಂತಗಳಲ್ಲಿ ವಾಪಸ್​ ಮಾಡಲು ಪತ್ರದಲ್ಲಿ ಕೋರಿದೆ.

    ಬ್ಯಾಂಕ್​ ಬಗೆಗಿನ ಆತಂಕದಿಂದಾಗಿ ಶುಕ್ರವಾರ ದೇಗುಲದ ಆಡಳಿತ ಮಂಡಳಿ ಪತ್ರ ಬರೆದಿತ್ತು. ದೇವಾಲಯದ ಆಡಳಿತ ಮಂಡಳಿಯ ವ್ಯವಸ್ಥಾಪಕ ಸದಸ್ಯ ರಾಮಚಂದ್ರ ದಾಸ್​ ಮಹಾಪಾತ್ರ ಅವರು ಯೆಸ್​ ಬ್ಯಾಂಕ್​ನಲ್ಲಿರುವ ಹಣವು ವಾಪಸ್​ ನಮ್ಮ ಕೈ ಸೇರುತ್ತದೋ ಇಲ್ಲವೊ ಎಂಬ ಆತಂಕವಿದೆ ಎಂದಿದ್ದಾರೆ.

    ಪುರಿ ಜಗನ್ನಾಥ ದೇವಾಲಯದ ಮಾಜಿ ಆಡಳಿತಾಧಿಕಾರಿ ಹೆಚ್ಚಿನ ಬಡ್ಡಿ ಆಸೆಗಾಗಿ ಯೆಸ್ ಬ್ಯಾಂಕಿನಲ್ಲಿ ಠೇವಣಿ ಇಟ್ಟಿದ್ದಕ್ಕಾಗಿ ಮಾಜಿ ಶಾಸಕ ಮಹೇಶ್ವರ ಮೊಹಂತಿ ಕಿಡಿ ಕಾರಿದ್ದಾರೆ. ಮಾಧ್ಯಮಗಳಿಗೆ ಜತೆ ಮಾತನಾಡಿದ ಮೊಹಂತಿ ಅವರು, ದೇಗುಲದ ಸಮಿತಿ ತಕ್ಷಣ ರಿಸರ್ವ್​ ಬ್ಯಾಂಕ್​ ಆಫ್ ಇಂಡಿಯಾ ಜತೆ ಸಭೆ ನಡೆಸಿ ಹಣಕಾಸಿನ ಬಗ್ಗೆ ನಿರ್ಧರಿಸಬೇಕು ಎಂದು ಆಗ್ರಹಿಸಿದ್ದಾರೆ. ಬಿಜೆಪಿ ಮುಖಂಡ ಭ್ರುಗು ಬಕ್ಸಿಪತ್ರ ದೇವಾಲಯದ ಹಣವನ್ನು ರಕ್ಷಿಸಲು ಕೇಂದ್ರ ಸರ್ಕಾರ ಮುಂದಾಗಬೇಕು ಎಂದು ವಿನಂತಿಸಿಕೊಂಡಿದ್ದಾರೆ. (ಏಜೆನ್ಸೀಸ್​) 

    ವಿಶ್ವ ವಿಖ್ಯಾತ ಪ್ರವಾಸಿ ತಾಣಗಳಿಗೆ ನಾಳೆ ಮಹಿಳೆಯರಿಗೆ ಉಚಿತ ಪ್ರವೇಶ; ಏಕೇಕ ಗೊತ್ತ..?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts