More

    ಉತ್ತರ ಕನ್ನಡ ಜಿಲ್ಲೆಯಲ್ಲಿ ಯೆಲ್ಲೋ ಅಲರ್ಟ್ ಸೆ. 8ರವರೆಗೆ

    ಕಾರವಾರ: ಜಿಲ್ಲೆಯಲ್ಲಿ ಸೆ. 10ರವರೆಗೆ ಮಳೆಯಾಗಲಿದೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಕೇಂದ್ರ ಮುನ್ಸೂಚನೆ ನೀಡಿದೆ. ಸೆ. 6 ರಿಂದ 8 ರವರೆಗೆ ಯೆಲ್ಲೋ ಅಲರ್ಟ್ ಹಾಗೂ ಸೆ. 9ರಂದು ಆರೇಂಜ್ ಅಲರ್ಟ್ ಘೋಷಿಸಲಾಗಿದೆ.

    ಸೋಮವಾರ ಇಡೀ ದಿನ ಜಿಲ್ಲೆಯಲ್ಲಿ ಮೋಡ, ಬಿಸಿಲಿನ ವಾತಾವರಣವಿದ್ದು, ಅಲ್ಲಲ್ಲಿ ಚದುರಿದಂತೆ ಸಣ್ಣ ಪ್ರಮಾಣದಲ್ಲಿ ಮಳೆಯಾಗಿದೆ. ಸೋಮವಾರ ಬೆಳಗಿನ ವರದಿಯಂತೆ ಹಿಂದಿನ 24 ಗಂಟೆಗಳಲ್ಲಿ ಹಳಿಯಾಳ, ಹೊನ್ನಾವರದಲ್ಲಿ ತಲಾ 0.1, ಕಾರವಾರ-0.5, ಕುಮಟಾ-0.3, ಮುಂಡಗೋಡ-2.7, ಸಿದ್ದಾಪುರ-1.2, ಶಿರಸಿ-1.7, ಜೊಯಿಡಾ-3.5, ಯಲ್ಲಾಪುರ-11 ಮಿಮೀ ಮಳೆಯಾಗಿದೆ.

    ಯಲ್ಲಾಪುರದಲ್ಲಿ ಭಾರಿ ಮಳೆ:

    ಯಲ್ಲಾಪುರ: ಪಟ್ಟಣದಲ್ಲಿ ಸೋಮವಾರ ಮಧ್ಯಾಹ್ನ ಒಂದು ತಾಸು ಭಾರಿ ಮಳೆ ಸುರಿಯಿತು.

    ಮಳೆಯ ಅಬ್ಬರದಿಂದಾಗಿ ಪಟ್ಟಣದ ವಿವಿಧೆಡೆ ಚರಂಡಿ ನೀರು ರಸ್ತೆಯಲ್ಲಿ ಹರಿದು ವಾಹನ ಸವಾರರು ಪರದಾಡುವಂತಾಯಿತು. ತಟಗಾರ ಕ್ರಾಸ್, ವಿಶ್ವದರ್ಶನದ ಎದುರು, ಶಿವಾಜಿ ಸರ್ಕಲ್ ಬಳಿ, ಬೆಲ್ ರಸ್ತೆ ಸೇರಿ ಹಲವೆಡೆ ರಸ್ತೆ ಮೇಲೆ ಆಳೆತ್ತರದ ನೀರು ಹರಿದು ಸಮಸ್ಯೆ ಉಂಟಾಯಿತು. ಚರಂಡಿಯ ಕಸ, ತ್ಯಾಜ್ಯಗಳೆಲ್ಲ ರಸ್ತೆ ಮೇಲೆ ಬಂದು ರಾಶಿಯಾಗಿವೆ.

    ಪಟ್ಟಣ ಪಂಚಾಯಿತಿಯಿಂದ ಸಮರ್ಪಕವಾಗಿ ಚರಂಡಿ ಸ್ವಚ್ಛತೆ ಕಾರ್ಯ ಕೈಗೊಳ್ಳದ ಕಾರಣ ಪ್ರತಿ ಬಾರಿ ಜೋರಾಗಿ ಮಳೆ ಸುರಿದಾಗ ಈ ಅವ್ಯವಸ್ಥೆ ಉಂಟಾಗುತ್ತಿದೆ. ಆದರೂ ಸ್ಥಳೀಯ ಆಡಳಿತ ನಿರ್ಲಿಪ್ತವಾಗಿರುವ ಬಗೆಗೆ ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts