More

    ಯಡಿಯೂರಪ್ಪ ಮೌನ ವಹಿಸಿದ್ದೇಕೆ? – ಸಿದ್ದರಾಮಯ್ಯ

    ಬೆಳಗಾವಿ: ರಮೇಶ ಜಾರಕಿಹೊಳಿ ಅಶ್ಲೀಲ ಸಿಡಿ ವಿಚಾರಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಬೇಕು. ಅವರು ಮೌನವಾಗಿರುವುದನ್ನು ನೋಡಿದರೆ ಅವರಲ್ಲೇ ಏನಾದರೂ ಹುಳುಕಿರಬೇಕು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

    ಇಲ್ಲಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುವತಿ ನನ್ನ ಬಳಿ ರಕ್ಷಣೆ ಕೊಡಿ ಅಂತ ಕೇಳಿಲ್ಲ. ನನಗೆ ರಕ್ಷಣೆ ಕೊಡಿಸಿ ಅಂತ ಕೇಳಿದ್ದಾಳೆ. ಈ ಬಗ್ಗೆ ಸರ್ಕಾರಕ್ಕೆ ರಕ್ಷಣೆ ಕೊಡಲು ಹೇಳಿದ್ದೇನೆ ಎಂದರು. ರಮೇಶ ಜಾರಕಿಹೊಳಿ ಸಿಡಿ ಮತ್ತು ರಕ್ಷಣೆ ವಿಚಾರವಾಗಿ ದೇಶವ್ಯಾಪಿ ಚರ್ಚೆ ನಡೆಯುತ್ತಿವೆ. ಹೀಗಾಗಿ ನಮ್ಮ ರಾಜ್ಯದ ಸಿಎಂ ಯಡಿಯೂರಪ್ಪ ಮಾತಾಡಬೇಕು. ಅವರು ಸಿಡಿ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿರುವುದು ಸಮಂಜಸವಲ್ಲ. ಸಿಎಂ ಆಗಿ ಅವರು ಪ್ರತಿಕ್ರಿಯಿಸಲೇಬೇಕು ಎಂದರು.
    ಕೇಂದ್ರದಿಂದ ರಾಜ್ಯಕ್ಕೆ ನಿರಂತರವಾಗಿ ಅನ್ಯಾಯವಾಗುತ್ತಿದೆ. ಅನುದಾನ ಸಮರ್ಪಕವಾಗಿ ಬರುತ್ತಿಲ್ಲ. ಈ ಬಗ್ಗೆ ರಾಜ್ಯದ ಬಿಜೆಪಿ ಸಂಸದರು ಧ್ವನಿ ಎತ್ತುತ್ತಿಲ್ಲ. ರಾಜ್ಯದ ಆರ್ಥಿಕ ಪರಿಸ್ಥಿತಿ ದಿವಾಳಿಯಾಗಿದೆ ಎಂದು ಸಿದ್ದರಾಮಯ್ಯ ಟೀಕಿಸಿದರು.

    ಸದ್ಯ ಏನೂ ಮಾತಾಡುವುದಿಲ್ಲ, ಡಿಕೆಶಿ: ರಮೇಶ ಜಾರಕಿಹೊಳಿ ವಿರುದ್ಧದ ಸಿ.ಡಿ. ವಿಚಾರವಾಗಿ ಸದ್ಯಕ್ಕೆ ನಾನೇನೂ ಮಾತನಾಡುವುದಿಲ್ಲ. ನಮಗೆ ಉಪಚುನಾವಣೆಗಳಲ್ಲಿ ಗೆಲ್ಲುವುದಷ್ಟೇ ಈಗ ಮುಖ್ಯ. ಇದು ಮುಗಿದ ಬಳಿಕ ನೋಡೋಣ, ಕಾನೂನಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದರು.

    ನಗರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಡಿ ಪ್ರಕರಣದಲ್ಲಿ ತಮ್ಮ ಹೆಸರು ಕೇಳಿಬರುತ್ತಿರುವುದಕ್ಕೆ ಮಾತನಾಡಲು ನಿರಾಕರಿಸಿದರು. ಬೆಳಗಾವಿ ಲೋಕಸಭಾ ಸೇರಿ ಮೂರು ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಿಸುವ ಕುರಿತಂತೆ ಚರ್ಚೆ ಮಾಡಿದ್ದೇವೆ ಎಂದಷ್ಟೇ ತಿಳಿಸಿ ಮುಂದೆ ಸಾಗಿದರು.

    ನನ್ನೇನೂ ಕೇಳಬೇಡಿ, ಪ್ಲೀಸ್: ರಮೇಶ ಜಾರಕಿಹೊಳಿ ಸಿ.ಡಿ. ವಿಚಾರವಾಗಿ ದಯವಿಟ್ಟು ನನ್ನ ಬಳಿ ಏನೂ ಕೇಳಲೇಬೇಡಿ, ನಿಮಗೆ ಕೈ ಮುಗಿಯುತ್ತೇನೆ ಎಂದು ರಮೇಶ ಸಹೋದರ ಹಾಗೂ ಕೆಪಿಸಿಸಿ ಕಾರ್ಯಾಧ್ಯಕ್ಷ, ಬೆಳಗಾವಿ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿಯೂ ಆದ ಸತೀಶ ಜಾರಕಿಹೊಳಿ ಮಾಧ್ಯಮದವರ ಬಳಿ ವಿನಂತಿಸಿದರು. ಸಿಡಿ ಪ್ರಕರಣವನ್ನು ಎಸ್‌ಐಟಿ ತನಿಖೆ ನಡೆಸುತ್ತಿದ್ದು, ಎಲ್ಲವುದಕ್ಕೂ ಕಾನೂನು ಇದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts