More

    ಶಿಕ್ಷಕರ ಸಮಸ್ಯೆ ಪರಿಹಾರಕ್ಕೆ ಯತ್ನ; ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಹೇಳಿಕೆ

    ಶಿಕ್ಷಣ ಸಚಿವರ ಜತೆ ಚರ್ಚೆ

    ಯಲಬುರ್ಗಾ: ಶಿಕ್ಷಕರ ಬೇಡಿಕೆ ಹಾಗೂ ಕುಂದುಕೊರತೆಗಳ ಬಗ್ಗೆ ಶಿಕ್ಷಣ ಸಚಿವರ ಜತೆ ಚರ್ಚಿಸಲಾಗಿದ್ದು, ಸಮಸ್ಯೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುತ್ತಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಕ್ಷರಿ ಹೇಳಿದರು.

    ಪಟ್ಟಣದ ಬುದ್ಧ ಬಸವ ಅಂಬೇಡ್ಕರ ಭವನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಂವಾದ, ಕರೊನಾ ಸೇನಾನಿಗಳು ಹಾಗೂ ರಾಜ್ಯ ಘಟಕದ ನೂತನ ಪದಾಧಿಕಾರಿಗಳ ಅಭಿನಂದನಾ ಸಮಾರಂಭ ಮತ್ತು ಸರ್ವ ಸದಸ್ಯರ ಸಾಮಾನ್ಯ ಸಭೆಗೆ ಚಾಲನೆ ನೀಡಿ ಮಾತನಾಡಿದರು. ಆರನೇ ವೇತನ ಆಯೋಗದ ಶಿಫಾರಸು ಅನುಷ್ಠಾನಕ್ಕೆ ಒತ್ತಾಯಿಸಿ ಈಗಾಗಲೇ ನೌಕರರ ಸಂಘದಿಂದ ಪ್ರತಿಭಟನೆ ನಡೆಸಲಾಗಿದೆ ಎಂದರು.

    ಸಂಘದ ಜಿಲ್ಲಾಧ್ಯಕ್ಷ ನಾಗರಾಜ ಜುಮ್ಮಣ್ಣವರ್ ಮಾತನಾಡಿ, ನೌಕರರು ನಾಗರಿಕ ಸೇವಾ ನಿಯಮಗಳ ಕುರಿತು ತಿಳಿಯಬೇಕಿದೆ. ವೇತನ ತಾರತಮ್ಯ, ಪದೋನ್ನತಿ ಸೇರಿದಂತೆ ವಿವಿಧ ವಿಚಾರಗಳಲ್ಲಿ ಮಲತಾಯಿ ಧೋರಣೆ ಆಗುತ್ತಿದೆ. ಸರಿಪಡಿಸಲು ಸರ್ಕಾರದ ಮೇಲೆ ಒತ್ತಡ ಹೇರಲಾಗುತ್ತಿದೆ ಎಂದರು.

    ತಾಲೂಕು ಅಧ್ಯಕ್ಷ ವೈ.ಜಿ.ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಬಿ.ಎಚ್.ವಂಕಟೇಶಯ್ಯ, ಪದಾಧಿಕಾರಿಗಳಾದ ಮೋಹನ್‌ಕುಮಾರ್, ವಿ.ಎಸ್.ಹರ್ಷ, ಎಸ್.ಸಿದ್ದೇಶ್ವರ, ಎಚ್.ಗಿರೇಗೌಡ, ಸುಶಿಲೇಂದ್ರ ರಾವ್ ದೇಶಪಾಂಡೆ, ತಹಸೀಲ್ದಾರ್ ಶ್ರೀಶೈಲ ತಳವಾರ್, ಪ್ರಾಚಾರ್ಯ ಶಿವರಾಜ ಗುರಿಕಾರ್, ಬಸವರಾಜ ಮೆಣಸಗಿ, ಗಾಳೆಪ್ಪ ಬಂಡಿಹಾಳ, ದೇವಪ್ಪ ಮುಗಳಿ, ಶೇಖರಗೌಡ ಪಾಟೀಲ್, ಪ್ರಕಾಶ ಚೂರಿ, ಶಿವಪುತ್ರಪ್ಪ ತಿಪ್ಪನಾಳ, ವೀರಣ್ಣ ಬಂಡ್ಯಾಳ, ಕೃಷ್ಣಾ ಪತ್ತಾರ, ಬಸವರಾಜ ಮೇಟಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts