More

    ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡಿ

    ಯಲಬುರ್ಗಾ: ರೈತರು ಬಿತ್ತನೆಗೂ ಮುನ್ನ ಬೀಜೋಪಚಾರ ಮಾಡಬೇಕೆಂದು ಕೃಷಿ ಇಲಾಖೆಯ ಪ್ರಭಾರ ಜಂಟಿ ನಿರ್ದೇಶಕ ಸಿದ್ದೇಶ್ವರ ಹೇಳಿದರು. ಸಮೀಪದ ಮಂಗಳೂರು ರೈತ ಸಂಪರ್ಕ ಕೇಂದ್ರ ವ್ಯಾಪ್ತಿಯ ಕುದರಿಮೋತಿಯಲ್ಲಿ ಶುಕ್ರವಾರ ಆಯೋಜಿಸಲಾಗಿದ್ದ ಬೀಜೋಪಚಾರ ಆಂದೋಲನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಮುಂಗಾರು ಹಂಗಾಮಿಗೆ ಬಿತ್ತನೆ ಬೀಜ ಮತ್ತು ಗೊಬ್ಬರಕ್ಕೆ ತೊಂದರೆಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಡಿಎಪಿ ಗೊಬ್ಬರವನ್ನು ನಿಗದಿಗಿಂತ ಹೆಚ್ಚಿನ ದರಕ್ಕೆ ಮಾರಾಟ ಮಾಡಿದರೆ, ರೈತರು ಹತ್ತಿರದ ರೈತ ಸಂಪರ್ಕ ಕೇಂದ್ರದ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು ಎಂದರು.

    ಫಸಲ್ ಬಿಮಾ ಯೋಜನೆಗೆ ಒಳಪಡುವ ಬೆಳೆಗಳ ಬಗ್ಗೆ ಹಾಗೂ ಕೃಷಿ ಇಲಾಖೆ ಯೋಜನೆಗಳ ಕುರಿತು ಎಲ್ಲ ರೈತರಿಗೆ ಕೃಷಿ ಸಂಜೀವಿನಿ ವಾಹನದ ಮೂಲಕ ಮಾಹಿತಿ ತಿಳಿಸಲಾಗುವುದು. ರೈತರು ವಿಮೆ ಹಾಗೂ ಸರ್ಕಾರದ ಯೋಜನೆಗಳ ಪ್ರಯೋಜನ ಪಡೆಯಬೇಕು ಎಂದು ಸಿದ್ದೇಶ್ವರ ತಿಳಿಸಿದರು. ಸಹಾಯಕ ಕೃಷಿ ನಿದೇರ್ಶಕ ನಿಂಗಣ್ಣ ಬಿರಾದಾರ್, ಬೀಜೋಪಚಾರದಲ್ಲಿ ಜೈವಿಕ ಗೊಬ್ಬರಗಳ ಬಳಸುವ ಪದ್ಧತಿ ಮತ್ತು ಅದರ ಮಹತ್ವದ ಬಗ್ಗೆ ತಿಳಿಸಿದರು. ಬೈಕ್ ಮೂಲಕ ಕುಂಟೆ ಹೊಡೆದು ಅಂತರ ಬೇಸಾಯದಲ್ಲಿ ತಾಂತ್ರಿಕತೆ ಅಳವಡಿಕೆ ಬಗ್ಗೆ ಪ್ರಾತ್ಯಕ್ಷಿಕೆ ನೀಡಿದ ರೈತ ರೈತ ಸುರೇಶ ಚೌಡ್ಕಿ ಬಗ್ಗೆ ಜಂಟಿ ನಿರ್ದೇಶಕ ಮೆಚ್ಚುಗೆ ವ್ಯಕಪಡಿಸಿದರು.

    ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಸಜ್ಜನ್, ಸಹಾಯಕ ಕೃಷಿ ನಿರ್ದೇಶಕ ಅಜ್ಮೀರ ಅಲಿ, ಕೃಷಿ ಅಧಿಕಾರಿ ಪ್ರತಾಪಗೌಡ ಕೊಂಡಗುರಿ, ಸಹಾಯಕ ತಾಂತ್ರಿಕ ವ್ಯವಸ್ಥಾಪಕ ಚನ್ನಬಸವನಗೌಡ, ಗ್ರಾಪಂ ಸದಸ್ಯರಾದ ರವಿ ಕಟಗಿ, ಪಂಪಾಪತಿ ವಣಗೇರಿ, ರೈತರಾದ ಸುರೇಶ ಚೌಡ್ಕಿ, ನಾಗಪ್ಪ ತಲ್ಲೂರು, ಫಕೀರಪ್ಪ ಗೊಬ್ಬಿ, ನಿಂಗಪ್ಪ ಮಂಗಳೂರು, ತಿಪ್ಪಣ್ಣ ಕೋಳಿಹಾಳ, ದೇವಪ್ಪ ಬೊಮ್ಮನಾಳ ಮತ್ತು ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts