More

    ದಲ್ಲಾಳಿಗಳಿಂದ ಆಗುತ್ತಿರುವ ಅನ್ಯಾಯ ತಡೆಗಟ್ಟಲು ರೈತರು ಸಂಘಟಿತರಾಗಿ: ಬಿ.ಜಿ.ಪುರ ರಾಗಿ ಉತ್ಪಾದಕ ಕಂಪನಿ ಅಧ್ಯಕ್ಷ ಬಿ.ಎಸ್.ಮಹದೇವಯ್ಯ ಸಲಹೆ

    ಮಳವಳ್ಳಿ: ಅನ್ನದಾತರಿಗೆ ದಲ್ಲಾಳಿಗಳಿಂದ ಆಗುತ್ತಿರುವ ಅನ್ಯಾಯವನ್ನು ತಡೆಗಟ್ಟಲು ರೈತರು ಸಂಘಟಿತರಾಗಿ ರೈತ ಉತ್ಪಾದಕರ ಕಂಪನಿ ಕಾರ್ಯನಿರ್ವಹಿಸುತ್ತಿದ್ದು, ಇದರ ಸದುದ್ದೇಶವನ್ನು ಅರಿತು ಬೆಂಬಲಿಸಬೇಕೆಂದು ಬಿ.ಜಿ.ಪುರ ರಾಗಿ ರೈತ ಉತ್ಪಾದಕ ಕಂಪನಿ ಅಧ್ಯಕ್ಷ ಬಿ.ಎಸ್.ಮಹದೇವಯ್ಯ ತಿಳಿಸಿದರು.
    ತಾಲೂಕಿನ ಬಾಚನಗಳ್ಳಿ ಬಳಿ ಇರುವ ಕಂಪನಿಯ ವಾಣಿಜ್ಯ ಕೇಂದ್ರದ ಆವರಣದಲ್ಲಿ ಹಮ್ಮಿಕೊಂಡಿದ್ದ ಸರ್ವ ಸದಸ್ಯರ ವಾರ್ಷಿಕ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಂಡವಾಳಶಾಹಿಗಳೇ ಉದ್ಯಮಗಳನ್ನು ನಡೆಸುತ್ತಾರೆಂಬ ಆಪಾದನೇ ಬರಬಾರದು ಎಂಬು ಉದ್ದೇಶದಿಂದ ಕೇಂದ್ರ ಸರ್ಕಾರ ರೈತರೇ ಸಂಘಟಿತರಾಗಿ ಕಂಪನಿಗಳನ್ನು ಕಟ್ಟಿಕೊಂಡು ಉದ್ಯಮ ನಡೆಸಲು ಅನುವು ಮಾಡಿಕೊಟ್ಟಿದೆ. ನಬಾರ್ಡ್ ಯೋಜನೆಯಿಂದ ಸಬ್ಸಿಡಿ ಸಾಲವನ್ನು ನೀಡಿ ರೈತರು ತಾವು ಬೆಳೆಯುವ ಬೆಳೆಗಳನ್ನು ಸಂಸ್ಕರಣಾ ಘಟಕಗಳ ಸ್ಥಾಪನೆ ಮಾಡಿಕೊಂಡು ನೇರವಾಗಿ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಬೆಂಬಲಿಸುತ್ತಿದೆ. ಇಂತಹ ಹಲವಾರು ಯೋಜನೆಗಳಿಗೆ ಸರ್ಕಾರ ಅನುದಾನ ನೀಡುತ್ತಿದ್ದು, ರೈತರು ಯಾವುದೇ ಅಪಪ್ರಚಾರಗಳಿಗೆ ಕಿವಿಗೊಡದೆ ಕಂಪನಿಯಲ್ಲಿ ಷೇರುದಾರರಾಗಿ ನೊಂದಣಿ ಮಾಡಿಕೊಳ್ಳುವಂತೆ ಮನವಿ ಮಾಡಿದರು.
    ಪೂರಿಗಾಲಿಯಲ್ಲಿ 10 ಲಕ್ಷ ರೂ. ವೆಚ್ಚದಲ್ಲಿ ರೂರಲ್ ಮಾರ್ಟ್ ತೆರೆಯಲು ಕ್ರಮವಹಿಸಲಾಗಿದೆ. ಸುತ್ತಲಿನ ಹಳ್ಳಿಗಳ ರೈತರಿಗೆ ಈ ಮಾರ್ಟ್‌ನಲ್ಲಿ ರಿಯಾಯಿತಿ ದರದಲ್ಲಿ ದಿನ ಬಳಕೆ ಮತ್ತು ಕೃಷಿ ಚಟುವಟಿಕೆಗೆ ಬೇಕಾಗುವ ಪರಿಕರಗಳನ್ನು ಮಾರಾಟ ಮಾಡಲಾಗುವುದು. ಈಗಾಗಲೇ ಕಂಪನಿಯಲ್ಲಿ 400 ಷೇರುದಾರರಿದ್ದು, ಅವರು ಖರೀದಿಸಿದ್ದ ಷೇರಿನ ಮೌಲ್ಯ ದ್ವಿಗುಣವಾಗಿದೆ. ಅವರಿಗೆ ಬಾಂಡ್‌ಗಳನ್ನು ವಿತರಿಸಲಾಗುತ್ತಿದ್ದು, ಮತ್ತಷ್ಟು ರೈತರು ಷೇರುದಾರರಾಗಿ ಹೆಸರು ನೋಂದಾಯಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ ಕಂಪನಿಯನ್ನು ಬೆಳೆಸುವಂತೆ ಕೋರಿದರು.
    ಎಬಿಐ ಬ್ಯಾಂಕ್‌ನ ಪ್ರಾದೇಶಿಕ ಅಧಿಕಾರಿ ಸಂಧ್ಯಾ ಮಾತನಾಡಿ, ಸಂಘವನ್ನು ಉತ್ತಮವಾಗಿ ವಹಿವಾಟು ಮಾಡಿಕೊಂಡರೆ ಬ್ಯಾಂಕ್‌ನಿಂದ ಒಂದು ಕೋಟಿ ರೂ. ಸಾಲ ನೀಡುವ ಮೂಲಕ ಉದ್ಯಮ ನಡೆಸಲು ಸಹಕಾರ ನೀಡಲಾಗುವುದು ಎಂದರು.
    ಸಿಇಒ ಮದನ್‌ಕುಮಾರ್ ಸಂಘದ ವಾರ್ಷಿಕ ವಹಿವಾಟಿನ ವರದಿ ಮಂಡಿಸಿದರು. ಷೇರುದಾರ ಸದಸ್ಯರಿಗೆ ಬಾಂಡ್ ವಿತರಣೆ ಮಾಡಲಾಯಿತು. ವ್ಯವಸ್ಥಾಪಕ ನಿರ್ದೇಶಕ ಸುರೇಶ್, ನಿರ್ದೇಶಕರಾದ ಯತೀಶ್, ರಾಜು, ಗುರುಶಾಂತ, ಡಿ.ಎಸ್.ಶಿವಕುಮಾರ್, ಪವನ್, ಬಸವರಾಜು, ಸಿದ್ದರಾಜು, ವಿಕಸನ ಸಂಸ್ಥೆಯ ಶರತ್‌ರಾಜು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts