More

    ಲಾಕ್‌ಡೌನ್‌ನಿಂದ ಶುದ್ಧವಾದ ಯಮುನಾ ನದಿ

    ಡೆಹ್ರಾಡೂನ್: ಹಲವು ಸರ್ಕಾರಗಳು ಸುಮಾರು 25 ವರ್ಷಗಳಿಂದ ಈವರೆಗೆ 5 ಸಾವಿರ ಕೋಟಿಗೂ ಅಧಿಕ ಹಣ ಖರ್ಚು ಮಾಡಿ ನಿರಂತರ ಪ್ರಯತ್ನ ನಡೆಸಿದ್ದರೂ ಕೂಡ ಶುದ್ಧವಾಗದ ಯಮುನಾ ನದಿ ಕೇವಲ 60 ದಿನಗಳ ಲಾಕ್‌ಡೌನ್‌ನಿಂದಾಗಿ ಸಂಪೂರ್ಣ ತಿಳಿಯಾಗಿದೆ.

    ಏಳು ರಾಜ್ಯಗಳ ಮೂಲಕ ಹಾದು ಸುಮಾರು 1,400 ಕಿಮೀ ಹರಿಯುವ ಯಮುನಾ ನದಿ ತಟದಲ್ಲಿ ಸಾವಿರಾರು ಕೈಗಾರಿಕೆಗಳಿವೆ. ಇವುಗಳ ರಾಸಾಯನಿಕ ತ್ಯಾಜ್ಯ ಪ್ರತಿದಿನ ನದಿಗೆ ಸೇರುತ್ತಿತ್ತು.

    ಇದನ್ನೂ ಓದಿ: ಕೋಡೆಡ್ ಮೆಸೇಜ್ ಹೊತ್ತ ಪಾಕ್‌ನ ಗೂಢಚಾರಿ ಪಾರಿವಾಳ ವಶ!

    ಆದರೆ ಈಗ ಕೈಗಾರಿಕೆ, ವಾಣಿಜ್ಯ ಸೇರಿ ನದಿ ತಟದ ನಗರಗಳಲ್ಲಿ ಎಲ್ಲ ರೀತಿಯ ಚಟುವಟಿಕೆಗಳು ಕಳೆದ 60 ದಿನಗಳಿಂದ ಸ್ಥಗಿತವಾಗಿರುವ ಹಿನ್ನೆಲೆಯಲ್ಲಿ ಯಮುನಾ ನದಿ ಶುದ್ಧವಾಗಿದೆ.

    ವಲಸೆ ಹಕ್ಕಿಗಳು, ದೇಶಿಯ ಪಕ್ಷಿಗಳು ಈಗ ಯಮುನಾ ನದಿ ತಟದಲ್ಲಿ ಬೀಡು ಬಿಟ್ಟಿವೆ. ನದಿ ನೀರು ಎಷ್ಟು ತಿಳಿಯಾಗಿದೆಯೆಂದರೆ ಜಲಚರಗಳು ಕೂಡ ಬರಿಗಣ್ಣಿಗೆ ಕಾಣಸಿಗುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts