More

    ಯಶ್ ಅಭಿಮಾನಿಗಳ ದಾರುಣ ಸಾವು; ವಿಷಯ ತಿಳಿಯುತ್ತಿದ್ದಂತೆ ಸೂರಣಗಿ ಗ್ರಾಮಕ್ಕೆ ತೆರಳುತ್ತಿರುವ ಯಶ್

    ಗದಗ: ಯಶ್ ಜನ್ಮದಿನದ ಅಂಗವಾಗಿ 20 ಅಡಿ ಬ್ಯಾನರ್ ಕಟ್ಟುವಾಗ ದಾರುಣವಾಗಿ ಸಾವನ್ನಪ್ಪಿದ ಮೂವರು ಯುವಕರ ಸಾಮೂಹಿಕ ಅಂತ್ಯಕ್ರಿಯೆ ಸೂರಣಗಿ ಗ್ರಾಮದಲ್ಲಿ ನಡೆದಿದೆ. ಅಭಿಮಾನಿಗಳ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಇದೀಗ ಯಶ್​​​ ಸೂರಣಗಿ ಗ್ರಾಮಕ್ಕೆ‌ ಭೇಟಿ ನೀಡುತ್ತಿದ್ದಾರೆ. ಸುದ್ದಿ ತಿಳಿದ ಯಶ್, ​​ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲೂಕಿನ ಸೂರಣಗಿ ಗ್ರಾಮಕ್ಕೆ‌ ಇಂದು ಸಂಜೆ 4ಗಂಟೆಗೆ ಭೇಟಿ ನೀಡಲಿದ್ದಾರೆ.

    ಯಶ್ ಜನ್ಮದಿನದ ಅಂಗವಾಗಿ 20 ಅಡಿ ಬ್ಯಾನರ್ ಕಟ್ಟುವಾಗ ಮೂವರು ಯುವಕರು ದಾರುಣವಾಗಿ ಸಾವನ್ನಪ್ಪಿರುವ ದುರಂತ ಘಟನೆ ಇಂದು ಬೆಳಕಿಗೆ ಬಂದಿದೆ. ನೀಲಗಿರಿ ತೋಪಕ್ಕೆ ಬ್ಯಾನರ್ ಕಟ್ಟಿ ಮೇಲೆತ್ತುವಾಗ ವಿದ್ಯುತ್ ತಗುಲಿ ಈ ಅನಾಹುತ ಸಂಭವಿಸಿದೆ.

    ಮೃತಪಟ್ಟ ಮೂವರು ಕೂಲಿ‌ ಕೆಲಸ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ. ಕಡು ಬಡತನದಲ್ಲೇ ಜೀವನ ಸಾಗಿಸುತ್ತಿದ್ದರು. ಸಿಕ್ಕ ಸಿಕ್ಕ ಕೆಲಸ ಮಾಡಿಕೊಂಡಿದ್ದರು. ಒಂದು ವೇಳೆ ಇವರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಕೊಂಡಿದ್ದರೆ ಕಾರ್ಮಿಕ ಇಲಾಖೆಯಿಂದ ಪರಿಹಾರ ಸಿಗುವ ಸಾಧ್ಯತೆಯಿದೆ.

    ಸದ್ಯ ಲಕ್ಷ್ಮೇಶ್ವರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಶಾಸಕ ಡಾ. ಚಂದ್ರು ಲಮಾಣಿ ಹಾಗೂ ಎಸ್ ಪಿ ನೇಮಗೌಡ ಭೇಟಿ ನೀಡಿದ್ದು, ವಿದ್ಯುತ್ ಅವಘಡದಿಂದ ಗಾಯಗೊಂಡವರ ಆರೋಗ್ಯ ವಿಚಾರಿಸಿದ್ದಾರೆ. ಜತೆಗೆ ಸರ್ಕಾರದಿಂದ ಪರಿಹಾರ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಗಾಯಾಳುಗಳ ಹೆಚ್ಚಿನ ಚಿಕಿತ್ಸೆಗಾಗಿ ಗದಗ ಜಿಲ್ಲಾ ಆಸ್ಪತ್ರೆಗೆ ಸಾಗಿಸಲು ವ್ಯವಸ್ಥೆ ಮಾಡಲಾಗುತ್ತಿದೆ.

    ಯಶ್​​ ಫ್ಯಾನ್ಸ್​​​ಗೆ ಕರೆಂಟ್ ಶಾಕ್: ಕಡು ಬಡತನದಲ್ಲೇ ಜೀವನ ಸಾಗಿಸುತ್ತಿದ್ದ ಮೂವರು ಯುವಕರು

    ರಾಕಿಂಗ್ ಸ್ಟಾರ್ ಯಶ್ ಜನ್ಮದಿನ: 20 ಅಡಿ ಬ್ಯಾನರ್ ಕಟ್ಟುವಾಗ ಅವಘಡ, ಮೂವರು ಯುವಕರು ಸಾವು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts